ಜನಪ್ರಿಯ ‘Die Hard’ ಸರಣಿ ಸಿನಿಮಾಗಳ ಖ್ಯಾತಿಯ ಹಾಲಿವುಡ್‌ ನಟ Bruce Willis ನಟನೆಗೆ ವಿದಾಯ ಘೋಷಿಸಿದ್ದಾರೆ. Aphasia ನ್ಯೂನ್ಯತೆಯಿಂದ ಬಳಲುತ್ತಿರುವ ಅವರು ಇನ್ನು ಮುಂದೆ ಅಭಿನಯಿಸುವುದಿಲ್ಲ ಎಂದು ನಟನ ಕುಟುಂಬದವರು ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ.

ಎಂಬತ್ತು, ತೊಂಬತ್ತರ ದಶಕಗಳ ಜನಪ್ರಿಯ ಹಾಲಿವುಡ್‌ ನಟ Bruce Willis ಇನ್ನು ಮುಂದೆ ನಟಿಸುವುದಿಲ್ಲ. ‘Die Hard’ ಸರಣಿ ಸಿನಿಮಾಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದ 67ರ ಹರೆಯದ ನಟ ಸ್ಟ್ರೋಕ್‌ನಿಂದ ಸಂಭವಿಸುವ Apahasia ನ್ಯೂನ್ಯತೆಯಿಂದ ಬಳಲುತ್ತಿದ್ದಾರೆ. ಇದು ನರದೌರ್ಬಲ್ಯಕ್ಕೆ ಸಂಬಂಧಿಸಿದ ನ್ಯೂನ್ಯತೆ. ಮಾತು, ನೆನಪು, ಸರಾಗವಾದ ಓದಿಗೆ ತೊಡಕನ್ನು ಉಂಟುಮಾಡುವ ಈ ದೌರ್ಬಲ್ಯಕ್ಕೆ ನಟ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ Bruce Willis ಅವರ ತಾರಾಪತ್ನಿ Demi moore ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿದ್ದು, “ನಿಮ್ಮ ನೆಚ್ಚಿನ ನಟ Bruce Willis ಅವರು ಅನಾರೋಗ್ಯಕ್ಕೀಡಾಗಿದ್ದು, Aphasiaದಿಂದ ಬಳಲುತ್ತಿದ್ದಾರೆ. ಹಾಗಾಗಿ ತಾವು ಬಹುವಾಗಿ ಪ್ರೀತಿಸುವ ನಟನೆಯನ್ನು ಅವರು ತೊರೆಯಬೇಕಾಗಿದೆ. ಎಂದಿನಂತೆ ಅವರೆಡೆಗೆ ನಿಮ್ಮ ಪ್ರೀತಿ, ಅಭಿಮಾನ ಇರಲಿ” ಎಂದಿದ್ದಾರೆ.

80ರ ದಶಕದ ಆರಂಭದಲ್ಲಿ ಪುಟ್ಟ ಪಾತ್ರಗಳ ಮೂಲಕ Bruce Willis ಸಿನಿಮಾಗೆ ಪರಿಚಯವಾದರು. Sidney Lumet ನಿರ್ದೇಶನದ ‘The Verdict’ ಆರಂಭದ ಅವರ ಹೆಸರಿಸಬಹುದಾದ ಚಿತ್ರಗಳಲ್ಲೊಂದು. Cybill Shepherd ಜೋಡಿಯಾಗಿ ನಟಿಸಿದ ‘Moonlighting’ ಟೀವಿ ಸರಣಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. 1988ರಲ್ಲಿ ತೆರೆಕಂಡ ‘Die Hard’ ಆಕ್ಷನ್‌ ಸಿನಿಮಾ ಮೂಲಕ ಅವರು ಸ್ಟಾರ್‌ ಆದರು. (ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ ‘ನಿಷ್ಕರ್ಷ’ ಸಿನಿಮಾ ‘Die Hard’ ಪ್ರೇರಣೆಯಿಂದ ತಯಾರಾದ ಕನ್ನಡ ಸಿನಿಮಾ). ‘Die Hard’ ಫ್ರಾಂಚೈಸ್‌ ಸೇರಿದಂತೆ ಹಲವು ಮಹತ್ವದ ಸಿನಿಮಾಗಳು ಅವರ ಹೆಸರಿಗೆ ದಾಖಲಾಗಿವೆ. ನಾಲ್ಕು ದಶಕಗಳ ಸಿನಿಬದುಕಿನಲ್ಲಿ ಅವರು ಐದು ಬಾರಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗೆ ನಾಮಿನೇಟ್‌ ಅಗಿದ್ದು, ‘Moonlighting’ ಸರಣಿಗಾಗಿ ಪ್ರಶಸ್ತಿ ಪಡೆದಿದ್ದಾರೆ. ಮೂರು ಬಾರಿ Emmy ಪ್ರಶಸ್ತಿಗೆ ನಾಮಿನೇಟ್‌ ಆಗಿದ್ದು ಎರಡು ಬಾರಿ (Moonlighting ಮತ್ತು Friends) ಪ್ರಶಸ್ತಿಯ ಗೌರವ ಪಡೆದಿದ್ದಾರೆ.

LEAVE A REPLY

Connect with

Please enter your comment!
Please enter your name here