ಅಭಿಜಿತ್‌ ಮಹೇಶ್‌ ನಿರ್ದೇಶನದ ‘ಬ್ಯಾಚುಲರ್‌ ಪಾರ್ಟಿ’ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ರಕ್ಷಿತ್‌ ಶೆಟ್ಟಿ ಅವರ Paramvah Studios ಬ್ಯಾನರ್‌ ಅಡಿ ತಯಾರಾಗುತ್ತಿರುವ ಚಿತ್ರದ ಪ್ರಮುಖ ಪಾತ್ರಗಳಲ್ಲಿ ದಿಗಂತ್‌, ಯೋಗಿ ಮತ್ತು ಅಚ್ಯುತ್‌ ಕುಮಾರ್‌ ನಟಿಸಿದ್ದಾರೆ.

‘ಕಿರಿಕ್ ಪಾರ್ಟಿ’ ಚಿತ್ರದ ಬರಹಗಾರ ಅಭಿಜಿತ್ ಮಹೇಶ್ ನಿರ್ದೇಶಿಸುತ್ತಿರುವ ‘ಬ್ಯಾಚುಲರ್‌ ಪಾರ್ಟಿ’ ಸಿನಿಮಾದ ಮೋಷನ್‌ ಫೋಸ್ಟರ್‌ ಬಿಡುಗಡೆಯಾಗಿದೆ. ಈಗಾಗಲೇ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿರುವ ಅಭಿಜಿತ್ ಇದೀಗ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಚಿತ್ರದ ಪೋಸ್ಟರ್‌ನಲ್ಲಿದ್ದಾರೆ. ಅದರ ಹಿನ್ನೆಲೆಯಲ್ಲಿ ಬ್ಯಾಂಕಾಕ್‌ನ ಕೆಲವು ಸ್ಥಳಗಳನ್ನೂ ಕಾಣಬಹುದು. ವೀಲ್‌ಚೇರ್‌ನಲ್ಲಿ ಅಚ್ಯುತ್ ಕುಳಿತುಕೊಂಡಿದ್ದರೆ, ಅವರ ಹಿಂದೆ ಯೋಗಿ, ದಿಗಂತ್ ಓಡಿ ಬರುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ.

ವಿಶೇಷವೆಂದರೆ ಈ ಪೋಸ್ಟರ್‌ ಅನ್ನು ಹ್ಯಾಂಡ್‌ಸ್ಕೆಚ್ ಮೂಲಕ ವಿನ್ಯಾಸ ಮಾಡಲಾಗಿದೆ. ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿದ್ದ ‘ಕಿರಿಕ್ ಪಾರ್ಟಿ’ ತೆರೆಕಂಡು ಏಳು ವರ್ಷಗಳು ಕಳೆದಿವೆ. ಅದರ ಯಶಸ್ಸಿನ ಬಳಿಕ ಇಡೀ ತಂಡದ ಸದಸ್ಯರು ಬೇರೆ ಬೇರೆ ಯಶಸ್ವೀ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಆ ರೀತಿಯ ಯೂತ್ ಕಾಮಿಡಿ ಸ್ಟೋರಿ ಮತ್ತೊಂದು ಬರಲಿಲ್ಲವಲ್ಲ ಎಂಬ ಕೊರಗನ್ನು ನೀಗಿಸಲು ಮತ್ತದೇ ಬರಹಗಾರರ ತಂಡ ಸಜ್ಜಾಗಿದೆ. ಅವರೀಗ ‘ಬ್ಯಾಚುಲರ್ ಪಾರ್ಟಿ’ ಕೊಡಲು ಸಜ್ಜಾಗಿದ್ದಾರೆ. Paramvah Studios ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಚಿತ್ರ ನಿರ್ಮಿಸುತ್ತಿದ್ದಾರೆ. ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here