ಪ್ರೈಂ ವೀಡಿಯೋ 70ಕ್ಕೂ ಹೆಚ್ಚು ಸೀರೀಸ್‌, ಸಿನಿಮಾಗಳ ಅನಾವರಣಕ್ಕೆ ಸಜ್ಜಾಗಿದೆ. ಇವು ಮುಂದಿನ 2 ವರ್ಷಗಳಲ್ಲಿ ಪ್ರೀಮಿಯರ್ ಆಗಲಿವೆ. 40 ಒರಿಜಿನಲ್ ಸಿರೀಸ್ ಮತ್ತು ಸಿನಿಮಾಗಳು ಮತ್ತು ಬಹುನಿರೀಕ್ಷಿತ 29 ಸಿನಿಮಾಗಳು ಈ ಪಟ್ಟಿಯಲ್ಲಿ ಸೇರಿವೆ. ಚಿತ್ರೀಕರಣದಲ್ಲಿರುವ ‘ಕಾಂತಾರ’ ಕನ್ನಡ ಸಿನಿಮಾ ಈ ಪಟ್ಟಿಯಲ್ಲಿದೆ.

ಭಾರತದ ಪ್ರಮುಖ OTT ಪ್ಲಾಟ್‌ಫಾರ್ಮ್‌ ಪ್ರೈಂ ವೀಡಿಯೊ ವೈವಿಧ್ಯಮಯ ಕಂಟೆಂಟ್‌ ಅನಾವರಣಕ್ಕೆ ವೇದಿಕೆ ಸಜ್ಜುಗೊಳಿಸಿದೆ. ತನ್ನ ಎರಡನೇ ಪ್ರೈಮ್ ವೀಡಿಯೋ ಪ್ರೆಸೆಂಟ್ಸ್ ಇಂಡಿಯಾ ಶೋಕೇಸ್‌ನಲ್ಲಿ ಸುಮಾರು 70ಕ್ಕೂ ಹೆಚ್ಚು ಸೀರೀಸ್‌ ಮತ್ತು ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದೆ. ಇವು ಮುಂದಿನ 2 ವರ್ಷಗಳಲ್ಲಿ ಪ್ರೀಮಿಯರ್ ಆಗಲಿವೆ. 40 ಒರಿಜಿನಲ್ ಸಿರೀಸ್ ಮತ್ತು ಸಿನಿಮಾಗಳು ಮತ್ತು ಬಹುನಿರೀಕ್ಷಿತ 29 ಸಿನಿಮಾಗಳು ಈ ಪಟ್ಟಿಯಲ್ಲಿ ಸೇರಿವೆ. ಹಿಂದಿ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಯ ಕಂಟೆಂಟ್ ಕೂಡಾ ಇಲ್ಲಿ ಇರಲಿದೆ. ಥ್ರಿಲ್ಲರ್‌, ಡ್ರಾಮಾ, ಕಾಮಿಡಿ, ಹಾರರ್‌, ಆಕ್ಷನ್‌ ಸೇರಿದಂತೆ ವಿವಿಧ ಜಾನರ್‌ನ ವೆಬ್‌ ಸರಣಿ ಮತ್ತು ಸಿನಿಮಾಗಳನ್ನು ಇಲ್ಲಿ ನೋಡಬಹುದು. ಭಾರತದ ಮುಂಚೂಣಿ ಫಿಲ್ಮ್‌ ಸ್ಟುಡಿಯೋಗಳ ಸಿನಿಮಾಗಳನ್ನೂ ಪ್ರದರ್ಶಿಸಲಾಗುತ್ತದೆ. ಇವು ಥಿಯೇಟರ್‌ನಲ್ಲಿ ಕಾಣಿಸಿಕೊಂಡ ನಂತರದಲ್ಲಿ ಓಟಿಟಿಗೆ ಬರಲಿವೆ.

