ಸೂರ್ಯ ಅಭಿನಯದ ‘ಎಥರ್ಕಮ್‌ ಥುನಿಂಧವನ್‌’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸದ್ಯ ‘ಜೈ ಭೀಮ್‌’ ಯಶಸ್ಸಿನಲ್ಲಿರುವ ಸೂರ್ಯ ಅವರ ಈ ಸಿನಿಮಾ 2022ರ ಫೆಬ್ರವರಿ 4ರಂದು ತೆರೆಗೆ ಬರುತ್ತಿದೆ.

ಕೋವಿಡ್‌ನಿಂದಾಗಿ ಸೂರ್ಯ ಅಭಿನಯದ ಸಿನಿಮಾಗಳು ಥಿಯೇಟರ್‌ಗಳಿಗೆ ಬರುವುದು ವಿಳಂಬವಾಗಿದೆ. ಅವರು ನಟಿಸಿ, ನಿರ್ಮಿಸಿರುವ ‘ಜೈ ಭೀಮ್‌’ ಅಮೆಜಾನ್ ಪ್ರೈಮ್‌ ಓಟಿಟಿಯಲ್ಲಿ ನೇರವಾಗಿ ಸ್ಟ್ರೀಮ್‌ ಆಗಿತ್ತು. ಇದೀಗ ಸನ್‌ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ತಯಾರಾಗಿರುವ ಅವರ ‘ಎಥರ್ಕಮ್‌ ಥುನಿಂಧವನ್‌’ ಸಿನಿಮಾ ಥಿಯೇಟರ್‌ಗೆ ಬರುತ್ತಿದೆ. ಪಂಡಿರಾಜ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಪ್ರಿಯಾಂಕಾ ಅರುಲ್‌, ಮೋಹನ್ ಮತ್ತು ಸತ್ಯರಾಜ್‌ ಇದ್ದಾರೆ. ಸೂರ್ಯ ಮತ್ತು ಪಂಡಿರಾಜ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರವಿದು. ಸಂಗೀತ ಸಂಯೋಜನೆ ಡಿ.ಇಮಾನ್ ಅವರದು. ಮೂವತ್ನಾಲ್ಕು ಸೆಕೆಂಡ್‌ಗಳ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ಸೂರ್ಯರ ತಾರಾ ಸಹೋದರ ಕಾರ್ತಿ ಕೂಡ ಕಾಣಿಸಿಕೊಂಡಿದ್ದಾರೆ. ವಿಶಿಷ್ಟ ಮ್ಯೂಸಿಕ್‌ನೊಂದಿಗೆ ಟೀಸರ್ ಶುರುವಾಗುತ್ತದೆ. ಟೀಸರ್‌ನಲ್ಲೇ ಚಿತ್ರದ ತಿರುಳನ್ನು ಅಂದಾಜಿಸಬಹುದು. ಇದೊಂದು ಹಳ್ಳಿ ಸೊಗಡಿನ ಹಿನ್ನೆಲೆ ಇರುವ ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್‌ ಚಿತ್ರ ಎಂದು ಹೇಳಬಹುದು. ಫೆಬ್ರವರಿಯಲ್ಲಿ ಬರುವ ಪೊಂಗಲ್‌ ಹಬ್ಬದ ಸಮಯದಲ್ಲಿ ‘ಎಥರ್ಕಮ್‌ ಥುನಿಂಧವನ್‌’ ತೆರೆಕಾಣುತ್ತಿದ್ದು, ಸೂರ್ಯರ ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ಇಮ್ಮಡಿಯಾಗಲಿದೆ.

Previous articleಟ್ರೈಲರ್ | ಟೆಕ್ನೋ – ಥ್ರಿಲ್ಲರ್ ‘ಭಾವಚಿತ್ರ’; ಕ್ಯಾಮೆರಾ ಹಿಂದಿನ ಕಥಾನಕ
Next articleಕನ್ನಡ ಚಿತ್ರರಂಗ ನಿಧಾನಕ್ಕೆ ಹೈದರಾಬಾದಿಗೆ ಶಿಫ್ಟ್ ಆಗುತ್ತಿದೆ!; ಇಲ್ಲಿ ಫಿಲ್ಮ್ ಸಿಟಿ ಕನಸು ನನಸಾಗುವುದೆಂದು?

LEAVE A REPLY

Connect with

Please enter your comment!
Please enter your name here