‘The Night Manager’ ಮೊದಲ ಪಾರ್ಟ್‌ ಮುಗಿದಲ್ಲಿಂದ ಸೆಕೆಂಡ್‌ ಪಾರ್ಟ್‌ ಶುರುವಾಗುತ್ತದೆ. ಸೀಸನ್‌ 2ರಲ್ಲಿ ಆದಿತ್ಯ ರಾಯ್‌ ಕಪೂರ್‌ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇದೆ ಎನ್ನಲಾಗಿದ್ದು ಜೂನ್‌ 30ರಿಂದ DisneyPlus Hotstarನಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಫೆಬ್ರವರಿ 17ರಿಂದ ಸ್ಟ್ರೀಮ್‌ ಆಗಿದ್ದ ‘The Night Manager’ ಮೊದಲ ಸೀಸನ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಹಜವಾಗಿಯೇ ಪಾರ್ಟ್‌ 2 ನಿರೀಕ್ಷಿಯಲ್ಲಿದ್ದರು ವೀಕ್ಷಕರು. ಇದೀಗ ‘The Night Manager’ ಪಾರ್ಟ್‌ 2 ಟ್ರೈಲರ್‌ ರಿಲೀಸ್‌ ಆಗಿದ್ದು, ಜೂನ್‌ 30ರಿಂದ ವೆಬ್‌ ಸರಣಿ ಸ್ಟ್ರೀಮ್‌ ಆಗಲಿದೆ. ಹೋಟೆಲ್‌ ಕೆಲಸಗಾರನೊಬ್ಬ ದೊಡ್ಡ ಯಶಸ್ಸಿನ ಬೆನ್ನು ಹತ್ತುವುದು, ಈ ಹಂತದಲ್ಲಿ ಎದುರಾಗುವ ಭೂಗತ ಜಗತ್ತಿನ ಸುಳಿಗಳ ಸುತ್ತ ಕತೆ ಹೆಣೆಯಲಾಗಿದೆ. ಟ್ರೈಲರ್‌ ಹೇಳುವಂತೆ ಮೊದಲ ಸೀಸನ್‌ ಮುಗಿದಲ್ಲಿಂದ ಕತೆ ಶುರುವಾಗುತ್ತದೆ. ಆದಿತ್ಯ ರಾಯ್‌ ಕಪೂರ್‌, ಅನಿಲ್‌ ಕಪೂರ್‌, ಶೋಭಿತಾ ಧುಲಿಪಾಲಾ, ತಿಲೋತ್ತಮಾ ಶೋಮ್‌, ಶಾಶ್ವತಾ ಚಟರ್ಜೀ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸರಣಿಯ ಪ್ರಮುಖ ಪಾತ್ರಧಾರಿ ಅನಿಲ್‌ ಕಪೂರ್‌ ಟ್ರೈಲರ್‌ ಹಂಚಿಕೊಂಡು, ‘Shelly ki Lanka jalane ke liye, Shaan hai taiyaar. The most awaited season finale is here (Shaan is ready to light fire to Shelly’s Lanka). #HotstarSpecials #TheNightManager Part 2 streaming 30th June only on @disneyplusHS’ ಎಂದು ಬರೆದಿದ್ದಾರೆ. John le Carre ರಚನೆಯನ್ನು ಆಧರಿಸಿದ ಬ್ರಿಟೀಷ್‌ ಸರಣಿಯ ಹಿಂದಿ ಅವತರಣಿಕೆ ‘The Night Manager’. ಬ್ರಿಟಿಷ್‌ ಮಿನಿ ಸೀರೀಸ್‌ನಲ್ಲಿ Tom Hiddleston, Hugh Laurie, Olivia Coloman, Tom Hollander, Elizabeth Debicki ನಟಿಸಿದ್ದಾರೆ. 2016ರ ಫೆಬ್ರವರಿಯಲ್ಲಿ ಈ ಸರಣಿ ಸ್ಟ್ರೀಮ್‌ ಆಗಿತ್ತು. DisneyPlus Hotstarನಲ್ಲಿ ಜೂನ್‌ 30ರಿಂದ ‘The Night Manager 2’ ಸ್ಟ್ರೀಮ್‌ ಆಗಲಿದೆ.

Previous articleBigg Boss OTT 2 ಟೀಸರ್‌ | ಸಲ್ಮಾನ್‌ ಖಾನ್‌ ನಿರೂಪಣೆಯಲ್ಲಿ ಜೂನ್‌ 17ರಿಂದ
Next articleDDM ಸಕ್ಸಸ್‌, ತೇಜಸ್ವಿ ಅವರ ಕಟೌಟ್‌ ಎದುರು ಕುಣಿದ ಸಂಭ್ರಮ!

LEAVE A REPLY

Connect with

Please enter your comment!
Please enter your name here