ವಿಶಾಲ್‌ ಆತ್ರೇಯ ನಿರ್ದೇಶನದ ‘ತತ್ಸಮ ತದ್ಭವ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಮೇಘನಾ ರಾಜ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಿದು. ಪನ್ನಗ ಭರಣ ನಿರ್ಮಾಣದ ಸಿನಿಮಾ ಸೆಪ್ಟೆಂಬರ್‌ 15ರಂದು ತೆರೆಗೆ ಬರಲಿದೆ.

ಮೇಘನಾ ರಾಜ್ ಸರ್ಜಾ ಮತ್ತು ಪ್ರಜ್ವಲ್‌ ದೇವರಾಜ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ತತ್ಸಮ ತದ್ಭವ’ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಬಾಲಾಜಿ ಮನೋಹರ್‌, ದೇವರಾಜ್‌, ಶೃತಿ, ಟಿ ಎಸ್‌ ನಾಗಾಭರಣ ಅಭಿನಯಿಸಿದ್ದಾರೆ. ಟ್ರೈಲರ್‌ ಬಿಡುಗಡೆಯ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಧ್ರುವ ಸರ್ಜಾ, ಡಾಲಿ ಧನಂಜಯ ಚಿತ್ರತಂಡಕ್ಕೆ ಶುಭ ಕೋರಿದರು. ಅತ್ತಿಗೆ ಮೇಘನಾ ಅವರ ಸಿನಿಮಾ ಬಗ್ಗೆ ಮಾತನಾಡಿದ ಧ್ರುವ ಸರ್ಜಾ, ‘ಸಸ್ಪೆನ್ಸ್‌ ಕ್ರೈಮ್‌ ಥ್ರಿಲ್ಲರ್‌ ಅಂಶಗಳು ಟ್ರೈಲರ್‌ನಲ್ಲಿವೆ. ಇದರಲ್ಲಿನ ಒಂದು ಅಂಶ ನನಗೆ ಪರ್ಸನಲ್‌ ಆಗಿ ಕನೆಕ್ಟ್‌ ಆಯ್ತು. ಮೈ ಹಸ್ಬೆಂಡ್‌ ಈಸ್‌ ಮಿಸ್ಸಿಂಗ್‌ ಅಂತ ಅತ್ತಿಗೆ ಮೊದಲ ಶಾಟ್‌ನಲ್ಲೇ ಹೇಳುತ್ತಾರೆ. ಇಲ್ಲಿ ಅಣ್ಣ ಚಿರು ಮಿಸ್ಸಿಂಗ್ ಎನಿಸುತ್ತಿದೆ’ ಎಂದು ಚಿರಂಜೀವಿ ಸರ್ಜಾ ಅವರನ್ನು ನೆನಪು ಮಾಡಿಕೊಂಡರು.

ನಟ ಧನಂಜಯ್‌ ಅವರು ಮಾತನಾಡಿ, ”ಮೇಘನಾ ಜೊತೆ ನಾನು ‘ಅಲ್ಲಮ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದೇನೆ. ಹೊಸ ನಿರ್ದೇಶಕರು, ನಿರ್ಮಾಪಕರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಮೇಘನಾ ಮತ್ತು ಪ್ರಜ್ವಲ್‌ ಅವರನ್ನು ಭಿನ್ನ ರೀತಿಯಲ್ಲಿ ತೋರಿಸಲಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಈ ಸಿನಿಮಾ ಹಿಟ್‌ ಆಗಲಿದೆ’ ಎಂದರು. ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದು, ಶ್ರೀನಿವಾಸ್‌ ರಾಮಯ್ಯ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಪನ್ನಗ ನಾಗಾಭರಣ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Previous articleಅಂಕುಶ್ ಹಝ್ರಾ – ಪ್ರಿಯಾಂಕಾ ಸರ್ಕಾರ್ ‘ಕುರ್ಬಾನ್‌’ | ಸೈಬಲ್‌ ಮುಖರ್ಜಿ ಬೆಂಗಾಲಿ ಸಿನಿಮಾ
Next article‘ಚಂದ್ರಮುಖಿ 2’ ಆಡಿಯೋ ಬಿಡುಗಡೆ | ರಾಘವ ಲಾರೆನ್ಸ್‌ – ಕಂಗನಾ ಸಿನಿಮಾ ಸೆಪ್ಟೆಂಬರ್‌ 19ಕ್ಕೆ

LEAVE A REPLY

Connect with

Please enter your comment!
Please enter your name here