‘ಉಪ್ಪೇನ’ ತೆಲುಗು ಸಿನಿಮಾ ಖ್ಯಾತಿಯ ಬುಚ್ಚಿ ಬಾಬು ನಿರ್ದೇಶನದಲ್ಲಿ ರಾಮ್ ಚರಣ್ ತೇಜಾ ನಟಿಸಲಿದ್ದಾರೆ. ಇದೊಂದು ಕ್ರೀಡಾ ಸಿನಿಮಾ ಎನ್ನಲಾಗಿದ್ದು, ಸಾಯಿ ಪಲ್ಲವಿ ಚಿತ್ರದ ನಾಯಕಿ ಎನ್ನುವುದು ಖಚಿತವಾಗಿದೆ. ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದಾರೆ ಎನ್ನುವುದು ವಿಶೇಷ.
ಟಾಲಿವುಡ್ ನಟ ರಾಮ್ ಚರಣ್ ಅವರ 16ನೇ ಚಿತ್ರವನ್ನು ‘ಉಪ್ಪೇನ’ ಖ್ಯಾತಿಯ ಬುಚ್ಚಿ ಬಾಬು ನಿರ್ದೇಶಿಸುತ್ತಿದ್ದಾರೆ. ಇದೊಂದು ಕ್ರೀಡಾ ಸಿನಿಮಾ ಆಗಲಿದ್ದು, ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಬುಚ್ಚಿ ಬಾಬು ಅವರು ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ಸಾಯಿ ಪಲ್ಲವಿ ಅವರನ್ನು ಭೇಟಿಯಾಗಿ ಸ್ಕ್ರಿಪ್ಟ್ ಹೇಳಿದ್ದಾರೆ. ಸಾಯಿ ಪಲ್ಲವಿ ಸ್ಕ್ರಿಪ್ಟ್ ಒಪ್ಪಿಕೊಂಡಿದ್ದು, ಸಿನಿಮಾದ ಪ್ರೀ – ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ. ಈ ಸಿನಿಮಾದಲ್ಲಿ ನಟಿ ಲಯಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಚಿತ್ರವು ಕರಾವಳಿ ಹಿನ್ನೆಲೆ ಹೊಂದಿದ್ದು, 300 ಕೋಟಿ ರೂಪಾಯಿಗಳ ದುಬಾರಿ ಬಜೆಟ್ನಲ್ಲಿ ನಿರ್ಮಾಣವಾಗಲಿದೆ. ಭಾರತೀಯ ಸಿನಿಮಾ ಕಂಡ ಜನಪ್ರಿಯ ಸಂಗೀತ ಸಂಯೋಜಕ ಎ ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ ಎನ್ನುವುದು ವಿಶೇಷ.
ರಾಮ್ ಚರಣ್ ಪ್ರಸ್ತುತ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ.