ಕೆ.ಪಿ.ಎನ್‌.ಚೌವ್ಹಾಣ್‌ ನಿರ್ದೇಶನದಲ್ಲಿ ಬಹುಭಾಷಾ ನಟ ಸುಮನ್‌ ಮುಖ್ಯಪಾತ್ರದಲ್ಲಿ ನಟಿಸಿರುವ ‘ಸೇವಾ ದಾಸ್‌’ ಬಂಜಾರ ಸಿನಿಮಾ ಏಪ್ರಿಲ್‌ 1ರಂದು ತೆರೆಕಾಣುತ್ತಿದೆ. ಬಂಜಾರ ಸಮುದಾಯದವರು ಭಾರತದ ಹಲವೆಡೆ ನೆಲೆಸಿದ್ದು, ದೇಶದ ಇನ್ನಿತರೆಡೆಯೂ ಸಿನಿಮಾ ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ.

ಕನ್ನಡ ಸೇರಿದಂತೆ ಹತ್ತು ಭಾಷೆಗಳಲ್ಲಿ ನಟಿಸಿರುವ ಬಹಭಾಷಾ ನಟ ಸುಮನ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಸೇವಾ ದಾಸ್’ ಬಂಜಾರ ಚಿತ್ರ ಏಪ್ರಿಲ್ 1ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆ ಪೂರ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಸುಮನ್‌, “ನಾನು ಚಿತ್ರರಂಗಕ್ಕೆ ಬಂದು ನಲವತ್ತು ವರ್ಷ ಕಳೆದಿದೆ.‌ ಈವರೆಗೆ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ಇದೇ ಮೊದಲ ಬಾರಿಗೆ ಬಂಜಾರ ಚಿತ್ರದಲ್ಲಿ ನಟಿಸಿದ್ದೇನೆ. ಸಂತ ಸೇವಾಲಾಲ್ ಅವರ‌ ಕೃಪೆಯಿಂದ ಉತ್ತಮ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಸಿನಿಮಾ ತೆರೆಕಾಣುತ್ತಿದ್ದು, ನಿಮ್ಮ ಹಾರೈಕೆಯಿರಲಿ” ಎಂದರು ನಟ ಸುಮನ್.‌ ಕೆ.ಪಿ.ಎನ್ ಚೌವ್ಹಾಣ್‌ ಈ ಚಿತ್ರ ನಿರ್ದೇಶಿಸಿದ್ದಾರೆ.

“ಬಂಜಾರ ಭಾಷೆ ಮಾತನಾಡುವ ಜನ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ವಾಸವಾಗಿದ್ದಾರೆ. ಈಗ‌ ವಿದೇಶದಲ್ಲೂ ನೆಲೆಸಿದ್ದಾರೆ. ನಮ್ಮ ಜನಾಂಗದ ಶಕ್ತಿಯಾಗಿರುವ ಸಂತ ಸೇವಾಲಾಲ್ ಅವರ ಕೃಪೆಯಿಂದ ಇದೇ ಮೊದಲ ಬಾರಿಗೆ ಈ ಚಿತ್ರವನ್ನು ಭಾರತದ ವಿವಿಧೆಡೆ ಬಿಡುಗಡೆ ಮಾಡುತ್ತಿದ್ದೇವೆ.‌ ವಿದೇಶದಲ್ಲೂ ‘ಸೇವಾ ದಾಸ್’ ಬಿಡುಗಡೆಯಾಗುತ್ತಿದೆ” ಎಂದರು ಚಿತ್ರದ ನಿರ್ಮಾಪಕ‌ ಸೀತಾರಾಂ ಬಡಾವತ್. ಬಂಜಾರ ಸಮುದಾಯದ ಸದ್ಗುರುಗಳು, ಮುಖಂಡರು, ಚಿತ್ರದ ಸಹನಿರ್ಮಾಪಕ ವಿನೋದ್ ರೈನಾ, ಚಿತ್ರದ ಕಲಾವಿದರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Connect with

Please enter your comment!
Please enter your name here