ನೀಲಾ ಮಾಧಬ್‌ ಪಾಂಡಾ ನಿರ್ದೇಶನದ ‘ದಿ ಜೆಂಗಬುರು ಕರ್ಸ್’ cli-fi ಹಿಂದಿ ಸರಣಿಯ ಟೀಸರ್‌ ರಿಲೀಸ್‌ ಆಗಿದೆ. ಇದು ಭಾರತದ ಮೊದಲ climate fiction. ಆಗಸ್ಟ್‌ 9ರಿಂದ ಸರಣಿ SonyLivನಲ್ಲಿ ಸ್ಟ್ರೀಮ್‌ ಆಗಲಿದೆ.

ಭಾರತದ ಮೊದಲ cli-fi (climate fiction) ‘ದಿ ಜೆಂಗಬುರು ಕರ್ಸ್’ (The Jengaburu Curse) ಥ್ರಿಲ್ಲರ್ ಹಿಂದಿ ಸರಣಿಯ ಮೊದಲ ಟೀಸರ್‌ ಅನಾವರಣಗೊಂಡಿದೆ. ಸರಣಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ನೀಲಾ ಮಾಧಬ್ ಪಾಂಡಾ ಬರೆದು ನಿರ್ದೇಶಿಸಿದ್ದಾರೆ. ಇದು ಆಗಸ್ಟ್‌ 9ರಿಂದ SonyLivನಲ್ಲಿ ಸ್ಟ್ರೀಮ್‌ ಆಗಲಿದೆ. ಒಡಿಶಾದ ಸಣ್ಣ ಪಟ್ಟಣದಲ್ಲಿ ಈ ಸರಣಿ ನಡೆದಿದ್ದು, ಲಂಡನ್ ಮೂಲದ ಹಣಕಾಸು ವಿಶ್ಲೇಷಕಿ ಪ್ರಿಯಾ ದಾಸ್ ಅವರ ಸುತ್ತ ಕಥೆ ಸುತ್ತುತ್ತದೆ. ಆಕೆಯ ತಂದೆ ಪ್ರೊಫೆಸರ್ ದಾಸ್ ನಿಗೂಢವಾಗಿ ಕಣ್ಮರೆಯಾಗುತ್ತಾರೆ. ಆಗ ಪ್ರಿಯಾ ಒಡಿಶಾಗೆ ಬರಲೇಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅವಳು ತನ್ನ ತಂದೆಯ ಸಾವಿನ ಕಾರಣವನ್ನು ಹುಡುಕ ಹೊರಟಾಗ ವಿಚಿತ್ರವಾದ ಘಟನೆಗಳು ಸಂಭವಿಸುತ್ತವೆ. ಆಗ ಸ್ಥಳೀಯ ಬೊಂಡಿಯಾ ಬುಡಕಟ್ಟು ಮತ್ತು ಒಡಿಶಾದ ಗಣಿಗಾರಿಕೆ ರಾಜ್ಯಗಳ ನಡುವಿನ ಸಂಶಯಾಸ್ಪದ ನಂಟನ್ನು ಸರಣಿ ತೆರೆದಿಡುತ್ತದೆ. ಈ ಸರಣಿಯು ನೀಲಾ ಮಾಧಬ್ OTTಯ ಚೊಚ್ಚಲ ಪ್ರವೇಶವಾಗಿದ್ದು, ಇದು ಪರಿಸರದ ಮೇಲೆ ನಡೆಯುತ್ತಿರುವ ಮಾನವನ ದಾಳಿ ಮತ್ತು ಮನುಷ್ಯ ತನ್ನ ಮಿತಿಮೀರಿದ ಆಸೆಗಳಿಂದಾಗಿ ಪ್ರಕೃತಿ ನಾಶ ಮಾಡುತ್ತಿರುವುದು ಮತ್ತು ಇದರಿಂದ ತಾನು ಎದುರಿಸುತ್ತಿರುವ ದುಷ್ಪರಿಣಾಮಗಳ ಕುರಿತಾದ ಅಂಶಗಳನ್ನು ಒಳಗೊಂಡಿದೆ.

ಸರಣಿ ಕುರಿತು ನಿರ್ದೇಶಕ ನೀಲಾ ಮಾಧಬ್ ಪಾಂಡಾ, ‘ಈ ಸರಣಿಯ ಮೂಲಕ ಪರಿಸರ ಸಂರಕ್ಷಣೆ ಮಾಡುವುದು ಮತ್ತು ನಿಸರ್ಗದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸುವುದು ನಮ್ಮ ಗುರಿಯಾಗಿದೆ. ಪ್ರತಿಭಾವಂತ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಒಟ್ಟುಗೂಡಿಸಿದ್ದಕ್ಕಾಗಿ ನಾವು ಹೆಮ್ಮೆಪಡುತ್ತೇವೆ ಮತ್ತು ಈ ರೋಮಾಂಚನಕಾರಿ ಯಾನಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೇವೆ’ ಎನ್ನುತ್ತಾರೆ. Studio Next ನಿರ್ಮಿಸಿರುವ ಈ ಸರಣಿಗೆ ಮಯಾಂಕ್ ತಿವಾರಿ ಛಾಯಾಗ್ರಹಣ ಮಾಡಿದ್ದು, ಅಲೋಕಾನಂದ ದಾಸ್‌ಗುಪ್ತ ಸಂಗೀತ ಸಂಯೋಜಿಸಿದ್ದಾರೆ. ಫರಿಯಾ ಅಬ್ದುಲ್ಲಾ, ನಾಸರ್, ಮಕರಂದ್ ದೇಶಪಾಂಡೆ, ಸುದೇವ್ ನಾಯರ್, ದೀಪಕ್ ಸಂಪತ್ ಮತ್ತು ಹಿತೇಶ್ ದವೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here