‘ಮೈನೇ ಪ್ಯಾರ್‌ ಕಿಯಾ’ ಹಿಂದಿ ಸಿನಿಮಾ ಖ್ಯಾತಿಯ ನಟಿ ಭಾಗ್ಯಶ್ರೀ ಪುತ್ರಿ ಆವಂತಿಕಾ ದಾಸಾನಿ ‘ಮಿಥ್ಯಾ’ ವೆಬ್‌ ಸರಣಿ ಮೂಲಕ ಮನರಂಜನಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಸೈಕಾಲಾಜಿಕಲ್‌ ಥ್ರಿಲ್ಲರ್‌ – ಡ್ರಾಮಾ ಸರಣಿ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ.

ನಟಿ ಭಾಗ್ಯಶ್ರೀ ಪುತ್ರ ಅಭಿಮನ್ಯು ದಾಸಾನಿ 2018ರಲ್ಲಿ ‘ಮರ್ದ್‌ ಕೋ ದರ್ದ್‌ ನಹೀ ಹೋತಾ’ ಹಿಂದಿ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಈಗ ಅವರ ಪುತ್ರಿಯ ಸರದಿ. ಭಾಗ್ಯಶ್ರೀ ಪುತ್ರಿ ಆವಂತಿಕಾ ದಾಸಾನಿ ‘ಮಿಥ್ಯಾ’ ವೆಬ್‌ ಸರಣಿಯೊಂದಿಗೆ ಎಂಟರ್‌ಟೇನ್‌ಮೆಂಟ್‌ ಮೀಡಿಯಾಗೆ ಪದಾರ್ಪಣೆ ಮಾಡಿದ್ದಾರೆ. ರೋಹನ್‌ ಸಿಪ್ಪಿ ನಿರ್ದೇಶನದ ಸೈಕಾಲಾಜಿಕಲ್‌ ಥ್ರಿಲ್ಲರ್‌ – ಡ್ರಾಮಾ ‘ಮಿಥ್ಯಾ’ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ. ಆವಂತಿಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, ““Who really is responsible for this web of lies?! #Mithya coming soon on @zee5. Humbled, grateful and esctatic to announce my very first webseries!” ಎನ್ನುವ ಒಕ್ಕಣಿಯೊಂದಿಗೆ ನಟಿ ಹ್ಯೂಮಾ ಖುರೇಷಿ ಜೊತೆಗಿರುವ ‘ಮಿಥ್ಯಾ’ ಫಸ್ಟ್‌ಲುಕ್‌ ಶೇರ್‌ ಮಾಡಿದ್ದಾರೆ. “ಸವಾಲಿನ ಪಾತ್ರದ ಮೂಲಕ ಕ್ಯಾಮೆರಾ ಎದುರಿಸಿರುವುದು ಖುಷಿ ತಂದಿದೆ. ಅನುಭವಿ ಮತ್ತು ಪ್ರತಿಭಾವಂತ ತಂತ್ರಜ್ಞರು ಹಾಗೂ ಕಲಾವಿದರೊಂದಿಗೆ ಕೆಲಸ ಮಾಡಿರುವ ಸಂಭ್ರಮ ನನ್ನದು. ನನ್ನ ನಟನಾ ಅಭಿಯಾನ ಈ ರೀತಿ ಆರಂಭವಾಗದ್ದು, ನಾನು ಎಕ್ಸೈಟ್‌ ಆಗಿದ್ದೇನೆ” ಎನ್ನುತ್ತಾರೆ ಆವಂತಿಕಾ. ‘ಮಿಥ್ಯಾ’ ಸ್ಟ್ರೀಮಿಂಗ್‌ ದಿನಾಂಕ ಸದ್ಯದಲ್ಲೇ ಘೋಣೆಯಾಗಲಿದೆ.

Previous articleಸೈಕಾಲಾಜಿಕಲ್‌ ಥ್ರಿಲ್ಲರ್‌ ‘ಬೆಸ್ಟ್‌ ಸೆಲ್ಲರ್‌’; ಅಮೇಜಾನ್‌ ಪ್ರೈಮ್‌ನಲ್ಲಿ ಫೆ.18ರಿಂದ
Next articleಟ್ರೈಲರ್‌ | ಪಿಆರ್‌ಕೆ ನಿರ್ಮಾಣದ ‘ಒನ್‌ ಕಟ್‌ ಟೂ ಕಟ್‌’: ಪ್ರೈಮ್‌ನಲ್ಲಿ ಫೆ.3ರಿಂದ

LEAVE A REPLY

Connect with

Please enter your comment!
Please enter your name here