ಪುರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ ದೇವರಕೊಂಡ ನಟಿಸುತ್ತಿರುವ ‘ಲಿಗರ್’ ಸಿನಿಮಾದ ಅಮೆರಿಕ ಶೂಟಿಂಗ್ ಶೆಡ್ಯೂಲ್ ಪೂರ್ಣಗೊಂಡಿದೆ. ಲೆಜೆಂಡರಿ ಬಾಕ್ಸರ್‌ ಮೈಕ್ ಟೈಸನ್‌ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಸೆಲೆಬ್ರೇಷನ್ ಫೋಟೊಗಳನ್ನು ಚಿತ್ರದ ಸಹನಿರ್ಮಾಪಕಿ, ನಟಿ ಚಾರ್ಮಿ ಕೌರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಜಯ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅಭಿನಯದ ‘ಲಿಗರ್‌’ ಸಿನಿಮಾದ ಅಮೆರಿಕ ಶೂಟಿಂಗ್ ಶೆಡ್ಯೂಲ್ ಪೂರ್ಣಗೊಂಡಿದೆ. ಖ್ಯಾತ ಬಾಕ್ಸರ್‌ ಟೈಸನ್‌ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅಮೆರಿಕದಲ್ಲಿ ಚಿತ್ರಿಸಿದ ಸನ್ನಿವೇಶಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾಗೆ ನಟಿ ಚಾರ್ಮಿ ಕೌರ್ ಸಹನಿರ್ಮಾಪಕಿ. ಶೂಟಿಂಗ್ ಶೆಡ್ಯೂಲ್ ಮುಗಿಸಿದ ನಂತರ ನಡೆದ ವ್ರ್ಯಾಪ್‌ – ಅಪ್‌ ಪಾರ್ಟಿ ಫೋಟೊಗಳನ್ನು ಅವರು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೊದಲ್ಲಿ ಮೈಕ್ ಟೈಸನ್‌, ಅವರ ಪತ್ನಿ ಕಿಕಿ ಟೈಸನ್‌, ವಿಜಯ ದೇವರಕೊಂಡ, ಅನನ್ಯಾ ಪಾಂಡೆ, ಚಾರ್ಮಿ ಕೌರ್, ನಿರ್ದೇಶಕ ಪುರಿ ಜಗನ್ನಾಥ್‌ ಮತ್ತಿತರರಿದ್ದಾರೆ.

‘ಲಿಗರ್’ ಚಿತ್ರದೊಂದಿಗೆ ವಿಜಯ್ ದೇವರಕೊಂಡ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ನಟ ಚುಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ ಚಿತ್ರದ ಹಿರೋಯಿನ್‌. ಚಿತ್ರದಲ್ಲಿ ವಿಜಯ್‌ ಅವರು ಮಿಕ್ಸೆಡ್ ಮಾರ್ಷಿಯಲ್ ಆರ್ಟ್ಸ್‌ (MMA) ಫೈಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಮ್ಯಾ ಕೃಷ್ಣ, ರೋನಿತ್ ರಾಯ್, ವಿಷು ರೆಡ್ಡಿ, ಅಲಿ, ಮಕರಂದ್ ದೇಶಪಾಂಡೆ, ಗೆಟ್‌ಅಪ್‌ ಶ್ರೀನು ಚಿತ್ರದ ಇತರೆ ಪ್ರಮುಖ ಕಲಾವಿದರು. ಕರಣ್ ಜೋಹರ್‌, ಅಪೂರ್ಣ ಮೆಹ್ತಾ, ಪುರಿ ಜಗನ್ನಾಥ್‌ ಮತ್ತು ಚಾರ್ಮಿ ಕೌರ್‌ ಸಿನಿಮಾದ ನಿರ್ಮಾಪಕರು. ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲೂ ಸಿನಿಮಾ ತೆರೆಕಾಣಲಿದೆ.

Previous articleನಂದನ್ ಪ್ರಭು ನಿರ್ದೇಶನದಲ್ಲಿ ‘ಓರಿಯೋ’ಗೆ ಚಾಲನೆ; ನಾಲ್ಕು ಭಾಷೆಗಳಲ್ಲಿ ತಯಾರಾಗಲಿದೆ ಸಿನಿಮಾ
Next articleಜನ ಥಿಯೇಟರ್‌ಗೆ ಬರುತ್ತಿದ್ದಾರೆ, ಸಿನಿಮಾ ಮಾಡೋರಿಗೆ ಇದು ಖುಷಿ ವಿಷಯ; ದಯಾಳ್ ಪದ್ಮನಾಭನ್

LEAVE A REPLY

Connect with



Please enter your comment!
Please enter your name here