ಅರುಣ್‌ ವಸೀಗರನ್‌ ನಿರ್ದೇಶನದ ‘ದಿ ರೋಡ್‌’ ತಮಿಳು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ತ್ರಿಶಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಸ್ಪೆನ್ಸ್‌ – ಥ್ರಿಲ್ಲರ್‌ ಇದು. ತಮಿಳುನಾಡಿನ NH 44ನಲ್ಲಿ ನಡೆದ ಅಪಘಾತಗಳ ಸುತ್ತ ಹೆಣೆದ ಕತೆ. ಅಕ್ಟೋಬರ್‌ 6ರಂದು ಸಿನಿಮಾ ತೆರೆಕಾಣಲಿದೆ.

ತ್ರಿಶಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ದಿ ರೋಡ್‌’ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿ 10 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದ್ದು, ಈ ಸಸ್ಪೆನ್ಸ್‌ ಥ್ರಿಲ್ಲರ್‌ ರಿವೆಂಜ್‌ ಸ್ಟೋರಿಯನ್ನು ಅರುಣ್ ವಸೀಗರನ್ ನಿರ್ದೇಶಿಸಿದ್ದಾರೆ. ಚಿತ್ರದ ಟ್ರೈಲರ್‌ ಬಿಡುಗಡೆಯಾಗಿ 10 ಮಿಲಿಯನ್‌ ಅಧಿಕ ವೀಕ್ಷಣೆಯಾಗಿದ್ದು, ಈ ಸಂಭ್ರಮವನ್ನು ತ್ರಿಶಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ಸಂಭ್ರಮಿಸಿದ್ದಾರೆ.

ಚಲನಚಿತ್ರವು ನೈಜ ಜೀವನದ ಘಟನೆಗಳನ್ನು ಆಧರಿಸಿದೆ. ತಮಿಳುನಾಡಿನ NH 44ನಲ್ಲಿ ನಡೆದ ಅನೇಕ ಅಪಘಾತಗಳ ಸುತ್ತ ಕಥೆ ಸುತ್ತುತ್ತದೆ. ತ್ರಿಶಾ ಪಾತ್ರವು ಈ ಸಾವುಗಳ ಹಿಂದಿನ ಕಾರಣವನ್ನು ಬಹಿರಂಗಪಡಿಸಲು ಪ್ರಯತ್ನಿಸುತ್ತದೆ. ಅಂತಿಮವಾಗಿ ಇದಕ್ಕೆಲ್ಲಾ ಕಾರಣ ಡ್ರಗ್ ಕಾರ್ಟೆಲ್‌ ಎನ್ನುವುದು ಕ್ಲೈಮ್ಯಾಕ್ಸ್‌. ಈ ಹಿನ್ನೆಲೆಯ ಕುತೂಹಲಕಾರಿ ಕಥಾಹಂದರವಿದು. ಚಿತ್ರವನ್ನು AAA Cinemaa Pvt Limited ನಿರ್ಮಿಸಿದೆ. ಚಿತ್ರದಲ್ಲಿ ಡ್ಯಾನ್ಸಿಂಗ್ ರೋಸ್ ಶಬೀರ್, ಸಂತೋಷ್ ಪ್ರತಾಪ್, ಮಿಯಾ ಜಾರ್ಜ್, ಎಂಎಸ್ ಭಾಸ್ಕರ್, ವಿವೇಕ್ ಪ್ರಸನ್ನ, ವೇಲಾ ರಾಮಮೂರ್ತಿ, ಲಕ್ಷ್ಮಿ ಪ್ರಿಯಾ, ಸೆಮ್ಮಲರ್ ಅನ್ನಂ, ರಾಚ್ಚಸನ್ ವಿನೋತ್, ಕರುಪ್ಪು ನಂಬಿಯಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸ್ಯಾಮ್ ಸಿ ಎಸ್ ಸಂಗೀತ ಸಂಯೋಜಿಸಿದ್ದಾರೆ. ಅಕ್ಟೋಬರ್ 6ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here