ಶರಣ್‌ ನಟನೆಯ ‘ಅವತಾರ ಪುರುಷ 2’ ಸಿನಿಮಾದ RAP ಸಾಂಗ್‌ ಬಿಡುಗಡೆಯಾಗಿದೆ. ಕೊನೆಯ ಹಂತದಲ್ಲಿ ಚಿತ್ರಕ್ಕೆ ಈ ಹಾಡನ್ನು ಅಳವಡಿಸಲಾಗಿದೆ ಎನ್ನುವುದು ವಿಶೇಷ. ಅಭಿನಂದನ್ ಕಶ್ಯಪ್ ಸಂಗೀತ ನೀಡಿರುವ ಈ ಗೀತೆಯನ್ನು ಬಿಜ್ಜು ಅವರು ರಚಿಸಿ, ಹಾಡಿದ್ದಾರೆ. ಔರಾ ಮತ್ತು ಸಂಗೀತ ಸಂಯೋಜಕ ಅಭಿನಂದನ್‌ ಕಶ್ಯಪ್‌ ಕೂಡ ಹಾಡಿಗೆ ದನಿಯಾಗಿದ್ದಾರೆ.

ಸಿಂಪಲ್ ಸುನಿ ನಿರ್ದೇಶನ, ಶರಣ್ ಹೀರೋ ಆಗಿ ನಟಿಸಿರುವ ‘ಅವತಾರ ಪುರುಷ 2’ ಚಿತ್ರದಿಂದ ‘ಇವನೇ ಅವತಾರ ಪುರುಷ’ ಎಂಬ RAP ಸಾಂಗ್‌ ಬಿಡುಗಡೆಯಾಗಿದೆ. ಅಭಿನಂದನ್ ಕಶ್ಯಪ್ ಸಂಗೀತ ನೀಡಿರುವ ಈ ಗೀತೆಯನ್ನು ಬಿಜ್ಜು ಅವರು ರಚಿಸಿ, ಹಾಡಿದ್ದಾರೆ. ನಿರ್ದೇಶಕರು ಈ ಕುರಿತು ಮಾತನಾಡಿ, ‘ನಿರ್ಮಾಪಕರು ಈ ಹಾಡನ್ನು ಮಾಡೋಣ ಎಂದು ಪಟ್ಟು ಹಿಡಿದರು. ಕೆಲವೇ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣವಾಯಿತು. ಶಿಶುನಾಳ ಶರೀಫರ ‘ತರವಲ್ಲ ತಗಿ ನಿನ್ನ ತಂಬೂರಿ’ ಹಾಡಿನ ಮೊದಲ ಸಾಲಿನಿಂದ ಈ ಹಾಡು ಆರಂಭವಾಗುತ್ತದೆ. RAP ಕ್ಷೇತ್ರದಲ್ಲಿ ತಮ್ಮದೇ ಚಾಪು ಮೂಡಿಸಿರುವ ಬಿಜ್ಜು ಈ ಹಾಡನ್ನು ಬರೆದಿದ್ದಾರೆ. ಬಿಜ್ಜು, ಔರಾ ಹಾಗೂ ಸಂಗೀತ ನಿರ್ದೇಶಕ ಅಭಿನಂದನ್ ಕಶ್ಯಪ್ ಹಾಡಿದ್ದಾರೆ. ನಟಿ ಸಾತ್ವಿಕ ಕೂಡ ಈ ಹಾಡಿನಲ್ಲಿಅಭಿನಯಿಸಿದ್ದಾರೆ. ಏಪ್ರಿಲ್ 5 ರಂದು ಚಿತ್ರ ತೆರೆಗೆ ಬರಲಿದೆ’ ಎಂದರು.

ಮೊದಲು ‘ಅವತಾರ ಪುರುಷ2’ ಬಿಡುಗಡೆ ದಿನಾಂಕ ಮಾರ್ಚ್ 22ಕ್ಕೆ ನಿಗಧಿಯಾಗಿತ್ತು. ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟು ಸಿನಿಮಾ ಈಗ ಏಪ್ರಿಲ್ 5ರಂದು ಬಿಡುಗಡೆಯಾಗುತ್ತಿದೆ. ‘ಆ ದಿನಗಳಲ್ಲಿ ಸಾಲುಸಾಲು ರಜೆ ಇರುವುದರಿಂದ ಈ ನಿರ್ಧಾರ ಮಾಡಿದ್ದೇವೆ. ಈ ಸಮಯದಲ್ಲಿ ಒಂದು ಹಾಡು ಮಾಡೋಣ ಎನಿಸಿತು. ನಿರ್ದೇಶಕರು ಬೇಡ ಎಂದರು. ನಂತರ ಅವರನ್ನು ಒಪ್ಪಿಸಿದೆವು. ಈಗ ಹಾಡು ಸಿದ್ದವಾಗಿ ಬಿಡುಗಡೆಯಾಗಿದೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

ಹೀರೋ ಶರಣ್‌ ಈ ಬಗ್ಗೆ ಮಾತನಾಡಿ, ‘ನನ್ನ ಯಾವುದೇ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ಮುನ್ನ ಕೆಲವು ದಿನಗಳ ಅಭ್ಯಾಸ ಮಾಡುತ್ತೇನೆ. ಈ ಹಾಡನ್ನು ತಕ್ಷಣ ಚಿತ್ರೀಕರಣ ಮಾಡೋಣ ಎಂದಾಗ ಹೂ ಅಂದುಬಿಟ್ಟೆ. ನಂತರ ಅಭ್ಯಾಸವಿಲ್ಲದೆ ತಕ್ಷಣ ಚಿತ್ರೀಕರಣ ಹೇಗೆ ಮಾಡುವುದು ಹೇಗೆ ಅಂದುಕೊಂಡು, ನಿರ್ಮಾಪಕರನ್ನು ಕೇಳಿದೆ. ಅವರು ನನಗೆ ಈ ಹಾಡಿನಲ್ಲಿ ಹೆಚ್ಚು ಕುಣಿಯುವುದು ಇಲ್ಲ ಅಂದರು. ಹಾಡುತ್ತಿರುವುದು ಬಿಜ್ಜು‌ ಹಾಗೂ ತಂಡದವರು ಎಂದು ತಿಳಿಸಿದರು. ಆಗ ನನಗೆ ಧೈರ್ಯ ಬಂತು. ಕಡಿಮೆ ಅವಧಿಯಲ್ಲಿ ಚಿತ್ರೀಕರಣವಾದರೂ ಈ ಹಾಡು ತುಂಬಾ ಚೆನ್ನಾಗಿ ಬಂದಿದೆ’ ಎಂದರು. ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯ ಚಿತ್ರದ ಇತರೆ ಪ್ರಮುಖ ಕಲಾವಿದರು.

LEAVE A REPLY

Connect with

Please enter your comment!
Please enter your name here