ಬಾಲಿವುಡ್ ನಟಿ ರಾಣಿ ಮುಖರ್ಜಿ ಹಿಂದಿ ಸಿನಿಮಾ ಪಯಣಕ್ಕೆ ಇದೀಗ 25 ವರ್ಷಗಳ ಸಂಭ್ರಮ. ನಟಿಯರು ಎಂದಿಗೂ ತಮ್ಮ ವಯಸ್ಸಿನ ಗುಟ್ಟು ಬಿಟ್ಟುಕೊಡಬೇಡಿ ಎಂದು ಅವರು ಸಲಹೆ ನೀಡಿದ್ದಾರೆ.

ರಾಣಿ ಮುಖರ್ಜಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಕೂಡಲೇ ಯಶಸ್ಸಿನ ಮೆಟ್ಟಿಲೇರಿದರು. ಕೆಲ ವರ್ಷ ಬಾಲಿವುಡ್‌ನ ಮುಂಚೂಣಿ ನಾಯಕನಟಿಯಾಗಿದ್ದರು. ನಂತರ ಫಿಲಂ ಮೇಕರ್‍ ಆದಿತ್ಯ ಚೋಪ್ರಾರನ್ನು ವಿವಾಹವಾಗಿ, ಕೆಲ ವರ್ಷಗಳ ಕಾಲ ಸಿನಿಮಾ ನಟನೆಯಿಂದ ದೂರ ಉಳಿದರು. ವಾಪಸು ಬೆಳ್ಳಿತೆರೆಗೆ ಮರಳಿದ ನಂತರ ಅವರ ಸೆಕೆಂಡ್‍ ಇನ್ನಿಂಗ್ಸ್ ಯಶಸ್ವಿಯಾಗಿ ಸಾಗುತ್ತಿದೆ. ‘ಹಿಚ್ಕಿ’, ‘ಮರ್ದಾನಿ’ ಇದಕ್ಕೆ ಉತ್ತಮ ಉದಾಹರಣೆ. 25 ವರ್ಷಗಳ ಸಿನಿ ಜರ್ನೀ ಖುಷಿಯಲ್ಲಿರುವ ರಾಣಿ, “ಎರಡೂವರೆ ದಶಕಗಳ ಸಿನಿಮಾ ಜರ್ನಿಯಲ್ಲಿ ಹಲವು ಸವಾಲಿನ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಇದು ವೈಯಕ್ತಿಕವಾಗಿ ನನಗೆ ಅತ್ಯಂತ ಖುಷಿಯ ಸಂಗತಿ.  ನಟಿಯರು ವಯಸ್ಸಿನ ಗುಟ್ಟು ಬಿಟ್ಟುಕೊಡದಂತೆ ತೆರೆ ಮೇಲೆ ಕಾಣಿಸಿಕೊಳ್ಳಬೇಕು” ಎಂದಿದ್ದಾರೆ.

ಬೆಂಗಾಲಿ ಬೆಡಗಿ ರಾಣಿ ಮುಖರ್ಜಿಯ 25ನೇ ವರ್ಷದ ಹಿಂದಿ ಸಿನಿಮಾ ಪಯಣದಲ್ಲಿ ‘ಬಂಟಿ ಔರ್ ಬಬ್ಲಿ’ ಚಿತ್ರ ಇವರಿಗೆ ಒಳ್ಳೆಯ ನೇಮ್ ಮತ್ತು ಫೇಮ್‌ ತಂದುಕೊಟ್ಟಿತ್ತು. ಈಗ ಮತ್ತೇ ಬಂಟಿ-ಬಬ್ಲಿಯಾಗಿ ಸೈಫ್‌ ಅಲಿ ಖಾನ್‌ ಮತ್ತು ರಾಣಿ  ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಜೋಡಿ ಬಂಟಿ-ಬಬ್ಲಿಯಾಗಿ ಹಾಡೊಂದರಲ್ಲಿ ಸಖತ್ ಸ್ಟೆಪ್ ಹಾಕಿದ್ದು, ಆಗಿನ ಎನರ್ಜಿ ಮತ್ತು ಜೋಶ್‍ಇವರಲ್ಲಿ ಇನ್ನೂ ಹಾಗೆಯೇ ಇದೆ ಎನ್ನುತ್ತಾರೆ ಚಿತ್ರರಸಿಕರು. ‘ಬಂಟಿ ಔರ್ ಬಬ್ಲಿ 2’ ಚಿತ್ರದಲ್ಲಿ ಕೆಲಸ ಮಾಡಿದ್ದು ತಮಗೆ ತುಂಬಾ ಖುಷಿ ಕೊಟ್ಟಿದೆ. ಮುಂದೆ ಇನ್ನೂ ಅನೇಕ ಸಿನಿಮಾಗಳನ್ನು ಮಾಡುವುದಕ್ಕೆ ಪ್ರೋತ್ಸಾಹ ಸಿಕ್ಕಿದೆ” ಎಂದು ಸಂದರ್ಶನವೊಂದರಲ್ಲಿ ರಾಣಿಮುಖರ್ಜಿ ಹೇಳಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here