ಪುಲ್ಕಿತ್‌ ನಿರ್ದೇಶನದ ‘ಭಕ್ಷಕ್‌’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನಟಿ ಭೂಮಿ ಪೆಡ್ನೇಕರ್‌ ಚಿತ್ರದಲ್ಲಿ ತನಿಖಾ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 9ರಿಂದ Netflixನಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ.

ಭೂಮಿ ಪೆಡ್ನೇಕರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಭಕ್ಷಕ್‌’ ಹಿಂದಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ಪುಲ್ಕಿತ್‌ ಅವರು ನಿರ್ದೆಶಿಸಿದ್ದಾರೆ. ಟೀಸರ್‌, ನ್ಯಾಯವನ್ನು ಹುಡುಕಿ ಹೊರಟ ಧೈರ್ಯಶಾಲಿ ಮಹಿಳೆಯೊಬ್ಬಳ ಕಥೆಯೊಂದನ್ನು ಹೇಳಲಿದೆ. ವೈಶಾಲಿ ಸಿಂಗ್ ಪಾತ್ರದಲ್ಲಿರುವ ಭೂಮಿ ಪೆಡ್ನೇಕರ್ ನಡೆದು ಹೋಗಿರುವ ಘೋರ ಅಪರಾಧವನ್ನು ಬೆಳಕಿಗೆ ತರಲು ಹೋರಾಡುತ್ತಿರುತ್ತಾಳೆ. ತನಿಖಾ ಪತ್ರಕರ್ತೆಯಾಗಿ ಮಹಿಳೆಯರ ವಿರುದ್ಧ ಜರುಗಿರುವ ಅಪರಾಧಗಳ ಚಿತ್ರಣಗಳನ್ನು ಬಹಿರಂಗಪಡಿಸಲು ಸೆಣೆಸಾಡುವುದನ್ನು ಕಾಣಬಹುದು. ಟೀಸರ್‌ ಕೊನೆಯಲ್ಲಿ ಭೂಮಿ, ಯುವತಿಯೊಬ್ಬಳಿಗೆ ‘ಹೆಣ್ಣು ಮಕ್ಕಳ ಹಕ್ಕುಗಳಿಗಾಗಿ ನಾವು ಹೋರಾಡುತ್ತಿದ್ದೇವೆ. ಅದು ನಿಮಗೆ ಸಿಗುತ್ತದೆಯೇ?’ ಎಂದು ಪ್ರಶ್ನೆ ಮಾಡುತ್ತಾಳೆ.

ಶಾರುಖ್ ಖಾನ್ ಒಡೆತನದ Red Chillies Entertainment ಬ್ಯಾನರ್‌ ಅಡಿಯಲ್ಲಿ ಗೌರಿ ಖಾನ್ ಮತ್ತು ಗೌರವ್ ವರ್ಮಾ ನಿರ್ಮಿಸಿರುವ ಈ ಚಲನಚಿತ್ರದಲ್ಲಿ ಭೂಮಿ ಪಡ್ನೇಕರ್‌ ಅವರು ತನಿಖಾ ಪತ್ರಕರ್ತೆಯಾಗಿ ಅಭಿನಯಿಸಿದ್ದಾರೆ. ನೈಜ ಘಟನೆಗಳಿಂದ ಸ್ಪೂರ್ತಿ ಪಡೆದಿರುವ ಈ ಚಿತ್ರವು ಕ್ರೈಮ್‌ ಥ್ರಿಲ್ಲರ್‌ ಆಗಿದ್ದು, ಚಿತ್ರದಲ್ಲಿ ಸಂಜಯ್ ಮಿಶ್ರಾ, ಆದಿತ್ಯ ಶ್ರೀವಾಸ್ತವ ಮತ್ತು ಸಾಯಿ ತಮ್ಹಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ಫೆಬ್ರವರಿ 9ರಿಂದ Netflixನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

LEAVE A REPLY

Connect with

Please enter your comment!
Please enter your name here