ಗಿರೀಶ್ ಕುಮಾರ್ ನಿರ್ದೇಶನದ ‘ಭಾವಚಿತ್ರ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡಕ್ಕೆ ಹೊಸತಾದ ಟೆಕ್ನೋ – ಥ್ರಿಲ್ಲರ್ ಜಾನರ್‌ನ ಕತೆಯಿದು. ‘ಮಗಳು ಜಾನಕಿ’ ಧಾರಾವಾಹಿ ಖ್ಯಾತಿಯ ಗಾನವಿ ಲಕ್ಷ್ಮಣ್ ಚಿತ್ರದ ಹಿರೋಯಿನ್‌.

ಹೊಸ ಪೀಳಿಗೆಯ ತಂತ್ರಜ್ಞರು ವಿಶೇಷವಾದ ಕತೆಗಳನ್ನು ಹೆಣೆಯತೊಡಗಿದ್ದಾರೆ. ಹಾಗೆ, ಥ್ರಿಲ್ಲರ್ ಜಾನರ್‌ನಲ್ಲಿ ಹೊಸ ಪ್ರಯೋಗ ‘ಭಾವಚಿತ್ರ. “ಇದೊಂದು ‌ಟೆಕ್ನೋ‌ ಥ್ರಿಲ್ಲರ್ ಸಿನಿಮಾ. ಥ್ರಿಲ್ಲರ್ ಕತೆಯ ಜೊತೆ ಸೆಂಟಿಮೆಂಟ್ ಸನ್ನಿವೇಶಗಳನ್ನು ‌ಒಳಗೊಂಡಿರುವ ಚಿತ್ರ. ‌ ಭಾವಚಿತ್ರ ಹಾಗೂ ಕ್ಯಾಮೆರಾ ಮೇಲೆ ನಮ್ಮ ಚಿತ್ರದ ಕಥೆ ಸಾಗುತ್ತದೆ.  ಇದಷ್ಟೇ ಅಲ್ಲ. ಪ್ರೀತಿಯ ಸನ್ನಿವೇಶಗಳೂ ಯತೇಚ್ಛವಾಗಿವೆ. ಇಡೀ ಚಿತ್ರತಂಡದ ಸಹಕಾರದಿಂದ ನಮ್ಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ” ಎಂದು ಚಿತ್ರದ ಬಗ್ಗೆ ನಿರ್ದೇಶಕ ಗಿರೀಶ್ ಕುಮಾರ್ ಮಾಹಿತಿ ನೀಡಿದರು. ಈ ಹಿಂದೆ ಅವರು ‘ಆವಾಹಯಾಮಿ’ ಸಿನಿಮಾ ನಿರ್ದೇಶಿಸಿದ್ದರು. ‘ಭಾವಚಿತ್ರ’ ಅವರ ಎರಡನೇ ಪ್ರಯೋಗ.

‘ಯಾನ’ ಚಿತ್ರದಲ್ಲಿ ನಟಿಸಿದ್ದ ಚಕ್ರವರ್ತಿ ‘ಭಾವಚಿತ್ರ’ದ ಹೀರೋ. ಅವರಿಗಿಲ್ಲಿ ಸಾಫ್ಟ್‌’ವೇರ್ ಇಂಜಿನಿಯರ್ ಪಾತ್ರ. “ಚಿತ್ರದ ನಾಯಕ ದೊಡ್ಡ ಕಂಪನಿಯೊಂದರಲ್ಲಿ ಸಾಫ್ಟ್‌’ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುತ್ತಾನೆ. ಫೋಟೊಗ್ರಾಫಿ ಆತನ ಹವ್ಯಾಸ. ಈ ರೀತಿ ಜೀವನ ಸಾಗುತ್ತಿದ್ದಾಗ ಕೆಲವು ಅನಿರೀಕ್ಷಿತ ತಿರುವುಗಳು ಬರುತ್ತದೆ. ಆ ಘಟನೆಗಳು ಆತನ ಜೀವನವನ್ನು ಹೇಗೆ ಬದಲಿಸುತ್ತವೆ ಎನ್ನುವುದು ಚಿತ್ರದ ಕಥಾವಸ್ತು” ಎನ್ನುತ್ತಾರೆ ಚಕ್ರವರ್ತಿ. ನಿರ್ದೇಶಕ ಟಿ.ಎನ್‌.ಸೀತಾರಾಂ ಅವರ ‘ಮಗಳು ಜಾನಕಿ’ ಧಾರಾವಾಹಿ ಖ್ಯಾತಿಯ ಗಾನವಿ ಲಕ್ಷ್ಮಣ್‌ ಚಿತ್ರದ ನಾಯಕನಟಿ. “ಧಾರಾವಾಹಿ ಸಮಯದಲ್ಲಿ ನಿರ್ದೇಶಕ ಗಿರೀಶ್ ಕುಮಾರ್ ಅವರು ಹೇಳಿದ ಈ ಕಥೆ ಇಷ್ಟವಾಯಿತು. ಸವಾಲಿನ ಪಾತ್ರ” ಎನ್ನುವುದು ಅವರ ಹೇಳಿಕೆ. ಶಂಕರ್, ವಿನಾಯಕ ನಾಡಕರ್ಣಿ, ಸಚಿನ್, ರತೀಶ್ ಕುಮಾರ್ ನಿರ್ಮಾಣದ ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತ ಸಂಯೋಜನೆ, ಅಜಯ್ ಕುಮಾರ್ ಛಾಯಾಗ್ರಹಣವಿದೆ. ಸದ್ಯದಲ್ಲೇ ‘ಭಾವಚಿತ್ರ’ ತೆರೆಗೆ ಬರಲಿದೆ.

Previous articleನ್ಯೂಯಾರ್ಕ್ ಟೈಮ್ಸ್‌ ಸ್ಕ್ವಯರ್‌ ಮೇಲೆ ಇಳಯರಾಜ ಫೋಟೊ; ಸಂಭ್ರಮ ಹಂಚಿಕೊಂಡ ಅಭಿಮಾನಿಗಳು
Next articleತೆರೆಗೆ ಸಿದ್ಧವಾಗಿರುವ ‘ಎಥರ್ಕಮ್‌ ಥುನಿಂಧವನ್’; 2022ರ ಫೆಬ್ರವರಿ 4ಕ್ಕೆ ಥಿಯೇಟರ್‌ಗೆ

LEAVE A REPLY

Connect with

Please enter your comment!
Please enter your name here