ದರ್ಶನ್‌ ‘ಕ್ರಾಂತಿ’ ಶುರುವಾಗಿದೆ. ಕೋವಿಡ್‌ ದಿನಗಳು ಮುಗಿದು ಸುಮಾರು ಎರಡು ವರ್ಷಗಳ ತರುವಾಯು ನಟ ದರ್ಶನ್ ಶೂಟಿಂಗ್ ಆರಂಭಿಸಿದ್ದಾರೆ. ಈ ವೀಡಿಯೋದಲ್ಲಿ ಅವರು ತಮ್ಮ ಬೆಳಗಿನ ದಿನಚರಿ ಹೇಳಿಕೊಂಡಿರುವುದಲ್ಲದೆ ನೂತನ ಸಿನಿಮಾದ ತಂಡವನ್ನು ಪರಿಚಯಿಸಿದ್ದಾರೆ.

ಸ್ಟಾರ್ ಹೀರೋನ ದಿನಚರಿ ಹೇಗಿರುತ್ತದೆ? ಬೆಳಗ್ಗೆ ಆರಾಮಾಗಿ ಎದ್ದು ಬ್ರೇಕ್‌ಫಾಸ್ಟ್‌ ಮಾಡಿ ಶೂಟಿಂಗ್ ಸ್ಪಾಟ್‌ಗೆ ಬರುತ್ತಾರಾ? “ಸ್ಟಾರ್ ಆದರೇನು, ಲಕ್ಷಗಟ್ಟಲೆ ದುಡಿದರೇನಂತೆ ಶ್ರದ್ಧೆಯಿಂದ ಕೆಲಸ ಮಾಡದಿದ್ದರೆ ನಮ್ಮನ್ನು ಯಾರೂ ಕೇಳೋಲ್ಲ” ಎನ್ನುವ ದರ್ಶನ್‌ ತಮ್ಮ ಬೆಳಗಿನ ದಿನಚರಿಯನ್ನು ಈ ವೀಡಿಯೋದಲ್ಲಿ ಪರಿಚಯಿಸಿದ್ದಾರೆ. ಮುಂಜಾನೆ ಐದಕ್ಕೆ ಎದ್ದು ಏಳೂವರೆವರೆಗೆ ಜಿಮ್‌ನಲ್ಲಿ ಮೈ ಹುರಿಗೊಳಿಸುವ ಅವರು ನಂತರ ಸಿದ್ಧರಾಗಿ ದೇವರನ್ನು ನೆನೆದು ಶೂಟಿಂಗ್ ಸ್ಪಾಟ್‌ಗೆ ಹಾಜರಾಗುತ್ತಾರೆ. ಮನೆಯಿಂದ ‘ಕ್ರಾಂತಿ’ ಮುಹೂರ್ತಕ್ಕೆ ಬಂದ ಅವರು ತಮ್ಮ ನೂತನ ಚಿತ್ರದ ತಂಡವನ್ನು ಪರಿಚಯಿಸುವ ಈ ವೀಡಿಯೋ ಇಲ್ಲಿದೆ ನೋಡಿ.

Previous articleಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ; ‘ದಿ ಗ್ರೇಟ್ ಇಂಡಿಯನ್ ಕಿಚನ್’ ಅತ್ಯುತ್ತಮ ಸಿನಿಮಾ
Next articleರೆಹಮಾನ್ ಸಂಯೋಜನೆಗೆ ಗೀತೆ ರಚಿಸಿದ ವಾಸುಕಿ ವೈಭವ್; ಇದು ಶಿರಡಿ ಸಾಯಿ ಸ್ಮರಣೆ

LEAVE A REPLY

Connect with

Please enter your comment!
Please enter your name here