ಈ ಬಗ್ಗೆ ಮಾತನಾಡುವ ಪ್ರೈಮ್ ವೀಡಿಯೋ ಭಾರತೀಯ ವಿಭಾಗದ ನಿರ್ದೇಶಕ ಸುಶಾಂತ್ ಶ್ರೀರಾಮ್, ‘ಪ್ರೈಮ್ ವೀಡಿಯೋದಲ್ಲಿ ವಿವಿಧ ಮನರಂಜನೆ ವಿಧಾನಗಳ ಮೂಲಕ ಭಾರತೀಯ ಗ್ರಾಹಕರ ಮನರಂಜಿಸಲು ನಾವು ಹೆಚ್ಚು ಗಮನ ಹರಿಸುತ್ತಿದ್ದೇವೆ. ಹೊಸ ವಿಧಾನದ ಒರಿಜಿನಲ್ ಸಿರೀಸ್ ಮತ್ತು ಸಿನಿಮಾಗಳು, ನೇರವಾಗಿ ಪ್ರದರ್ಶನಗೊಳ್ಳಲಿರುವ ಸಿನಿಮಾಗಳು, ವಿವಿಧ ಭಾಷೆಗಳಲ್ಲಿ ಥಿಯೇಟರ್‌ನಲ್ಲಿ ಹಿಟ್ ಆದ ಅತಿ ದೊಡ್ಡ ಸಿನಿಮಾಗಳನ್ನು ಪ್ರದರ್ಶಿಸುವ ಮೂಲಕ ಪ್ರತಿ ಗ್ರಾಹಕರಿಗೂ ನಾವು ಮೊದಲ ಆಯ್ಕೆಯಾಗಿರಬೇಕು ಎಂದು ಬಯಸುತ್ತೇವೆ. ನಮ್ಮ ಪ್ಲಾಟ್‌ಫಾರಂನಲ್ಲಿರುವ ಪ್ರತಿ ಕತೆಯೂ ಅವರಿಗೆ ಮೆಚ್ಚುಗೆಯಾಗಬೇಕು ಎಂದು ನಾವು ಆಶಿಸುತ್ತೇವೆ. ನಮ್ಮ ಮುಂಬರುವ ಸಿರೀಸ್‌ ಮತ್ತು ಸಿನಿಮಾಗಳು ವೀಕ್ಷಕರನ್ನು ಮನರಂಜಿಸಲಿದೆ ಎಂದು ನಾವು ಖಾತರಿ ಹೊಂದಿದ್ದೇವೆ’ ಎಂದಿದ್ದಾರೆ.

‘ವೈವಿಧ್ಯಮಯ, ಅಸಲಿ ಮತ್ತು ನೆಲಮೂಲದ ಭಾರತೀಯ ಕತೆಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಪ್ರೈಮ್ ವೀಡಿಯೋ ಬದ್ಧವಾಗಿದೆ. ಇದರಿಂದ ಭಾಷೆ ಮತ್ತು ಭೌಗೋಳಿಕ ಗಡಿಗಳನ್ನೂ ಮೀರಲಿದೆ’ ಎನ್ನುವುದು ಪ್ರೈಂ ವೀಡಿಯೋ ಭಾರತ ಮತ್ತು ಆಗ್ನೇಯ ಏಷ್ಯಾದ ಒರಿಜಿನಲ್ಸ್‌ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಹೇಳಿಕೆ. ‘2023ರಲ್ಲಿ, ನಮ್ಮ ಕಂಟೆಂಟ್ 210 ದೇಶಗಳಲ್ಲಿ ವೀಕ್ಷಿಸಲ್ಪಟ್ಟಿದೆ. ಕಳೆದ 52 ವಾರಗಳ ಪೈಕಿ 43ರಲ್ಲಿ ವಿಶ್ವಾದ್ಯಂತ ಪ್ರೈಮ್ ವೀಡಿಯೋ ಅಗ್ರ 10ರಲ್ಲಿ ಟ್ರೆಂಡ್ ಆಗಿದೆ. ನಮ್ಮ ಶೋಗಳು ಮತ್ತು ಸಿನಿಮಾಗಳ ರಾಷ್ಟ್ರೀಯ ಮತ್ತು ಜಾಗತಿಕ ಪರಿಣಾಮ ನಮಗೆ ಸಂತೃಪ್ತಿ ನೀಡಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಕಂಟೆಂಟ್ ಅನ್ನು ನಾವು ಇನ್ನಷ್ಟು ಪ್ರಚುರಪಡಿಸಲು ಇಚ್ಛಿಸುತ್ತೇವೆ. ಭಾರತ ವಿಶ್ವಮಟ್ಟದಲ್ಲಿ ಕಾಣಿಸಿಕೊಳ್ಳಲು ನಮ್ಮ ಮುಂಬರುವ ಸಿನಿಮಾಗಳು ಮತ್ತು ಸರಣಿಗಳು ಹೊಸ ದಾರಿಯನ್ನು ಹಾಕಿಕೊಡಲಿದೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ’ ಎಂದಿದ್ದಾರೆ ಅಪರ್ಣಾ ಪುರೋಹಿತ್‌.

LEAVE A REPLY

Connect with

Please enter your comment!
Please enter your name here