ಅಪೂರ್ವ ಸಿಂಗ್ ಕರ್ಕಿ ನಿರ್ದೇಶನದ ‘ಭಯ್ಯಾ ಜಿ’ ಹಿಂದಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಮನೋಜ್ ಬಾಜಪೇಯಿ ಮುಖ್ಯಪಾತ್ರದಲ್ಲಿ ನಟಿಸಿರುವ ಸಿನಿಮಾ ಇದೇ ಮೇ 24ರಂದು ತೆರೆಕಾಣಲಿದೆ. ‘ಕೊಹ್ರಾ’ ಸಿನಿಮಾ ಖ್ಯಾತಿಯ ಸುವಿಂದರ್ ವಿಕ್ಕಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮನೋಜ್ ಬಾಜಪೇಯಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಭಯ್ಯಾ ಜಿ’ ಹಿಂದಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ಅಪೂರ್ವ ಸಿಂಗ್ ಕರ್ಕಿ ನಿರ್ದೇಶಿಸಿದ್ದಾರೆ. ಟೀಸರ್, ಮನೋಜ್ ಭಾಜಪೇಯಿ ಅವರ ಪಾತ್ರದ ಚಿತ್ರಣ ನೀಡಿದೆ. ಕೂಲಿ ಕೆಲಸವನ್ನು ಮುಗಿಸಿಕೊಂಡು ಹೋಗುತ್ತಿದ್ದ ಜನರು ಮನೋಜ್ ಸುತ್ತಲೂ ಸುತ್ತುವರೆದು ಅವನಿಗೆ ಆಯುಧಗಳಿಂದ ಹೊಡೆಯುತ್ತಿರುವುದನ್ನು ಕಾಣಬಹುದು. ನಂತರ ಅವನಿಗೆ ಪ್ರಜ್ಞೆ ಬಂದ ತಕ್ಷಣ ಪ್ರತಿಯೊಬ್ಬರು ಅವನಿಗೆ ಹೆದರಿ ಅಲ್ಲಿಂದ ಓಡಿ ಹೋಗುತ್ತಾರೆ. ಚಿತ್ರವನ್ನು Bhanushali Studios Limited, SSO Productions ಮತ್ತು Aurega Studios ಬ್ಯಾನರ್‌ಗಳ ಅಡಿಯಲ್ಲಿ ವಿನೋದ್ ಭಾನುಶಾಲಿ, ಕಮಲೇಶ್ ಭಾನುಶಾಲಿ, ಸಮೀಕ್ಷಾ ಓಸ್ವಾಲ್, ಶೇಲ್ ಓಸ್ವಾಲ್, ಶಬಾನಾ ರಜಾ ಬಾಜ್ ಪೇಯಿ ಮತ್ತು ವಿಕ್ರಮ್ ಖಾಕರ್ ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ‘ಕೊಹ್ರಾ’ ಖ್ಯಾತಿಯ ಸುವಿಂದರ್ ವಿಕ್ಕಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದೀಪಕ್ ಕಿಂಗ್ರಾನಿ ಚಿತ್ರಕಥೆ ಬರೆದಿದ್ದಾರೆ. ಸಿನಿಮಾವನ್ನು ಮೇ 24ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಹಿಂದೆ ಮನೋಜ್ ಬಾಜ್‌ಪೇಯಿ ಅವರ 2023ರ ವಿಮರ್ಶಾತ್ಮಕ ಹಿಟ್ ಗೆಸಿರ್ಫ್ ಏಕ್ ಬಂದಾ ಕಾಫಿ ಹೈಗೆ ಸಿನಿಮಾವನ್ನು ಅಪೂರ್ವ್ ಸಿಂಗ್ ಕರ್ಕಿ ನಿರ್ದೇಶಿಸಿದ್ದರು.