ಬಿಗ್‌ ಬಾಸ್‌ OTT ಎರಡನೇ ಸೀಸನ್‌ ಜೂನ್‌ 17ರಿಂದ ಶುರುವಾಗುತ್ತಿದೆ. ‘ಈ ಬಾರಿ ಸ್ಪರ್ಧಿಗಳಿಗೆ ಕಠಿಣ ಸವಾಲುಗಳು ಇರಲಿವೆ. ವೀಕ್ಷಕರೇ ಅವರಿಗೆ ನೆರವಾಗಬೇಕು!’ ಎನ್ನುವ ಸಲ್ಮಾನ್‌ ಟೀಸರ್‌ ವೀಡಿಯೋ ಗಮನ ಸೆಳೆಯುತ್ತದೆ.

ಎರಡನೇ ಸೀಸನ್‌ನ Bigg Boss OTT ಜೂನ್‌ 17ರಿಂದ ಸ್ಟ್ರೀಮ್‌ ಆಗಲಿದೆ. ನಟ ಸಲ್ಮಾನ್‌ ಖಾನ್‌ ಶೋ ನಿರೂಪಿಸುತ್ತಿದ್ದು, ಅವರು ಟೀಸರ್‌ ವೀಡಿಯೋ ಹಂಚಿಕೊಂಡಿದ್ದಾರೆ. ಈ ಬಾರಿ ಸ್ಪರ್ಧಿಗಳಿಗೆ ವೀಕ್ಷಕರೇ ನೆರವಾಗಬೇಕು ಎನ್ನುವ ಸಾಲುಗಳು ಟೀಸರ್‌ನಲ್ಲಿವೆ. ಕ್ಯಾಮರಾ ಎದುರು ಸಲ್ಮಾನ್‌, ‘Is baar itni lagegi ki aapki madad lagegi’ ಎಂದಿದ್ದಾರೆ. ಬಿಗ್‌ ಬಾಸ್‌ OTT anthemನೊಂದಿಗೆ ಸಲ್ಲೂ ಡ್ಯಾನ್ಸರ್‌ಗಳ ಜೊತೆ ಕುಣಿದಿದ್ದಾರೆ. JioCinema ಶೋನ ಟೀಸರ್‌ ಹಂಚಿಕೊಂಡು, ‘Everyone’s favourite @beingsalmankhan is all set to bring back India’s biggest reality show, Bigg Boss to OTT!Aur iss baar, lagayenge bhi aap aur bachayenge bhi aap. Stay tuned for the #BBOTT2 anthem drop. #BBOTT2onJioCinema streaming free 17 June onwards. #BiggBossOTT2’ ಎಂದಿದೆ.

Bigg Boss OTT ಸೆಕೆಂಡ್‌ ಸೀಸನ್‌ ಸ್ಪರ್ಧಿಗಳ ಅಧಿಕೃತ ಪಟ್ಟಿ ಇನ್ನೂ ಹೊರಬೀಳಬೇಕಿದೆ. ಆದಾಗ್ಯೂ ಕೆಲವು ಸಂಭವನೀಯ ಸ್ಪರ್ಧಿಗಳ ಹೆಸರುಗಳು ಕೇಳಿಬರುತ್ತಿವೆ. ಉದಿತ್‌ ನಾರಾಯಣ್‌ ಪುತ್ರ, ಗಾಯಕ ಆದಿತ್ಯ ನಾರಾಯಣ್‌, ರೂಪದರ್ಶಿ – ನಟಿ ಪೂನಂ ಪಾಂಡೆ, ಕಿರುತೆರೆ ಕಲಾವಿದರಾದ ಅಂಜಲಿ ಅರೋರಾ, ಪೂಜಾ ಗೋರ್‌ ಸ್ಪರ್ಧಿಗಳಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

LEAVE A REPLY

Connect with

Please enter your comment!
Please enter your name here