ಗೌತಮ್‌ ಸುಧಾಕರ್‌, ಪವನ್‌ ಸಂಕ್‌, ಸಹನಾ ನಟಿಸಿರುವ ‘ಯಥಾಭವ’ ಸಿನಿಮಾಗೆ ಸೆನ್ಸಾರ್‌ ಮಂಡಳಿಯಿಂದ U/A ಪ್ರಮಾಣಪತ್ರ ಸಿಕ್ಕಿದೆ. ಗೌತಮ್‌ ಬಸವರಾಜು ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸಿರುವ ಕೋರ್ಟ್‌ ರೂಂ ಡ್ರಾಮಾ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.

ಗೌತಮ್ ಬಸವರಾಜು ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ‘ಯಥಾಭವ’ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ದೊರೆತಿದೆ. ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಬಿಡುಗಡೆಯಾಗಿದ್ದು, ಸದ್ಯದಲ್ಲೇ ಸಿನಿಮಾ ತೆರೆಕಾಣಲಿದೆ. ಕೋರ್ಟ್‌ ರೂಂ ಜಾನರ್‌ ಕಥಾಹಂದರದ ಚಿತ್ರದಲ್ಲಿ ಪವನ್ ಶಂಕರ್ ಹಾಗೂ ಸಹನ ಸುಧಾಕರ್ ಮುಖ್ಯಭೂಮಿಕೆಯಲ್ಲಿದ್ದಾರೆ. ನಟ ರಾಕ್‌ಲೈನ್ ಸುಧಾಕರ್ ಅವರ ಪುತ್ರ ಗೌತಮ್ ಸುಧಾಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಉಳಿದ ತಾರಾಗಣದಲ್ಲಿ ದತ್ತಣ್ಣ, ಬಾಲ ರಾಜವಾಡಿ, ಗೋಪಾಲಕೃಷ್ಣ ದೇಶಪಾಂಡೆ, ಮಾಸ್ಟರ್ ಶಮಂತ್, ನೀನಾಸಂ ಆನಂದ್, ಉಮಾ ಹೆಬ್ಬಾರ್, ಮಹೇಶ್ ಕಾಳಿ ನಟಿಸಿದ್ದಾರೆ.

Macht entertainments ಬ್ಯಾನರ್‌ ಅಡಿಯಲ್ಲಿ ಸುಜಾತ ಕುಮಾರಿ ಮತ್ತು ಅನಿಲ್ ಕುಮಾರ್ ಬಿ ಎನ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಹರ್ಷ್ ಮಿಶ್ರ ಛಾಯಾಗ್ರಹಣ, ಹರೀಶ್ ಚೌಧರಿ ಸಂಕಲನ, ಕುಂಗ್ಫು ಚಂದ್ರು ಸಾಹಸ ನಿರ್ದೇಶನ, ಸುಚಿತ್ ಚವ್ಹಾಣ್ ನೃತ್ಯ ನಿರ್ದೇಶನ ಹಾಗೂ ಸ್ಮಿತ ಕುಲಕರ್ಣಿ ಕಲಾ ನಿರ್ದೇಶನವಿದೆ. ಉತ್ಸವ್ ಶ್ರೇಯಸ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸುರೇಶ್ ರೆಡ್ಡಿ ಹಾಗೂ ಅಭಿಷೇಕ್ ಅಕ್ಕಣ್ಣನವರ್ ಹಾಡುಗಳನ್ನು ರಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here