ಪ್ರಭಾಸ್‌, ಸೈಫ್‌ ಅಲಿ ಖಾನ್‌, ಕೃತಿ ಸನೂನ್‌ ಅಭಿನಯದ ‘ಆದಿಪುರುಷ್‌’ ಸಿನಿಮಾದ ಫೈನಲ್‌ ಟ್ರೈಲರ್‌ ರಿಲೀಸ್‌ ಆಗಿದೆ. ಓಂ ರಾವುತ್‌ ನಿರ್ದೇಶನದ ಅದ್ಧೂರಿ ಸಿನಿಮಾ ಜೂನ್‌ 16ರಂದು 3Dಯಲ್ಲಿ ತೆರೆಕಾಣಲಿದೆ.

ಓಂ ರಾವತ್‌ ನಿರ್ದೇಶನದ ‘ಆದಿಪುರುಷ್‌’ ಸಿನಿಮಾ ಜೂನ್‌ 16ರಂದು 3D ಫಾರ್ಮ್ಯಾಟ್‌ನಲ್ಲಿ ತೆರೆಕಾಣಲಿದೆ. ಬಿಡುಗಡೆಯ ಹಿನ್ನೆಲೆಯಲ್ಲಿ ಚಿತ್ರತಂಡದವರು ಫೈನಲ್‌ ಟ್ರೈಲರ್‌ ಬಿಡುಗಡೆ ಮಾಡಿದ್ದಾರೆ. ಟ್ರೈಲರ್‌ Impressive ಆಗಿದ್ದು, ಕಳೆದ ಬಾರಿಯ ಕಳಪೆ VFX ಆರೋಪವನ್ನು ಸುಳ್ಳು ಮಾಡಿದೆ. ಮಹಾಕಾವ್ಯ ರಾಮಾಯಣ ಆಧರಿಸಿದ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್‌, ಸೀತೆಯಾಗಿ ಕೃತಿ ಸನೂನ್‌, ಲಕ್ಷ್ಮಣನಾಗಿ ಸನ್ನಿ ಸಿಂಗ್‌, ಹುನಮನಾಗಿ ದೇವದತ್ತ ನಾಗೆ, ರಾವಣನಾಗಿ ಸೈಫ್‌ ಅಲಿ ಖಾನ್‌ ಇದ್ದಾರೆ. ಎರಡು ನಿಮಿಷಗಳ ಟ್ರೈಲರ್‌ ರಾಮಾಯಣದ ಕಥಾಸಾರಾಂಶ ಹೇಳುತ್ತದೆ. ಸೀತಾಪರಹಣದ ದೃಶ್ಯದಿಂದ ತೆರೆದುಕೊಳ್ಳುವ ಟ್ರೈಲರ್‌ ಯುದ್ಧಭೂಮಿಗೆ ಬಂದು ನಿಲ್ಲುತ್ತದೆ. ಮೊದಲ ಟೀಸರ್‌ಗೆ ಸಿಕ್ಕ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ನಿರ್ದೇಶಕರು ಹಾಗೂ ನಿರ್ಮಾಪಕರು VFX ಗುಣಮಟ್ಟವನ್ನು ಕಾಯ್ದುಕೊಂಡಿದ್ದಾರೆ.

ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಜೂನ್‌ 16ರಂದು ಸಿನಿಮಾ ತೆರೆಕಾಣಲಿದೆ. ಇದಕ್ಕೂ ಮುನ್ನ ಜೂನ್‌ 13ರಂದು ಸಿನಿಮಾ Tribeca film festivalನಲ್ಲಿ ಪ್ರೀಮಿಯರ್‌ ಆಗಲಿದೆ. ‘ಸೈರಾಟ್‌’ ಸಿನಿಮಾ ಖ್ಯಾತಿಯ ಅಜಯ್‌ – ಅತುಲ್‌ ‘ಆದಿಪುರುಷ್‌’ಗೆ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕ ಓಂ ರಾವತ್‌ ರಾಷ್ಟ್ರಪ್ರಶಸ್ತಿ ಪುರಸ್ಕೃತರು. ‘ತನ್ಹಾಜಿ: ದಿ ಅನ್‌ಸಂಗ್‌ ವಾರಿಯರ್‌’ ಚಿತ್ರಕ್ಕಾಗಿ ಅವರಿಗೆ ಈ ಗೌರವ ಸಂದಿತ್ತು. ‘ಈ ಚಿತ್ರವನ್ನು ನಾನು ರಾಮ್‌ಲೀಲಾ ಕಲಾವಿದರಿಗೆ ಸಮರ್ಪಿಸುತ್ತೇನ. ರಾಮಾಯಣ ಕತೆಯನ್ನು ಒಂದು ಬಸ್‌ಗೆ ಹೋಲಿಸಬಹುದು. ಈಗ ನಾವು ಬಸ್‌ ಹತ್ತಿದ್ದೇವೆ. ಕೆಲವು ವರ್ಷ ಬಸ್‌ನಲ್ಲಿ ಪ್ರಯಾಣಿಸಿದ ನಂತರ ನಾವು ಇಳಿದು ಹೋಗುತ್ತೇವೆ. ಮುಂದೆ ಮತ್ತಾರೋ ಬಸ್‌ ಹತ್ತುತ್ತಾರೆ. ಹೀಗೆ ರಾಮ್‌ಲೀಲಾ ಭಾರತ ಇರುವವರೆಗೂ ವಿವಿಧ ರೀತಿಗಳಲ್ಲಿ ಮುಂದುವರೆಯಲಿದೆ’ ಎನ್ನುತ್ತಾರೆ.

Previous article‘ಲಸ್ಟ್‌ ಸ್ಟೋರೀಸ್‌ 2’ ಟೀಸರ್‌ | ನಾಲ್ಕು ಕಿರುಚಿತ್ರಗಳ ಆಂಥಾಲಜಿ
Next articleBigg Boss OTT 2 ಟೀಸರ್‌ | ಸಲ್ಮಾನ್‌ ಖಾನ್‌ ನಿರೂಪಣೆಯಲ್ಲಿ ಜೂನ್‌ 17ರಿಂದ

LEAVE A REPLY

Connect with

Please enter your comment!
Please enter your name here