ವಿಜಯ್‌ ನಿರ್ದೇಶನದ ‘Mission Chapter 1’ ತಮಿಳು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಅರುಣ್‌ ವಿಜಯ್‌ ಮತ್ತು ಆಮಿ ಜಾಕ್ಸನ್‌ ಮುಖ್ಯಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಇಂದು ತೆರೆಕಂಡಿದೆ.

ಅರುಣ್ ವಿಜಯ್ ಮುಖ್ಯಭೂಮಿಕೆಯಲ್ಲಿರುವ ‘Mission Chapter 1’ ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಲನಚಿತ್ರವನ್ನು ವಿಜಯ್‌ ನಿರ್ದೇಶಿಸಿದ್ದಾರೆ. ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಎ ಮಹದೇವ್ ರಚಿಸಿದ್ದಾರೆ. ಟ್ರೇಲರ್‌ನಲ್ಲಿ ಅರುಣ್ ವಿಜಯ್ ತನ್ನ ಮಗಳು ಯಾವುದೋ ಒಂದು ತೊಂದರೆಯಲ್ಲಿರುವುದನ್ನು ಕಂಡುಕೊಂಡು ಮಗಳನ್ನು ಉಳಿಸುವ ಪ್ರಯತ್ನದಲ್ಲಿ ಪೊಲೀಸರ ವಿರುದ್ಧ ಹೋರಾಡುತ್ತಾನೆ. ನಿರಪರಾಧಿಯಾಗಿದ್ದರೂ ಸಹ ವಿದೇಶದಲ್ಲಿ ಪೊಲೀಸರ ಸೆರೆಯಲ್ಲಿ ಸಿಲುಕುತ್ತಾನೆ. ಅಲ್ಲಿಂದ ಹೇಗೆ ತಪ್ಪಿಸಿಕೊಂಡು ತನ್ನ ಮಗಳನ್ನು ರಕ್ಷಿಸುತ್ತಾನೆ ಎಂಬುದನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಚಿತ್ರದಲ್ಲಿ ಆಮಿ ಜಾಕ್ಸನ್ ಪೊಲೀಸ್‌ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ನಿಮಿಷಾ ಸಜಯನ್ ಪ್ರಮುಖ ಪಾತ್ರದಲ್ಲಿದ್ದಾರೆ. Lyca Productions ಬ್ಯಾನರ್‌ ಅಡಿಯಲ್ಲಿ ಸುಭಾಸ್ಕರನ್‌ ನಿರ್ಮಿಸಿರುವ ಈ ಚಿತ್ರದಲ್ಲಿ ಅಭಿ ಹಾಸನ್, ಭರತ್ ಬೋಪಣ್ಣ, ಬೇಬಿ ಇಯಾಲ್, ವಿರಾಜ್ ಎಸ್ ಮತ್ತು ಜೇಸನ್ ಶಾ ಸಹ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜಿ ವಿ ಪ್ರಕಾಶ್ ಸಂಗೀತ ಸಂಯೋಜಿಸಿದ್ದು, ಸಂದೀಪ್ ಕೆ ವಿಜಯ್ ಛಾಯಾಗ್ರಹಣ, ಆಂಟನಿ ಸಂಕಲನ ನಿರ್ವಹಿಸಿದ್ದಾರೆ. ಜನವರಿ 12ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here