ಬ್ರಾಡ್‌ ಪಿಟ್‌ ನಟನೆಯ ‘ಬುಲೆಟ್‌ ಟ್ರೈನ್‌’ ಇಂಗ್ಲಿಷ್‌ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ಜುಲೈ 15ಕ್ಕೆ ಸಿನಿಮಾ ಥಿಯೇಟರ್‌ಗೆ ಬರಲಿದೆ. ಜೋ ಕಿಂಗ್‌, ಸಾಂಡ್ರಾ ಬುಲಕ್‌, ಆಂಡ್ರ್ಯೂ ಕೊಜಿ, ಆರೋನ್‌ ಟೈಲರ್‌, ಬ್ಯಾಡ್‌ ಬನ್ನಿ ಸಿನಿಮಾ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಬ್ರಾಡ್‌ ಪಿಟ್‌ ಅಭಿನಯದ ‘ಬುಲೆಟ್‌ ಟ್ರೈನ್‌’ ಹಾಲಿವುಡ್‌ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ಇದೊಂದು ಭರಪೂರ ಆಕ್ಷನ್‌ ಸಿನಿಮಾ ಎನ್ನುವುದು ತಿಳಿದುಬರುತ್ತದೆ. ಕಾಮಿಡಿಯ ಲೇಪವೂ ಇದೆ. ಈ ಹಿಂದೆ ‘ಹಾಬ್ಸ್‌ ಅಂಡ್‌ ಶಾ’, ‘ಡೆಡ್‌ಪೂಲ್‌2’ ಸಿನಿಮಾಗಳನ್ನು ನಿರ್ದೇಶಿಸಿದ್ದ ಡೇವಿಡ್‌ ಲೀಚ್‌ ‘ಬುಲೆಟ್‌ ಟ್ರೈನ್‌’ ನಿರ್ದೇಶಿಸಿದ್ದಾರೆ. ಜಪಾನ್‌ನ ನಾನ್‌ ಸ್ಟಾಪ್‌ ಬುಲೆಟ್‌ ಟ್ರೈನ್‌ನಲ್ಲಿ ನಡೆಯುವ ಥ್ರಿಲ್ಲರ್‌ – ಡ್ರಾಮಾ ಚಿತ್ರದ ಕಥಾವಸ್ತು. ಒಂದು ಬ್ರೀಫ್‌ಕೇಸ್‌ಗಾಗಿ ಹತ್ತಾರು ಜನರು ಹೊಡೆದಾಡುತ್ತಾರೆ. ಹೀರೋಗೆ (ಬ್ರಾಡ್‌ ಪಿಟ್‌) ಇದು ಆತನ ವೃತ್ತಿ ಬದುಕಿನ ಕೊನೆಯ ಅಸೈನ್‌ಮೆಂಟ್‌ ಎನ್ನುವಂತೆ ತೋರಿಸಲಾಗಿದೆ. ಜೋ ಕಿಂಗ್‌, ಸಾಂಡ್ರಾ ಬುಲಕ್‌, ಆಂಡ್ರ್ಯೂ ಕೋಜಿ, ಆರೋನ್‌ ಟೈಲರ್‌, ಬ್ಯಾಡ್‌ ಬನ್ನಿ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಪಾನೀಸ್‌ ಕಾದಂಬರಿಯೊಂದನ್ನು ಆಧರಿಸಿದ ಸಿನಿಮಾ 2022ರ ಜುಲೈ 15ರಂದು ತೆರೆಕಾಣಲಿದೆ. ಚಿತ್ರದಲ್ಲಿ ಸಾಂಡ್ರಾ ಬುಲಕ್‌ ನಟಿಸಿರುವ ಪಾತ್ರದಲ್ಲಿ ಲೇಡಿ ಗಾಗಾ ನಟಿಸಬೇಕಿತ್ತು. ಡೇಟ್ಸ್‌ ಸಮಸ್ಯೆಯಿಂದಾಗಿ ಅವರು ಸಿನಿಮಾತಂಡದಿಂದ ಹೊರಗುಳಿದರು.

Previous articleಮಣಿರತ್ನಂ ‘ಪೊನ್ನಿಯಿನ್‌ ಸೆಲ್ವನ್‌’ ಸಿನಿಮಾ ಫಸ್ಟ್‌ಲುಕ್‌ ಪೋಸ್ಟರ್ಸ್‌ ಬಿಡುಗಡೆ
Next articleIndia’s Ultimate Warrior ನಿರೂಪಕನಾಗಿ ವಿದ್ಯುತ್‌ ಜಾಮ್‌ವಾಲ್‌; discovery+ನಲ್ಲಿ ಶೋ

LEAVE A REPLY

Connect with

Please enter your comment!
Please enter your name here