ಪುನೀತ್‌ ರಾಜಕುಮಾರ್‌ ಸಂಸ್ಥೆ ನಿರ್ಮಾಣದ ‘ಒನ್‌ ಕಟ್‌ ಟೂ ಕಟ್‌’ ಕನ್ನಡ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಡ್ಯಾನಿಷ್‌ ಸೇಠ್‌, ಪ್ರಕಾಶ್‌ ಬೆಳವಾಟಿ, ಸಂಪತ್‌ ಮೈತ್ರೇಯ ನಟನೆಯ ಸಿನಿಮಾ ಫೆಬ್ರವರಿ 3ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ಸದ್ದಿಲ್ಲದೆ ಚಿತ್ರೀಕರಣಗೊಂಡು ಸುದ್ದಿಯಾಗುತ್ತಿರುವ ಸಿನಿಮಾ ‘ಒನ್‌ ಕಟ್‌ ಟೂ ಕಟ್‌’. ಪುನೀತ್‌ ರಾಜಕುಮಾರ್‌ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನಿಂದ ಅಮೇಜಾನ್‌ ಪ್ರೈಮ್‌ ವೀಡಿಯೋಗೆ ನಿರ್ಮಾಣಗೊಂಡ ಸಿನಿಮಾ. ಡ್ಯಾನಿಷ್‌ ಸೇಠ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಡ್ಯಾನಿಷ್‌ ಆರ್ಟ್‌ ಅಂಡ್‌ ಕ್ರಾಫ್ಟ್‌ ಟೀಚರ್‌ ಪಾತ್ರದಲ್ಲಿ ನಟಿಸಿದ್ದು, ಕಾಮಿಡಿ – ಡ್ರಾಮಾ ಚಿತ್ರದ ಫ್ಲೇವರ್‌ ಟ್ರೈಲರ್‌ನ ಉದ್ದಕ್ಕೂ ಕಾಣಿಸುತ್ತದೆ. ವಂಶೀಧರ್‌ ಭೊಗರಾಜ್‌ ನಿರ್ದೇಶನದ ಸಿನಿಮಾದ ಇತರೆ ಪಾತ್ರಗಳಲ್ಲಿ ಡ್ಯಾನಿಷ್‌ ಶೇಟ್‌, ಪ್ರಕಾಶ್‌ ಬೆಳವಾಡಿ, ಸಂಯುಕ್ತ ಹೊರನಾಡು, ಸಂಪತ್‌ ಮೈತ್ರೇಯ ಅಭಿನಯಿಸಿದ್ದಾರೆ.

“ಇದೊಂದು ಲೈಟ್‌ ಹಾರ್ಟೆಡ್‌ ಕಾಮಿಡಿ. ನಾನು ಆರ್ಟ್‌ ಅಂಡ್‌ ಕ್ರಾಫ್ಟ್‌ ಟೀಚರ್‌ ಪಾತ್ರದಲ್ಲಿ ನಟಿಸಿದ್ದೇನೆ. ಟೆರರಿಸ್ಟ್‌ ಅಟ್ಯಾಕ್‌ನಿಂದ ಮಕ್ಕಳನ್ನು ಪಾರು ಮಾಡುವ ಸಂದರ್ಭದಲ್ಲಿ ನಡೆಯುವ ಘಟನಾವಳಿಗಳು ಚಿತ್ರದ ವಸ್ತು” ಎನ್ನುತ್ತಾರೆ ಚಿತ್ರದ ಹೀರೋ ಡ್ಯಾನಿಷ್‌ ಸೇಠ್‌. ಈ ಹಿಂದೆ ಪಿಆರ್‌ಕೆ ಬ್ಯಾನರ್‌ನ ‘ಫ್ರೆಂಚ್‌ ಬಿರಿಯಾನಿ’ ಚಿತ್ರದಲ್ಲಿ ಅವರು ನಟಿಸಿದ್ದರು. ಫೆಬ್ರವರಿ 3ರಂದು ‘ಒನ್‌ ಕಟ್‌ ಟೂ ಕಟ್‌’ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದ್ದು, ಮುಂದಿನ ದಿನಗಳಲ್ಲಿ ಪಿಆರ್‌ಕೆ ನಿರ್ಮಾಣದ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಮತ್ತು ‘ಫ್ಯಾಮಿಲಿ ಪ್ಯಾಕ್‌’ ಚಿತ್ರಗಳು ಸ್ಟ್ರೀಮ್‌ ಆಗಲಿವೆ.

Previous article‘ಮಿಥ್ಯಾ’ ವೆಬ್‌ ಸರಣಿ ಮೂಲಕ ನಟಿ ಭಾಗ್ಯಶ್ರೀ ಪುತ್ರಿ ಆವಂತಿಕಾ ನಟನೆಗೆ ಪದಾರ್ಪಣೆ
Next articleಶ್ರುತಿ ಹಾಸನ್‌ ಬರ್ತ್‌ಡೇ; ‘ಸಲಾರ್‌’ ಚಿತ್ರದಲ್ಲಿನ ನಟಿಯ ಫಸ್‌ಲುಕ್‌ ಪೋಸ್ಟರ್‌ ಬಿಡುಗಡೆ

LEAVE A REPLY

Connect with

Please enter your comment!
Please enter your name here