ಡಾಲಿ ಧನಂಜಯ ಈಗ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಷ್ಟೇ ಅಲ್ಲ, ಪರಭಾಷೆಯ ಚಿತ್ರಗಳಲ್ಲೂ ಧನಂಜಯ ಮಿಂಚಲಿದ್ದಾರೆ. ಅವರ ‘ರತ್ನನ್ ಪ್ರಪಂಚ’ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗುವುದಾಗಿ ಮೊನ್ನೆಯಷ್ಟೇ ಸುದ್ದಿ ಸಿಕ್ಕಿತು. ಈಗ ಅವರ ಇನ್ನೊಂದು ಚಿತ್ರದ ಬಿಡುಗಡೆಯ ಸರದಿ.

ಧನಂಜಯ ಅವರ ‘ರತ್ನನ್ ಪ್ರಪಂಚ’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗದೇ ಓಟಿಟಿಯಲ್ಲಿ ಬಿಡುಗಡೆ ಆಗುತ್ತದೆ ಎಂದಾಗ ಅನೇಕರು ಹುಬ್ಬೇರಿಸಿದ್ದರು. ಆದರೆ ಅದು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರ ನಿರ್ಧಾರ ಆಗಿತ್ತು ಅನ್ಸುತ್ತೆ. ಹೀಗೆ ಅನ್ನಿಸೋದಕ್ಕೆ ಕಾರಣ ಧನಂಜಯ ಅವರ ‘ಬಡವ ರಾಸ್ಕಲ್’ ಚಿತ್ರ. ಹೌದು, ‘ಬಡವ ರಾಸ್ಕಲ್’ ಓಟಿಟಿಗೆ ಹೋಗದೆ ಚಿತ್ರಮಂದಿರಗಳಲ್ಲೇ ದರ್ಶನ ನೀಡಲಿದ್ದಾನೆ. ಇದೇ ವರ್ಷದ ಡಿಸೆಂಬರ್ 24ರ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ‘ಬಡವ ರಾಸ್ಕಲ್’ ಚಿತ್ರಮಂದಿರಗಳಲ್ಲೇ ಬಿಡುಗಡೆ ಆಗಲಿದೆ ಎಂದು ಧನಂಜಯ ಅನೌನ್ಸ್ ಮಾಡಿದ್ದಾರೆ. ಈ ವಿಷಯವನ್ನು ಧನಂಜಯ ಯಾಕೆ ಅನೌನ್ಸ್ ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತು. ಯಾಕಂದ್ರೆ ‘ಬಡವ ರಾಸ್ಕಲ್’ ಚಿತ್ರದ ನಿರ್ಮಾಪಕರು ಸ್ವತಃ ಧನಂಜಯ ಅವರೇ. ಹಾಗಾಗಿ ತಮ್ಮ ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವ ನಿರ್ಧಾರ ಅವರದ್ದು. ಹಾಗಾಗಿ ಡಾಲಿ ಅಭಿಮಾನಿಗಳಿಗೆ ‘ರತ್ನನ್ ಪ್ರಪಂಚ’ ಮಿಸ್ ಆದ್ರೂ ಚಿತ್ರಮಂದಿರಗಳಲ್ಲಿ ‘ಬಡವ ರಾಸ್ಕಲ್’ ಆ ಕೊರತೆಯನ್ನು ನೀಗಿಸಲಿದ್ದಾನೆ.

ಶಂಕರ್ ಗುರು ನಿರ್ದೇಶನದ ‘ಬಡವ ರಾಸ್ಕಲ್’ ಚಿತ್ರದಲ್ಲಿ ಧನಂಜಯ್ ಅವರ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಅಭಿನಯಿಸಿದ್ದಾರೆ. ಕೆಆರ್‌ಜಿ ಸ್ಟುಡಿಯೋ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ಇನ್ನು ಧನಂಜಯ ಅವರ ಬಹುಭಾಷಾ ಚಿತ್ರ ‘ಪುಷ್ಪಾ’ ತೆಲುಗು ಸಿನಿಮಾ ಕೂಡ ಬಿಡುಗಡೆಯ ಹಾದಿಯಲ್ಲಿದೆ. ಇದರ ಜೊತೆಗೆ ಧನಂಜಯ, ‘ಟಗರು’ ನಂತರ ಮತ್ತೊಮ್ಮೆ ಶಿವರಾಜ್ ಕುಮಾರ್ ಅವರ ಜೊತೆಗೆ ಅಭಿನಯಿಸಿರೋ ‘ಭೈರಾಗಿ’ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ.

Previous articleಹೃದಯಕ್ಕೆ ಸನಿಹ; ಸಹನೀಯ, ಕೊಂಚ ಸಿನಿಮೀಯ
Next articleಫೋಟೊ ಫೀಚರ್ | ಮಿನರ್ವ ಮಿಲ್‌ನಲ್ಲಿ ‘ಕಬ್ಜ’; ಉಪೇಂದ್ರ, ನವಾಬ್ ಷಾ ಭಾಗಿ

LEAVE A REPLY

Connect with

Please enter your comment!
Please enter your name here