ಶಾರುಖ್‌ ಖಾನ್‌ ಅಭಿನಯದ ‘ಡಂಕಿ’ ಹಿಂದಿ ಸಿನಿಮಾದ ‘ಲುಪ್ ಪುಟ್ ಗಯಾ’ ಸಾಂಗ್‌ ಬಿಡುಗಡೆಯಾಗಿದೆ. ಪ್ರೀತಮ್‌ ಸಂಗೀತ ಸಂಯೋಜನೆಯ ಹಾಡಿಗೆ ಗಣೇಶ್‌ ಆಚಾರ್ಯ ನೃತ್ಯ ಸಂಯೋಜನೆ ಮಾಡಿದ್ದಾರೆ. ಶಾರುಖ್‌ ಮತ್ತು ತಾಪ್ಸಿ ಅವರ ಮೇಲೆ ಹಾಡು ಪಿಕ್ಚರೈಸ್‌ ಆಗಿದೆ.

ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ‘ಡಂಕಿ’ ಸಿನಿಮಾದ ‘ಲುಪ್ ಪುಟ್ ಗಯಾ’ ಸಾಂಗ್‌ ಬಿಡುಗಡೆಯಾಗಿದೆ. ಶಾರುಖ್‌ ಖಾನ್‌ ಅಭಿನಯದ ಬಹುನಿರೀಕ್ಷಿತ ಚಿತ್ರವಿದು. ಟೀ ಸೀರಿಸ್ ಯೂಟ್ಯೂಬ್‌ನಲ್ಲಿ ಹಾರ್ಡಿ ಮತ್ತು ಮನುವಿನ ಪ್ರೇಮಗೀತೆ ಅನಾವರಣಗೊಂಡಿದೆ. ‘ಲುಪ್ ಪುಟ್ ಗಯಾ’ ಎಂಬ ಸಾಹಿತ್ಯದ ಹಾಡಿಗೆ ಶಾರುಖ್ ಖಾನ್ ಮತ್ತು ತಾಪ್ಸಿ ಹೆಜ್ಜೆ ಹಾಕಿದ್ದಾರೆ. ಪ್ರೀತಮ್ ಸಂಗೀತ, ಸ್ವಾನಂದ್ ಕಿರ್ಕಿರೆ ಮತ್ತು ಐಪಿ ಸಿಂಗ್ ರಚನೆಯ ಗೀತೆಗೆ ಅರಿಜಿತ್ ಸಿಂಗ್ ದನಿಯಾಗಿದ್ದಾರೆ. ಗಣೇಶ್ ಆಚಾರ್ಯ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ರಾಜ್‌ಕುಮಾರ್‌ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್, ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ‘ಗುಲಾಟಿ’ ಹೆಸರಿನ ಪಾತ್ರ ಮಾಡಿದ್ದಾರೆ. ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನು ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ ಹಿರಾನಿ. ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ ಚಿತ್ರ ನಿರ್ಮಿಸಿದ್ದಾರೆ. ಕ್ರಿಸ್‌ಮಸ್‌ಗೆ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

LEAVE A REPLY

Connect with

Please enter your comment!
Please enter your name here