ಅಮೇಜಾನ್‌ ಪ್ರೈಮ್‌ ವೀಡಿಯೋ ಇಂದು ‘ಬೆಸ್ಟ್‌ ಸೆಲ್ಲರ್‌’ ಸೈಕಾಲಾಜಿಕಲ್‌ ಥ್ರಿಲ್ಲರ್‌ ಒರಿಜಿನಲ್‌ ಸರಣಿಯನ್ನು ಘೋಷಿಸಿದೆ. ಮಿಥುನ್‌ ಚಕ್ರವರ್ತಿ, ಶ್ರುತಿ ಹಾಸನ್‌, ಅರ್ಜನ್‌ ಬಾಜ್ವಾ, ಗೌಹರ್‌ ಖಾನ್‌, ಸತ್ಯಜಿತ್‌ ದುಬೆ, ಸೋನಾಲಿ ಕುಲಕರ್ಣಿ ಅಭಿನಯದ ಸರಣಿ ಫೆಬ್ರವರಿ 18ರಿಂದ ಸ್ಟ್ರೀಮ್‌ ಆಗಲಿದೆ.

ಮುಕುಲ್‌ ಅಭಯಂಕರ್‌ ನಿರ್ದೇಶನದ ಸೈಕಲಾಜಿಕಲ್‌ ಥ್ರಿಲ್ಲರ್‌ ‘ಬೆಸ್ಟ್‌ ಸೆಲ್ಲರ್‌’ ಅಮೇಜಾನ್‌ ಪ್ರೈಮ್‌ ವೀಡಿಯೋದಲ್ಲಿ ಫೆ.18ರಿಂದ ಸ್ಟ್ರೀಮ್‌ ಆಗಲಿದೆ. ಮಿಥುನ್‌ ಚಕ್ರವರ್ತಿ, ಶ್ರುತಿ ಹಾಸನ್‌, ಅರ್ಜನ್‌ ಬಾಜ್ವಾ, ಗೌಹರ್‌ ಖಾನ್‌, ಸತ್ಯಜಿತ್‌ ದುಬೆ, ಸೋನಾಲಿ ಕುಲಕರ್ಣಿ ಅಭಿನಯಿಸಿರುವ ಸರಣಿಗೆ ಅನ್ವಿತಾ ದತ್ತಾ ಮತ್ತು ಅಲ್ತಿಯಾ ಕೌಶಾಲ್‌ ಚಿತ್ರಕಥೆ ರಚಿಸಿದ್ದಾರೆ. ನಿರ್ಮಾಪಕರು ತಮ್ಮ ಈ ಸರಣಿಯನ್ನು ‘new-age nail-biting thriller’ ಎಂದು ಬಣ್ಣಿಸುತ್ತಾರೆ. ಪೋಸ್ಟರ್‌ನಲ್ಲಿ ನಟ ಮಿಥುನ್‌ ಚಕ್ರವರ್ತಿ ಸೋಫಾ ಮೇಲೆ ಕುಳಿತಿದ್ದು, ವಿಚಿತ್ರ ಎಕ್ಸ್‌ಪ್ರೆಷನ್‌ ನೀಡಿದ್ದಾರೆ. ನಟಿ ಶ್ರುತಿ ಹಾಸನ್‌ ಸಿಂಪಲ್‌ ಲುಕ್‌ನಲ್ಲಿ ನಿಂತಿದ್ದರೆ, ಗೌಹರ್‌ ಖಾನ್‌ ಮತ್ತು ಸತ್ಯಜೀತ್‌ ಅವರು ಶ್ರುತಿ ಹಿಂದೆ ನಿಂತಿದ್ದಾರೆ. ‘Yahan kitaab aur kirdar dono ki hai apni hi Kahani #BestsellerOnPrime, new series, Feb 18. soooo excited for this’ ಎಂದು ಗೌಹರ್‌ ಈ ಪೋಸ್ಟರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ.

ಸರಣಿ ನಿರ್ಮಿಸುತ್ತಿರುವ ಆಲ್ಕೆಮಿ ಪ್ರೊಡಕ್ಷನ್ಸ್‌ LLP ಸಿಇಓ ಸಿದ್ದಾರ್ಥ್‌ ಮಲ್ಹೋತ್ರಾ, ”ಬಹಳಷ್ಟು ಶ್ರಮವಹಿಸಿ ಈ ಸೈಕಾಲಾಜಿಕಲ್‌ ಥ್ರಿಲ್ಲರ್‌ ಕತೆ ಹೆಣೆದಿದ್ದೇವೆ. ಪ್ರತಿಭಾವಂತ ಕಲಾವಿದರು ಮತ್ತು ತಂತ್ರಜ್ಞರ ನೇತೃತ್ವದಲ್ಲಿ ಚಿತ್ರಕಥೆಗೆ ಮತ್ತಷ್ಟು ಮೆರುಗು ಸಿಗಲಿದೆ” ಎನ್ನುತ್ತಾರೆ. ಅಮೇಜಾನ್‌ ಪ್ರೈಮ್‌ ವೀಡಿಯೋ ಇಂಡಿಯಾದ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌ ಮಾತನಾಡಿ, “ಮನುಷ್ಯರ ಸಂಕೀರ್ಣ ವ್ಯಕ್ತಿತ್ವಗಳನ್ನು ಈ ಸರಣಿ ಅನಾವರಣಗೊಳಿಸಲಿದೆ. ವೀಕ್ಷಕರು ಇಲ್ಲಿನ ಪಾತ್ರಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲಿದ್ದಾರೆ” ಎಂದಿದ್ದಾರೆ. ಫೆಬ್ರವರಿ 18ರಿಂದ ಸರಣಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here