ಬಾಲಿವುಡ್‌ ನಟ ವಿದ್ಯುತ್‌ ಜಾಮ್‌ವಾಲ್‌ ನಿರೂಪಣೆಯ ‘India’s Ultimate Warrior’ ಶೋ ನಾಳೆ ಮಾರ್ಚ್‌ 4ರಿಂದ ಡಿಸ್ಕವರಿ ಪ್ಲಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ನಂತರ ಮಾರ್ಚ್‌ 14ರಿಂದ ಡಿಸ್ಕವರಿ ಚಾನೆಲ್‌ನಲ್ಲಿ ಮೂಡಿಬರಲಿದೆ.

Discovery+ ನ ‘India’s Ultimate Warrior’ ಶೋನೊಂದಿಗೆ ಬಾಲಿವುಡ್‌ ಆಕ್ಷನ್‌ ಹೀರೋ ವಿದ್ಯುತ್‌ ಜಾಮ್‌ವಾಲ್‌ ನಿರೂಪಕನಾಗಿ ಹೊಸ ಪಾತ್ರ ನಿರ್ವಹಿಸುತ್ತಿದ್ದಾರೆ. ಇದೊಂದು ಸಾಹಸಮಯ ಶೋ ಆಗಿದ್ದು, ವಿದ್ಯುತ್‌ ಮತ್ತು ನಾಲ್ವರು ಮೆಂಟರ್‌ಗಳು ಸ್ಪರ್ಧಿಗಳನ್ನು ಹುರಿದುಂಬಿಸುತ್ತಾ ಅವರಿಗೆ ಆತ್ಮವಿಶ್ವಾಸ ತುಂಬು ಕೆಲಸ ಮಾಡಲಿದ್ದಾರೆ. ಇಲ್ಲಿನ ಸವಾಲುಗಳನ್ನು ಗೆಲ್ಲಲು ಸ್ಪರ್ಧಿಗಳು ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೊಂದಿರಬೇಕಾಗುತ್ತದೆ. ನಾಳೆ ಮಾರ್ಚ್‌ 4ರಿಂದ ಶೋ discovery+ ನಲ್ಲಿ ಸ್ಟ್ರೀಮ್‌ ಆಗಲಿದ್ದು, ಮಾರ್ಚ್‌ 14ರಿಂದ ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

India’s Ultimate Warrior ಬಗ್ಗೆ ಮಾತನಾಡುವ ನಟ ವಿದ್ಯುತ್‌ ಜಾಮ್‌ವಾಲ್‌, “ಇದೊಂದು ಕ್ಲಿಷ್ಟ ಮತ್ತು ಸವಾಲುಗಳ ರಿಯಾಲಿಟಿ ಶೋ. ಮಾನಸಿಕ, ದೈಹಿಕ ಸದೃಢತೆ ಮತ್ತು ಉತ್ಸಾಹದಿಂದ ತೊಡಗಿಸಿಕೊಳ್ಳುವುದು ಅವಶ್ಯ. ಇಲ್ಲಿ ಸ್ಪರ್ಧಿಗಳಿಗೆ ಕಠಿಣ ಟಾಸ್ಕ್‌ಗಳನ್ನು ನೀಡಲಿದ್ದೇವೆ. ಇವರ ಪೈಕಿ ಯಾರು ಎಲ್ಲಾ ಸವಾಲುಗಳನ್ನು ಗೆಲ್ಲುತ್ತಾರೋ ಅವರೇ India’s Ultimate Warrior” ಎನ್ನುತ್ತಾರೆ. ನಟ ವಿದ್ಯುತ್‌ ಜಾಮ್‌ವಾಲ್‌ ‘ಖುದಾ ಹಾಫಿಜ್‌’, ‘ಕಮ್ಯಾಂಡೊ’, ‘ಫೋರ್ಸ್‌’ ಆಕ್ಷನ್‌ ಚಿತ್ರಗಳೊಂದಿಗೆ ಬಾಲಿವುಡ್‌ನಲ್ಲಿ ಗುರಿತಿಸಿಕೊಂಡಿದ್ದಾರೆ. 2021ರಲ್ಲಿ ಅವರ ‘ಸನಕ್‌’ ಸಿನಿಮಾ ಬಿಡುಗಡೆಯಾಗಿತ್ತು. ಈ ವರ್ಷ ಅವರ ನಟನೆಯ ‘ಖುದಾ ಹಾಫಿಜ್‌ 2’ ಸಿನಿಮಾ ಬಿಡುಗಡೆಯಾಗಲಿದೆ.

Previous articleಟ್ರೈಲರ್‌ | ಬ್ರಾಡ್‌ ಪಿಟ್‌ ಆಕ್ಷನ್‌ ಸಿನಿಮಾ ‘ಬುಲೆಟ್‌ ಟ್ರೈನ್‌’; ಜುಲೈ 15ರಂದು ತೆರೆಗೆ
Next articleಪುನೀತ್‌ ರಾಜಕುಮಾರ್‌ ಅವರನ್ನು ಸ್ಮರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿದ ಕಿರೀಟಿ

LEAVE A REPLY

Connect with

Please enter your comment!
Please enter your name here