‘King Richard’ನಿಂದ ನಾಮನಿರ್ದೇಶನಗೊಂಡ ‘Be Alive’ ಸಾಂಗ್‌ ಹಾಡಲಿದ್ದಾರೆ ಬಿಯಾನ್ಸ್‌. ಜೇಮ್ಸ್‌ ಬಾಂಡ್‌ ಸಿನಿಮಾ ‘No Time To Die’ ಶೀರ್ಷಿಕೆ ಗೀತೆಗೆ ಬಿಲ್ಲೀ ಎಲಿಷ್‌ ತಂಡ ಪರ್ಫಾರ್ಮ್‌ ಮಾಡಲಿದೆ.

ಭಾನುವಾರದ ಆಸ್ಕರ್‌ ಸಮಾರಂಭದಲ್ಲಿ ಬಿಯಾನ್ಸ್‌, ಬಿಲ್ಲೀ ಎಲಿಷ್‌ ಸೇರಿದಂತೆ ಅತ್ಯುತ್ತಮ ಒರಿಜಿನಲ್‌ ಸಾಂಗ್‌ಗೆ ನಾಮನಿರ್ದೇಶನಗೊಂಡಿರುವ ಇತರೆ ಸಂಗೀತಗಾರರು ಪರ್ಫಾರ್ಮ್‌ ಮಾಡಲಿದ್ದಾರೆ. ‘King Richard’ನಿಂದ ನಾಮನಿರ್ದೇಶನಗೊಂಡ ‘Be Alive’ ಸಾಂಗ್‌ ಹಾಡಲಿದ್ದಾರೆ ಬಿಯಾನ್ಸ್‌. ಜೇಮ್ಸ್‌ ಬಾಂಡ್‌ ಸಿನಿಮಾ ‘No Time To Die’ ಶೀರ್ಷಿಕೆ ಗೀತೆಗೆ ಬಿಲ್ಲೀ ಎಲಿಷ್‌ ತಂಡ ಪರ್ಫಾರ್ಮ್‌ ಮಾಡಲಿದೆ. ‘Encanto’ದಿಂದ ನಾಮನಿರ್ದೇಶನಗೊಂಡಿರುವ ‘Dos Oruguitas’ ಹಾಡಿಗೆ Sebastian Yatra ಪರ್ಫಾರ್ಮ್‌ ಮಾಡಲಿದ್ದು, ‘Four Good Days’ ಸಿನಿಮಾದ ‘Somehow You Do’ ಸಾಂಗ್‌ ಹಾಡಲಿದ್ದಾರೆ Reba McEntire.

ಅಕಾಡೆಮಿ ಸಂಪ್ರದಾಯದಂತೆ, The original song ಅಕಾಡೆಮಿ ಪ್ರಶಸ್ತಿ ಹಾಡಿದವರಿಗೆ ಸಿಗದೆ ಹಾಡು ರಚಿಸಿದವರಿಗೆ ಲಭಿಸುವುದು. ಈ ವಿಭಾಗದಲ್ಲಿ ಯಾರೇ ಪ್ರಶಸ್ತಿ ಗಳಿಸಿದರೂ ಅದು ಅವರಿಗಿದು ಮೊದಲ ಆಸ್ಕರ್‌ ಗೌರವ. 28 ಗ್ರ್ಯಾಮಿ ಪ್ರಶಸ್ತಿ ಪಡೆದಿರುವ ಗಾಯಕಿ ಬಿಯಾನ್ಸ್‌ ಅವರು Dixson ಜೊತೆಗೂಡಿ ‘Be Alive’ ಗೀತೆ ರಚಿಸಿದ್ದಾರೆ. ಈ ಬಾರಿಯ ನಾಮನಿರ್ದೇಶನವನ್ನು ಲೆಕ್ಕ ಹಾಕಿದರೆ Warren ಅವರಿಗೆ ಇದು 13ನೇ ನಾಮಿನೇಷನ್‌. ಅವರಿಗಿನ್ನೂ ಆಸ್ಕರ್‌ ಅದೃಷ್ಟ ಒಲಿದಿಲ್ಲ. ‘Dos Oruguitas’ಗೆ ಆಸ್ಕರ್‌ ಲಭಿಸಿದರೆ Miranda ಅವರು Emmy, Grammy ಮತ್ತು Oscar ಗೆದ್ದ ‘EGOT’ ಎಲೈಟ್‌ ಕ್ಲಬ್‌ಗೆ ಸೇರ್ಪಡೆಯಾಗಲಿದ್ದಾರೆ.

LEAVE A REPLY

Connect with

Please enter your comment!
Please enter your name here