ತಾಯಿಯ ಕರುಳು, ಜನರ ನರಳು, ಅಧಿಕಾರಸ್ಥರ ಕೇಡಿ ಕೂಟ, ನಾಯಕನ ಬೆರಗಿನ ಆಟ – ಎಲ್ಲಾ ಇದ್ದೂ- ಯಾವುದನ್ನೂ ಉನ್ಮಾದವಾಗಿಸದಂತೆ ನಿರ್ವಹಿಸಿರುವ ರೀತಿ ಮೆಚ್ಚುವಂಥದ್ದು. ತೀಕ್ಷ್ಣವಾಗಿ ಚುಚ್ಚುವ ಹಾಸ್ಯ (ಪನ್) ವನ್ನೂ, ಹಾಡು ನೃತ್ಯಗಳನ್ನೂ ನಿರ್ದೇಶಕ ಅಟ್ಲೀ ಭಾವಾನ್ಮೋದವನ್ನು ಮುರಿಯುವ ಹದದಲ್ಲಿ ಬಳಸಿರುವುದು ಖುಷಿ ನೀಡುತ್ತದೆ.

ಕ್ರಿಕೆಟ್ ಬಲ್ಲವರಿಗೆ ಗೊತ್ತಿರುತ್ತದೆ, ಟಿ-20 ಆಟ ಒಂದು ಜೂಜು. ಆದರೆ, ಆಟದ ಒಳಮರ್ಮ ಅರಿತು ಎಚ್ಚರದೊಂದಿಗೆ ಆಕ್ರಮಣಶೀಲತೆ ಬೆರಸಿ ಆಡಿದರೆ ಗೆಲ್ಲಬಹುದಾದ ಜೂಜು. ಅಂಥ ಆಟಗಾರರ ಚುರುಕು, ಆಟಕ್ಕೆ ತರುವ ಹುರುಪಿನ ಕುಶಲತೆಗಾಗಿಯೇ ಗಮನಿಸುವಂತೆ ಮಾಡುವ ಜೂಜದು. ‘ಜವಾನ್’ನಲ್ಲಿ ಆಟ್ಲೀ ಆ ಬಗೆಯ ಚುರುಕು ಹುರುಪಿನ ಚಿತ್ರಕತೆ – ನಿರ್ದೇಶನ ಹೆಣೆದು ದೇಶಪ್ರೇಮದ ಮುದ ನೀಡುವ ಜನಪ್ರಿಯ ವ್ಯಾಖ್ಯಾನ ನೀಡಿದ್ದಾರೆ. ಜನಪ್ರಿಯ ಸಿನಿಮಾಕ್ಕೆ ಬೇಕಾದ ಎಲ್ಲ ಉಪ್ಪು ಖಾರ ಮಸಾಲೆ ಅರೆದೂ ವಿವೇಕವನ್ನು ಉಳಿಯುವಂಥ ರಂಜನೀಯ ಸಿನಿಮಾ ಕಟ್ಟಿದ್ದಾರೆ.

ತಾಯಿಯ ಕರುಳು, ಜನರ ನರಳು, ಅಧಿಕಾರಸ್ಥರ ಕೇಡಿ ಕೂಟ, ನಾಯಕನ ಬೆರಗಿನ ಆಟ – ಎಲ್ಲಾ ಇದ್ದೂ- ಯಾವುದನ್ನೂ ಉನ್ಮಾದವಾಗಿಸದಂತೆ ನಿರ್ವಹಿಸಿರುವ ರೀತಿ ಮೆಚ್ಚುವಂಥದ್ದು. ತೀಕ್ಷ್ಣವಾಗಿ ಚುಚ್ಚುವ ಹಾಸ್ಯ (ಪನ್) ವನ್ನೂ, ಹಾಡು ನೃತ್ಯಗಳನ್ನೂ ನಿರ್ದೇಶಕ ಅಟ್ಲೀ ಭಾವಾನ್ಮೋದವನ್ನು ಮುರಿಯುವ ಹದದಲ್ಲಿ ಬಳಸಿರುವುದು ಖುಷಿ ನೀಡುತ್ತದೆ. ಸರಳ ರೇಖಾತ್ಮಕ ಕಥನಾ ನಿರೂಪಣೆ / ಹಿಂದೆ-ಮುಂದೆ ಜೀಕುವ ನಿರೂಪಣೆಗಳನ್ನು ನೆಚ್ಚದೆ, ಎರಡರ ಹರಿತವನ್ನೂ ಅರಿತಂತೆ, ಘಟನೆಗಳ ಚುಕ್ಕಿ ಸೇರಿಸುವ ಆಟದ ಹಾಗೆ ಕತೆ ಕಟ್ಟಿರುವುದರಿಂದ, ಪ್ರೇಕ್ಷಕರನ್ನು ಉನ್ಮಾದದ ಮತ್ತಿಗೆ ತಳ್ಳದೇ ಜನಪ್ರಿಯ ಮಾದರಿಯಲ್ಲಿ ಕತೆ ನಿರೂಪಿಸುವುದಕ್ಕೆ ಆಟ್ಲೀಗೆ ಸಾಧ್ಯವಾಗಿದೆ.

‘ಬಾಹುಬಲಿ’, ‘KGF’, ‘ಪುಷ್ಪ’, ‘ಕಾಂತಾರ’ಗಳ ಸರ್ವಾಧಿಕಾರಿ ಉನ್ಮಾದದ ನಾಯಕರ ಚಿತ್ರಣವನ್ನು ಒಡೆದು ಜನರ ನಿತ್ಯದ ನೋವು‌ ಹರಳುಗಟ್ಟಿದಂತಹ ನಾಯಕನ ಚಿತ್ರ ಕಟ್ಟಿರುವುದು ಚಿತ್ರವನ್ನು ಜನಮಾನಸಕ್ಕೆ ತಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಹಲವರು ಹಳೆಯ ಹಿಂದಿ ಹಾಡುಗಳನ್ನು ಬಳಸಿರುವ ಜಾಣ್ಮೆಯ ಬಗ್ಗೆ ಬರೆದಿದ್ದಾರೆ; ಆದರೆ, ಆಟ್ಲೀ ಎರಡು, ಮೂರು ಕಡೆ ‘ಗುಡ್ ಬ್ಯಾಡ್ ಅಗ್ಲಿ’ ಯ ಪ್ರಸಿದ್ಧ ಟ್ಯೂನ್ ಬಳಸಿ ಚಕಿತಗೊಳಿಸಬಲ್ಲವರಾಗಿದ್ದಾರೆ!

LEAVE A REPLY

Connect with

Please enter your comment!
Please enter your name here