ಪ್ರಬಲ ದೇವಮಾನವನ ವಿರುದ್ಧ ವಾದ ಮಾಡುವ ವಕೀಲನ ಪಾತ್ರದಲ್ಲಿ ಮನೋಜ್‌ ಬಾಜಪೈ ಕಾಣಿಸಿಕೊಂಡಿದ್ದಾರೆ. ಸಂಕಷ್ಟಕ್ಕೀಡಾದ ಅಪ್ರಾಪ್ತ ವಯಸ್ಕ ಯುವತಿಗೆ ನ್ಯಾಯ ಒದಗಿಸಬೇಕೆಂದು ಹೋರಾಡುವ ಸನ್ನಿವೇಶಗಳನ್ನು ಟ್ರೈಲರ್‌ ಒಳಗೊಂಡಿದೆ. ಮೇ 23ರಿಂದ ZEE5ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

ಮನೋಜ್ ಬಾಜಪೈ ಅಭಿನಯದ ನೈಜ ಘಟನೆಯಾಧಾರಿತ ‘ಬಂದಾ’ ಹಿಂದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ZEE5 ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಎರಡು ನಿಮಿಷಗಳ ವೀಡಿಯೋವನ್ನು ಹಂಚಿಕೊಂಡಿದ್ದು, ಟ್ರೈಲರ್‌ನಲ್ಲಿ ಮನೋಜ್ ಒಬ್ಬ ಪ್ರಬಲ ದೇವಮಾನವನ ವಿರುದ್ಧ ವಾದ ಮಾಡುವ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆತನಿಂದ ಸಂಕಷ್ಟಕ್ಕೀಡಾದ ಅಪ್ರಾಪ್ತ ವಯಸ್ಕ ಯುವತಿಗೆ ನ್ಯಾಯ ಒದಗಿಸಬೇಕೆಂದು ಹೋರಾಡುವ ಸನ್ನಿವೇಶಗಳನ್ನು ಟ್ರೈಲರ್‌ ಒಳಗೊಂಡಿದೆ. ಸತ್ಯವನ್ನು ಸಾಬೀತು ಮಾಡಿ ದೇವಮಾನವನಿಗೆ ಶಿಕ್ಷೆ ಕೊಡಿಸುವುದು ವಕೀಲನ ಅಂತಿಮ ಗುರಿ.

ಆ್ಯಕ್ಷನ್ – ಥ್ರಿಲ್ಲರ್ ಜೊತೆಗೆ ಚಿತ್ರದಲ್ಲಿ ಎಮೋಷನ್‌ ಸನ್ನಿವೇಶಗಳೂ ಇವೆ. ಸಿರ್ಫ್ ಏಕ್ ಬಂದಾ ಕಾಫಿ ಹೈ (ಕೇವಲ ಒಬ್ಬ ವ್ಯಕ್ತಿ ಸಾಕು) ಒಂದು ಅಸಾಮಾನ್ಯ ಪ್ರಕರಣದ ವಿರುದ್ಧ ಹೋರಾಡಲು ಎಂದು ಮನೋಜ್‌ ಹೊರಟಿದ್ದಾನೆ! ‘ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಹಲ್ಲೆಗೈದ ಆರೋಪದಲ್ಲಿ ಪ್ರಬಲ ದೇವಮಾನವನ ವಿರುದ್ಧ ಗೆಲುವು ಸಿಗುವುದೇ? ಇಲ್ಲವೇ ವಕೀಲ ಬಲಿಪಶುವಾಗುವನೇ?’ ಎಂಬ ಶೀರ್ಷಿಕೆಯೊಂದಿಗೆ ಟ್ರೈಲರ್‌ ಹಂಚಿಕೊಳ್ಳಲಾಗಿದೆ. ದೀಪಕ್‌ ಕಿಂಗ್ರಾಣಿ ರಚಿಸಿ, ಅಪೂರ್ವ ಸಿಂಗ್‌ ಕರ್ಕಿ ನಿರ್ದೇಶಿಸಿ, ವಿನೋದ್‌ ಭಾನುಶಾಲಿ ಸಿನಿಮಾ ನಿರ್ಮಿಸಿದ್ದಾರೆ. ಮೇ 23ರಿಂದ ZEE5ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here