ಧನಂಜಯ ಅಭಿನಯದ ‘ಬಡವ ರಾಸ್ಕಲ್‌’ ಸಿನಿಮಾದ ‘ಆಗಾಗ ನೆನಪಾಗುತ್ತಾಳೆ, ಕಣ್ಣೀರಿಗೆ ನೆಪವಾಗುತ್ತಾಳೆ’ ಹಾಡು ಬಿಡುಗಡೆಯಾಗಿದೆ. ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿ ಹಾಡಿರುವ ಗೀತೆಯಿದು. ನಟ ಧನಂಜಯ ಅವರೇ ಈ ಗೀತೆ ರಚನೆಕಾರ ಎನ್ನುವುದು ವಿಶೇಷ.

‘ಆಗಾಗ ನೆನಪಾಗುತ್ತಾಳೆ, ಕಣ್ಣೀರಿಗೆ ನೆಪವಾಗುತ್ತಾಳೆ…’ ಬಿಡುಗಡೆಯಾಗಿದೆ. ಧನಂಜಯ ನಟನೆಯ ‘ಬಡವ ರಾಸ್ಕಲ್‌’ ಚಿತ್ರದ ಪ್ಯಾಥೋ ಸಾಂಗ್ ಇದು. ಹೀರೋ ಧನಂಜಯ ಅವರೇ ರಚಿಸಿರುವ ಈ ಗೀತೆಗೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಪ್ರಿಯತಮೆಯ ನೆನಪಿನಲ್ಲಿ ಸಾಗುವ ಹಾಡನ್ನು ಬೆಂಗಳೂರಿನ ಕೆ.ಆರ್‌.ಮಾರ್ಕೆಟ್‌, ಮೆಟ್ರೋ ಸ್ಟೇಷನ್‌ ಸೇರಿದಂತೆ ಪ್ರಮುಖ ಸರ್ಕಲ್‌ಗಳಲ್ಲಿ ಚಿತ್ರಿಸಿದ್ದಾರೆ. ಬಹುಪಾಲು ಚಿತ್ರೀಕರಣ ಮಧ್ಯರಾತ್ರಿ ನಡೆದಿದ್ದು, ಛಾಯಾಗ್ರಹಣ ಹಿತವಾಗಿದೆ. ಇಂಪಾದ ಸಂಗೀತದ ಹಾಡು ಆಪ್ತವೆನಿಸುತ್ತದೆ. ‘ಬಡವ ರಾಸ್ಕಲ್‌’ ಚಿತ್ರದಲ್ಲಿ ಧನಂಜಯ್ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಅಭಿನಯಿಸಿದ್ದಾರೆ. ಈ ಸಿನಿಮಾ ತೆಲುಗಿಗೂ ಡಬ್ ಆಗುತ್ತಿದ್ದು, ಹಾಡಿನ ತೆಲುಗು ಅವತರಣಿಕೆಯೂ ಬಿಡುಗಡೆಯಾಗಿದೆ.

ಕೆಆರ್‌ಜಿ ಸ್ಟುಡಿಯೋ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ಧನಂಜಯ ಅವರ ‘ರತ್ನನ್ ಪ್ರಪಂಚ’ ಅಮೆಜಾನ್‌ ಪ್ರೈಮ್‌ ಓಟಿಟಿಯಲ್ಲಿ ನೇರವಾಗಿ ಸ್ಟ್ರೀಮ್ ಆಗಿತ್ತು. ಇನ್ನು ಅವರು ಖಳಪಾತ್ರದಲ್ಲಿ ನಟಿಸಿರುವ ‘ಪುಷ್ಪಾ’ ತೆಲುಗು ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆಗೆ ಧನಂಜಯ, ‘ಟಗರು’ ನಂತರ ಮತ್ತೊಮ್ಮೆ ಶಿವರಾಜ್ ಕುಮಾರ್ ಅವರ ಜೊತೆಗೆ ಅಭಿನಯಿಸಿರೋ ‘ಭೈರಾಗಿ’ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ.

Previous articleಟ್ರೈಲರ್ | ಪ್ಯಾಂಟಸಿ ಡ್ರಾಮಾ ‘ಮಾನಾಡು’; ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿ ಸಿಂಬು
Next articleರಾಣಿ ಮುಖರ್ಜಿ ಹಿಂದಿ ಸಿನಿಮಾ ಪಯಣಕ್ಕೆ 25 ವರ್ಷ; ವಯಸ್ಸಿನ ಗುಟ್ಟು ಬಿಟ್ಟು ಕೊಡಬೇಡಿ ಎಂದ ‘ಬಬ್ಲಿ’ ನಟಿ

LEAVE A REPLY

Connect with

Please enter your comment!
Please enter your name here