ಬಾಲಿವುಡ್‌ನಲ್ಲಿ ಇನ್ನೊಬ್ಬರ ಬಗ್ಗೆ ಕಾಲೆಳೆದು ಅವರ ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸ ಮಾಡುವ ಹಲವು ಸೆಲೆಬ್ರಿಟಿಗಳಿದ್ದಾರೆ. ಈ ಪಟ್ಟಿಯಲ್ಲಿ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಹೆಸರೂ ಇದೆ. ಆದರೆ ಈಗ ಅವರ ಇತ್ತೀಚಿನ ಮಾತುಗಳನ್ನು ಕೇಳಿದಾಗ ಕರಣ್ ಜೋಹರ್ ಬದಲಾಗಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ.

ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ತಮ್ಮ ಮುಂಬರುವ ಕಾಮಿಡಿ ಚಿತ್ರದ ಬಗ್ಗೆ ಮಾತನಾಡುತ್ತಾ, “ನನಗೆ ಮಾತನಾಡಲು ಬಹಳಷ್ಟು ವಿಷಯಗಳಿವೆ. ಆದರೆ ಎಲ್ಲವನ್ನೂ ಹೇಳಿಕೊಳ್ಳಲು ಆಗುವುದಿಲ್ಲ. ಇನ್ನು ಮುಂದೆ ನಾನು ಇನ್ನೊಬ್ಬರನ್ನು ಆಡಿಕೊಳ್ಳಲು ಬಯಸುವುದಿಲ್ಲ. ಕೇವಲ ಚಲನಚಿತ್ರ ನಿರ್ಮಾಣದತ್ತ ಮಾತ್ರ ಗಮನ ಹರಿಸಲು ಬಯಸುತ್ತೇನೆ” ಎಂದಿದ್ದಾರೆ. ಜನರನ್ನು ಆಡಿಕೊಂಡದ್ದು, ಅವಹೇಳನ ಮಾಡಿದ್ದು ಸಾಕು ಎನ್ನುವ ಮೂಡ್‌ನಲ್ಲಿದ್ದಾರವರು. ಸದ್ಯಕ್ಕೆ ಅವರು ಅಮೆಜಾನ್ ಪ್ರೈಮ್ ವಿಡಿಯೋದ ಮುಂಬರುವ ಸರಣಿ ‘ಒನ್ ಮೈಕ್ ಸ್ಟ್ಯಾಂಡ್: ಸೀಸನ್ 2’ ಭಾಗವಾಗಿದ್ದಾರೆ. ಈಗ ತಮ್ಮ ಶಕ್ತಿಯನ್ನು ಸಿನಿಮಾ ಮಾಡುವತ್ತ ಮಾತ್ರ ವ್ಯಯಿಸುವುದಾಗಿ ಹೇಳಿದ್ದಾರೆ.

ಈ ಹಿಂದೆ, ಕರಣ್ ಜೋಹರ್ ಕೆಲವು ಸಂದರ್ಭಗಳಲ್ಲಿ ವಿವಾದಗಳ ಮಧ್ಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಅವರ ಟಾಕ್ ಶೋ, ಕಾಫಿ ವಿಥ್ ಕರಣ್‌ನಲ್ಲಿ ಅವರು ಮತ್ತು ಶೋ ಅತಿಥಿಗಳು ನೀಡಿದ ವಿವಾದಾತ್ಮಕ ಹೇಳಿಕೆಗಳು ಸುದ್ದಿಯಾಗಿದ್ದವು. ಈಗ ಬಂದ್ ಆಗಿರುವವ ಎಐಬಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಅದಕ್ಕಾಗಿ ಅವರು ಕಾನೂನು ಸಮಸ್ಯೆಯಲ್ಲಿಯೂ ಸಿಲುಕಿಕೊಂಡಿದ್ದರು. ಈಗ ಕರಣ್ ಅದಕ್ಕೆಲ್ಲಾ ಫುಲ್‌ಸ್ಟಾಪ್‌ ಇಡಲು ನಿರ್ಧರಿಸಿದ್ದಾರೆ.

LEAVE A REPLY

Connect with

Please enter your comment!
Please enter your name here