ಪ್ರಿಯಾನ್ಶು ಚಟರ್ಜಿ ನಟಿಸಿರುವ ‘ಬರುನ್‌ ರಾಯ್‌ ಅಂಡ್‌ ದಿ ಹೌಸ್‌ ಆನ್‌ ದಿ ಕ್ಲಿಫ್‌’ ಸೈಕಲಾಜಿಕಲ್‌ ಹಾರರ್‌ ಸರಣಿ Eros Now ನಲ್ಲಿ ಜನವರಿ 28ರಿಂದ ಸ್ಟ್ರೀಮ್‌ ಆಗಲಿದೆ. ಆರು ಎಪಿಸೋಡ್‌ಗಳ ಸರಣಿಯನ್ನು ಎರೊಸ್‌ ಇಂಟರ್‌ನ್ಯಾಷನಲ್‌ ಮತ್ತು ಯೂನಿಕಾರ್ನ್‌ ಮೋಷನ್‌ ಪಿಕ್ಚರ್ಸ್‌ ನಿರ್ಮಿಸಿವೆ.

ಟ್ರೈಲರ್‌ ಮೂಲಕ ಸಾಕಷ್ಟು ಕುತೂಹಲ ಸೃಷ್ಟಿಸಿದ್ದ ‘ಬರುನ್‌ ರಾಯ್‌ ಅಂಡ್‌ ದಿ ಹೌಸ್‌ ಆನ್‌ ದಿ ಕ್ಲಿಫ್‌’ ಸರಣಿಯ ಸ್ಟ್ರೀಮಿಂಗ್‌ ದಿನಾಂಕ ಘೋಷಣೆಯಾಗಿದೆ. ಈ ಸೈಕಲಾಜಿಕಲ್‌ ಹಾರರ್‌ ಸೀರೀಸ್‌ ಜನವರಿ 28ರಿಂದ Eros Now ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಎಪ್ಪತ್ತರ ದಶಕದ ಕಾಲಘಟ್ಟದ ಕತೆ ಯುವದಂಪತಿ ಹರ್ಮೇಶ್‌ – ಸೌಮಿಲಿ ಹಾಗೂ ಪ್ಯಾರಾಸೈಕಾಲಜಿಸ್ಟ್‌ ಬರುನ್‌ ರಾಯ್‌ ಸುತ್ತ ಸುತ್ತುತ್ತದೆ. ತಮ್ಮ ಡ್ರೀಮ್‌ ಹೌಸ್‌ ಪ್ರವೇಶಿಸುವ ಯುವದಂಪತಿ ಮನೆಯಲ್ಲಿನ ಪ್ಯಾರಾನಾರ್ಮಲ್‌ ಚಟುವಟಿಕೆಗಳಿಂದ ಎದೆಗುಂದುತ್ತಾರೆ. ಈ ಪ್ರದೇಶದಲ್ಲಿನ ಆತ್ಮಹತ್ಯೆಗಳು, ಪ್ರೇತಾತ್ಮಗಳ ಕತೆಗೆ ಪ್ಯಾರಾಸೈಕಾಲಜಿಸ್ಟ್‌ ಬರುನ್‌ ರಾಯ್‌ ಪ್ರವೇಶದೊಂದಿಗೆ ತಿರುವು ಸಿಗುತ್ತದೆ. ಓಟಿಟಿ ಪ್ಲಾಟ್‌ಫಾರ್ಮ್‌ಗಳ ಜನಪ್ರಿಯ ಹಾರರ್‌ – ಥ್ರಿಲ್ಲರ್‌ ಜಾನರ್‌ನ ಸರಣಿ ಆರು ಎಪಿಸೋಡ್‌ಗಳಲ್ಲಿ ಸ್ಟ್ರೀಮ್‌ ಆಗಲಿದೆ. 2001ರ ರೊಮ್ಯಾಂಟಿಕ್‌ – ಡ್ರಾಮಾ ಸಿನಿಮಾ ʼತುಮ್‌ ಬಿನ್‌ʼ ಖ್ಯಾತಿಯ ನಟ ಪ್ರಿಯಾನ್ಶು ಚಟರ್ಜಿ ಸರಣಿಯಲ್ಲಿ ʼಬರುನ್‌ ರಾಯ್‌ʼ ಪಾತ್ರದಲ್ಲಿದ್ದಾರೆ. ಸ್ಯಾಮ್‌ ಭಟ್ಟಾಚಾರ್ಜೀ ಸರಣಿ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಸಿದ್‌ ಮಕ್ಕರ್‌, ನೈರಾ ಬ್ಯಾನರ್ಜಿ, ಟೋನಿ ರಿಚರ್ಡ್‌ಸನ್‌, ಜಾರ್ಜ್‌ ಡಾಸನ್‌, ಎಮ್ಮಾ ಗಲ್ಲಿಯಾನೊ ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Previous articleತ್ರಿಕೋನ ಪ್ರೇಮಕತೆಯ ‘ಸುಮನ್‌’; ಧರ್ಮ ಕೀರ್ತಿರಾಜ್‌ ಸಿನಿಮಾದ ಆಡಿಯೋ ಬಿಡುಗಡೆ
Next articleಹಳ್ಳಿ ಹೈದನಾಗಿ ಅಜಯ್‌; ತೆರೆಗೆ ಬರಲು ಸಿದ್ಧವಾದ ‘ಶೋಕಿವಾಲ’

LEAVE A REPLY

Connect with

Please enter your comment!
Please enter your name here