2018ರ ಜನಪ್ರಿಯ ಬ್ರಿಟಿಷ್‌ ಸರಣಿ ‘Press’ ಹಿಂದಿ ಅವತರಣಿಕೆ ‘The Broken News’ ಮೂಲಕ ನಟಿ ಸೋನಾಲಿ ಬೇಂದ್ರೆ ಓಟಿಟಿಗೆ ಪದಾರ್ಪಣೆ ಮಾಡಿದ್ದಾರೆ. ವಿನಯ್‌ ವೈಕುಲ್‌ ನಿರ್ದೇಶನದ ಸರಣಿ ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಕ್ಯಾನ್ಸರ್‌ ಗೆದ್ದ ನಟಿ ಸೋನಾಲಿ ಬೇಂದ್ರೆ ಲೈಮ್‌ಲೈಟ್‌ಗೆ ಮರಳಿದ್ದಾರೆ. ‘The Broken News’ ವೆಬ್‌ ಸರಣಿ ಮೂಲಕ ಅವರ ಕಮ್‌ಬ್ಯಾಕ್‌ ಆಗಿದೆ. 2018ರಲ್ಲಿ ಮೂಡಿಬಂದ ಜನಪ್ರಿಯ ಬ್ರಿಟಿಷ್‌ ಸರಣಿ ‘Press’ ಹಿಂದಿ ಅವತರಣಿಕೆಯಿದು. ZEE5ನಲ್ಲಿ ಸರಣಿ ಸ್ಟ್ರೀಮ್‌ ಆಗುತ್ತಿದ್ದು ನಟಿ ಸೋನಾಲಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. “ಇದು ನನಗೆ ಆರಂಭ ಎನಿಸುತ್ತಿದೆ. ದೇವರು ನನಗೆ ಎರಡನೇ ಅವಕಾಶ ಕಲ್ಪಿಸಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ನಾನೀಗ accidental actor ಅಲ್ಲ. ನಾನಾಗೇ ಈ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ತುಂಬಾ ಖುಷಿಯಿಂದ ನಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಇದು ಹೀಗೇ ಮುಂದುವರೆಯಲಿದೆ” ಎಂದು ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ವಿನಯ್‌ ವೈಕುಲ್‌ ನಿರ್ದೇಶನದ ‘The Broken News’ ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ಜೈದೀಪ್‌ ಅಹ್ಲವತ್‌, ಶ್ರಿಯಾ ಪಿಲಗಾವ್‌ಕರ್‌, ಇಂದ್ರನೇಲ್‌ ಸೇನ್‌ಗುಪ್ತ, ತಾರಕ್‌ ರೈನಾ, ಆಕಾಶ್‌ ಖುರಾನಾ ನಟಿಸಿದ್ದಾರೆ.

Previous articleವೀಡಿಯೊ | ಡಾರ್ಲಿಂಗ್‌ ಕೃಷ್ಣ ‘ದಿಲ್ ಪಸಂದ್’ ಫಸ್ಟ್ ಗ್ಲಿಮ್ಸ್‌
Next articleಅಕ್ಕಿನೇನಿ ನಾಗಾರ್ಜುನ ‘ನಂದಿ ಅಸ್ತ್ರ’; ‘ಬ್ರಹ್ಮಾಸ್ತ್ರ’ ಸಿನಿಮಾದ ನಟನ ಲುಕ್‌ ಬಿಡುಗಡೆ

LEAVE A REPLY

Connect with

Please enter your comment!
Please enter your name here