ಓಂ ರಾವುತ್‌ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಆದಿಪುರುಷ್‌’ ಟ್ರೈಲರ್‌ ಬಿಡುಗಡೆಯಾಗಿದೆ. ಪರಿಣಾಮಕಾರಿ VFX, ಅದ್ಧೂರಿ ಯುದ್ಧದ ಸನ್ನಿವೇಶಗಳೊಂದಿಗೆ ಟ್ರೈಲರ್‌ ಗಮನಸೆಳೆಯುತ್ತದೆ.

ಬಹುನಿರೀಕ್ಷಿತ ‘ಆದಿಪುರುಷ್‌’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಕಳೆದ ವರ್ಷ ರಿಲೀಸ್‌ ಆಗಿದ್ದ ಚಿತ್ರದ ಟೀಸರ್‌ಗೆ ಟೀಕೆಗಳು ವ್ಯಕ್ತವಾಗಿದ್ದವು. ಪಾತ್ರಗಳ ಚಿತ್ರಣದ ಬಗ್ಗೆ ಹಾಗೂ ಕಳಪೆ VFX ಎಂದು ಸಿನಿಪ್ರಿಯರು ಕಟಕಿಯಾಡಿದ್ದರು. ಹಾಗಾಗಿ ತಪ್ಪುಗಳನ್ನು ಸರಿಪಡಿಸಲು ನಿರ್ಮಾಪಕರು ಚಿತ್ರದ ಬಿಡುಗಡೆ ಮುಂದೂಡಿದ್ದರು. ಈಗ ಟ್ರೈಲರ್‌ ಬಿಡುಗಡೆಯಾಗದ್ದು ತಪ್ಪುಗಳು ತಕ್ಕಮಟ್ಟಿಗೆ ಸರಿಯಾಗಿರುವುದು ಕಂಡುಬರುತ್ತದೆ. ಮಹಾಕಾವ್ಯ ರಾಮಾಯಣ ಆಧರಿಸಿದ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್‌, ಸೀತೆಯಾಗಿ ಕೃತಿ ಸನೂನ್‌, ರಾವಣನಾಗಿ ಸೈಫ್‌ ಅಲಿ ಖಾನ್‌ ಇದ್ದಾರೆ. ಟೀಸರ್‌ ಬಿಡುಗಡೆಯಾದಾಗ ಸೈಫ್‌ರ ರಾವಣನ ಪಾತ್ರದ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಹಾಗಾಗಿ ಟ್ರೈಲರ್‌ನಲ್ಲಿ ಈ ಪಾತ್ರಕ್ಕೆ ಸ್ಕ್ರೀನ್‌ ಸ್ಪೇಸ್‌ ಕಡಿಮೆಯಾಗಿದೆ!

ಹನುಮನ ನಿರೂಪಣೆಯೊಂದಿಗೆ ಟ್ರೈಲರ್‌ ಶುರುವಾಗುವುದು ವಿಶೇಷ. ರಾಮನ ವನವಾಸ, ಸೀತೆಯ ಅಪಹರಣ, ಲಂಕೆಗೆ ಸೇತುವೆ ಹಾಕುವ ದೃಶ್ಯಗಳ ಪರಿಕಲ್ಪನೆ ಸೊಗಸಾಗಿದೆ. ಟ್ರೈಲರ್‌ನ ದ್ವಿತಿಯಾರ್ಧ ಬಹುತೇಕ ಯುದ್ಧದ ಸನ್ನಿವೇಶಗಳಿಂದ ಕೂಡಿದೆ. ಲಕ್ಷ್ಮಣನಾಗಿ ಸನ್ನಿ ಸಿಂಗ್‌ ಮತ್ತು ಹನುಮನಾಗಿ ದೇವದತ್ತ ನಾಗೆ ನಟಿಸಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಜೂನ್‌ 16ರಂದು ಸಿನಿಮಾ ತೆರೆಕಾಣಲಿದೆ. ‘ಸೈರಾಟ್‌’ ಸಿನಿಮಾ ಖ್ಯಾತಿಯ ಅಜಯ್‌ – ಅತುಲ್‌ ‘ಆದಿಪುರುಷ್‌’ಗೆ ಸಂಗೀತ ಸಂಯೋಜಿಸಿದ್ದಾರೆ. Tribeca film festivalನಲ್ಲಿ ಜೂನ್‌ 13ರಂದು ಸಿನಿಮಾ ಪ್ರದರ್ಶನಗೊಳ್ಳಲಿದೆ.

Previous article‘ಬಂದಾ’ ಟ್ರೈಲರ್‌ | ನೈಜ ಘಟನೆಯಾಧಾರಿತ ಹಿಂದಿ ಸಿನಿಮಾ
Next article‘ಖುಷಿ’ ಲಿರಿಕಲ್‌ ವೀಡಿಯೊ | ವಿಜಯ್‌ ದೇವರಕೊಂಡ ಬರ್ತ್‌ಡೇ ಗಿಫ್ಟ್‌!

LEAVE A REPLY

Connect with

Please enter your comment!
Please enter your name here