ಕೊಲೆಗಾರ ಸತ್ತ ವ್ಯಕ್ತಿಯ ರಕ್ತದಲ್ಲಿ ವ್ಯಕ್ತಿಯೊಬ್ಬನ ಭಾವಚಿತ್ರ ಬಿಡಿಸಿ ಹೋಗಿರುತ್ತಾನೆ. ವಿಚಾರಣೆಗಿಳಿಯುವ ಪೊಲೀಸರಿಗೆ ಸೈಕೋ ಕಿಲ್ಲರ್‌ ಸುಳಿವು ಸಿಗುತ್ತದೆ – ‘BORDER TOWN MURAL MURDERS’ ಫಿನ್‌ಲ್ಯಾಂಡ್‌ ಸಿನಿಮಾ ನೆಟ್‌ಪ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಇದು ಸ್ಲೋ ಬರ್ನ್‌ ಸಿನಿಮಾ. ಹೌದು, ಸಿನಿಮಾ ನಿಧಾನಗತಿಯಲ್ಲಿ ಸಾಗುತ್ತದೆ. ಆದರೆ ವಿಷಯ ಬಹಳ ಇದೆ. ಆತನ ಹೆಸರು ಕರಿ. ಚತುರ ಡಿಟೆಕ್ಟಿವ್. ತನ್ನ ಕೆಲಸವನ್ನು ತುಂಬಾ ಪ್ರೀತಿಸುವವನು. ದಿನವಿಡೀ ಕೆಲಸದ ಚಿಂತೆ. ಕೆಲಸದ ಒತ್ತಡದಿಂದ ಖಿನ್ನತೆಗೊಳಗಾಗಿ ರಜೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿರುತ್ತಾನೆ. ಇವನಿಗೊಂದು ವಿಶೇಷ ಪ್ರತಿಭೆ ಒಲಿದಿರುತ್ತದೆ. ಇವನು ವಿಚಾರಣೆ ಮಾಡಿದ ಕೇಸ್‌ಗಳು, ಅದರ ಜಾಗ ಹಾಗೂ ಕ್ರೈಂ ಸೀನಲ್ಲಿ ಇದ್ದ ಪ್ರತಿ ವಸ್ತುಗಳು ಇವನ ಮಸ್ತಕದಲ್ಲಿರುತ್ತವೆ. ಹೀಗಿರುವಾಗ ಒಂದು ಕೊಲೆ ನಡೆಯುತ್ತದೆ. ಕೊಲೆ ಮಾಡಿದ ವ್ಯಕ್ತಿ, ಸತ್ತ ವ್ಯಕ್ತಿಯ ರಕ್ತದಲ್ಲಿ ವ್ಯಕ್ತಿಯೊಬ್ಬನ ಭಾವಚಿತ್ರ ಬಿಡಿಸಿ ಹೋಗಿರುತ್ತಾನೆ.

ವಿಚಾರಣೆಗಿಳಿಯುವ ಪೊಲೀಸರಿಗೆ ಈತನೊಬ್ಬ ಸೈಕೊ ಕಿಲ್ಲರ್ ಎನ್ನುವ ಸುಳಿವು ಸಿಗುತ್ತದೆ. ಆದರೆ, ಆತ ಜೈಲಿನಲ್ಲಿ ಇರುತ್ತಾನೆ. ಚಿತ್ರದ ನಾಯಕ ಕರಿ ಇವನನ್ನು ಬಂಧಿಸಿ ಜೈಲಿಗೆ ಕಳಿಸಿರುತ್ತಾನೆ. ಈ ಕೇಸನ್ನು ನಾಯಕ ಕರಿಗೆ ವಹಿಸಲಾಗುತ್ತದೆ. ಕೊಲೆ ಮಾಡಿದ್ದು ಯಾರು? ಸತ್ತ ವ್ಯಕ್ತಿ ಯಾರು? ಏನು ಸಂಬಂಧ? ಎಂಬುದನ್ನು ನೀವು ಚಿತ್ರದಲ್ಲಿ ನೋಡಿ. ಸಿನಿಮಾದ ಟೆಕ್ನಿಕಾಲಿಟಿ ಕುರಿತಂತೆ ಹೆಚ್ಚೇನೂ ಮಾತನಾಡುವ ಹಾಗಿಲ್ಲ. ಕ್ಯಾಮೆರಾ ಕೆಲಸ ಅದಕ್ಕೆ ಬೇಕಾದ ಡಿಐ ಅದ್ಭುತ ಎಂದೇ ಹೇಳಬಹುದು. ಬಹುಪಾಲು ಸಿನಿಮಾದ ಸನ್ನಿವೇಶಗಳು ರಾತ್ರಿಯಲ್ಲೇ ಇದ್ದು, ವಿಶೇಷ ಆಸ್ಥೆಯಿಂದ ಲೈಟಿಂಗ್‌ ಮಾಡಲಾಗಿದೆ. ಹಾಗೆಯೇ ಸೌಂಡ್ ಡಿಸೈನ್. ಅದು ರೀರೆಕಾರ್ಡಿಂಗ್ ಆಗಿರಬಹುದು, ಸಿಂಕ್ ಸೌಂಡ್ ಆಗಿರಬಹುದು.. ಅದ್ಭುತವಾಗಿ ಡಿಸೈನ್ ಮಾಡಲಾಗಿದೆ. ತಾಳ್ಮೆ ಬೇಡುವ ಸಿನಿಮಾ ಉತ್ತಮ ಅನುಭವ ನೀಡುತ್ತದೆ.

ಸಿನಿಮಾ : BORDER TOWN MURAL MURDERS | ಭಾಷೆ :‍ಫಿನ್ನಿಷ್‌ | ನಿರ್ದೇಶನ : JUUSO SIRJAO | ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ : NETFLIX

Previous articleಬ್ಲಾಕ್‌ಬಸ್ಟರ್‌ ‘ಪುಷ್ಪ’ ಸಿನಿಮಾದ ಅವಕಾಶ ಮಿಸ್‌ ಮಾಡಿಕೊಂಡ ಐವರು ತಾರೆಯರು!
Next articleವಿಜಯ್‌ ಸೇತುಪತಿ ‘ಕಡೈಸಿ ವಿವಸಾಯಿ’ ಫೆ. 11ಕ್ಕೆ; ಎಂ.ಮಣಿಕಂಠನ್‌ ನಿರ್ದೇಶನದ ಸಿನಿಮಾ

LEAVE A REPLY

Connect with

Please enter your comment!
Please enter your name here