ನಟ ರಾಣಾ ದಗ್ಗುಬಾಟಿ ನಿರ್ಮಾಣದ ‘ಮಾಯಾಬಜಾರ್‌ for sale’ ತೆಲುಗು ವೆಬ್‌ ಸರಣಿ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ನವದೀಪ್ ಪಲ್ಲಪೋಲು, ಈಶಾ ರೆಬ್ಬಾ, ನರೇಶ್ ವಿಜಯ ಕೃಷ್ಣ, ಹರಿ ತೇಜ ನಟಿಸಿದ್ದಾರೆ. ಏಳು ಸಂಚಿಕೆಗಳ ಸರಣಿ ಜುಲೈ 14ರಿಂದ ಸ್ಟ್ರೀಮ್‌ ಆಗಲಿದೆ.

ZEE5 ಹೊಸ ತೆಲುಗು ವೆಬ್ ಸರಣಿ ‘ಮಾಯಾ ಬಜಾರ್ for sale’ ಅನ್ನು ಘೋಷಿಸಿದೆ. ಇದು ಐಶಾರಾಮಿ ಸಮುದಾಯಗಳ ಕುಟುಂಬಗಳ ಸುತ್ತ ಸುತ್ತುವ ವಿಡಂಬನಾತ್ಮಕ ಕಥಾಹಂದರ. ತೆಲುಗು ನಟ ರಾಣಾ ದಗ್ಗುಬಾಟಿ ಅವರ ಸ್ಪಿರಿಟ್‌ ಮೀಡಿಯಾ ಬ್ಯಾನರ್‌ನಡಿ ತಯಾರಾಗಿದೆ. ಏಳು ಸಂಚಿಕೆಗಳ ಸರಣಿ ಜುಲೈ 14ರಿಂದ ಸ್ಟ್ರೀಮ್‌ ಆಗಲಿದೆ. ಟ್ರೈಲರ್‌ನಲ್ಲಿ ಕೌಟುಂಬಿಕ ಕತೆ ಕಾಣಿಸುತ್ತದೆ. ಅವಿಭಕ್ತ ಕುಟುಂಬ ವ್ಯವಸ್ತೆಯನ್ನು ಆರಿಸಿಕೊಳ್ಳುವ ಪೇಸ್ಟ್ರಿ, ಗಾಂಧಿ, ಹಿಪ್ಪೀಸ್, ಬ್ಯಾಚುಲರ್ಸ್ ಮತ್ತು ಲವ್ವಿ-ಡವ್ವಿ ದಂಪತಿಗಳು ‘ಮಾಯಾ ಬಜಾರ್’ ಎಂಬ ಗೇಟೆಡ್ ಸಮುದಾಯದಲ್ಲಿ ಐಷಾರಾಮಿ ಮನೆಗಳಿಗೆ (ವಿಲ್ಲಾ) ತೆರಳುತ್ತಾರೆ. ಅಲ್ಲಿ ಅವರು ಕಾನೂನು ಬಾಹಿರವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ನೆಲಕ್ಕುರುಳಿಸುವಂತೆ ಸರ್ಕಾರ ಆದೇಶ ಹೊರಡಿಸುತ್ತದೆ. ಸರ್ಕಾರದ ಈ ಘೋಷಣೆಯಿಂದಾಗಿ ಅವರು ವೈಯಕ್ತಿಕ ಜೀವನದಲ್ಲಿ ಎದುರಿಸುವ ಸವಾಲುಗಳು ಮತ್ತು ಪಾತ್ರಗಳು ಅನುಭವಿಸುವ ಸಂಕಟ, ಸಮಸ್ಯೆಗಳನ್ನು ತಿಳಿಹಾಸ್ಯದೊಂದಿಗೆ ನಿರೂಪಿಸಲಾಗಿದೆ. ಗೌತಮಿ ಚಳ್ಳಗುಳ್ಳ ನಿರ್ದೇಶನದ ಸರಣಿಯಲ್ಲಿ ನವದೀಪ್ ಪಲ್ಲಪೋಲು, ಈಶಾ ರೆಬ್ಬಾ, ನರೇಶ್ ವಿಜಯ ಕೃಷ್ಣ, ಹರಿ ತೇಜ, ಝಾನ್ಸಿ ಲಕ್ಷ್ಮಿ, ಮೇಯಾಂಗ್ ಚಾಂಗ್, ಸುನೈನಾ ಮತ್ತು ಕೋಟಾ ಶ್ರೀನಿವಾಸ್ ರಾವ್ ಅಭಿನಯಿಸಿದ್ದಾರೆ.

Previous articleಕ್ಲಿನ್‌ ಕಾರಾ ಕೊನಿಡೇಲಾ | ಮೊಮ್ಮಗಳ ಹೆಸರನ್ನು ಟ್ವೀಟ್‌ ಮಾಡಿದ ನಟ ಚಿರಂಜೀವಿ
Next articleಇಂಡಿಯನ್‌ ಸಿನಿಮಾಗಳ ಬಗ್ಗೆ ದಕ್ಷಿಣ ಕೊರಿಯಾ Rapper Ok Taec-yeon ಒಲವು

LEAVE A REPLY

Connect with

Please enter your comment!
Please enter your name here