‘ಚಟ್ಟ’ ನೂತನ ಕನ್ನಡ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಭಾನುಪ್ರಕಾಶ್‌ ಚೊಚ್ಚಲ ನಿರ್ದೇಶನದ ಚಿತ್ರವಿದು. ಸಸ್ಪೆನ್ಸ್‌ ಕಥಾಹಂದರ ಸಿನಿಮಾ ಫೆಬ್ರವರಿಯಿಂದ ಶೂಟಿಂಗ್‌ ಆರಂಭಿಸಲಿದೆ.

ಭಾನುಪ್ರಕಾಶ್ ನಿರ್ದೇಶನದ ‘ಚಟ್ಟ’ ಕನ್ನಡ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್ ಬಿಡುಗಡೆಯಾಗಿದೆ. ‘Life of Book’ – ಚಿತ್ರದ ಅಡಿಬರಹ. ‘ಕೇರ್ ಆಫ್ ಫುಟ್‌ಪಾತ್‌’ ಸೇರಿದಂತೆ ಕೆಲವು ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿರುವ ಭಾನು ಪ್ರಕಾಶ್‌ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ಚಿತ್ರತಂಡ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಏರ್ಪಡಿಸಿತ್ತು. ಚಿತ್ರನಿರ್ದೇಶಕ ಜೋಸೈಮನ್‌, ಚಿತ್ರಸಾಹಿತಿ ವಿ ನಾಗೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಭಾನು ಪ್ರಕಾಶ್, ‘ಚಟ್ಟ ಎಂದರೆ ನಾವು ಅಂದುಕೊಂಡಂತೆ ಎತ್ತಿಕೊಂಡು ಹೋಗುವುದಲ್ಲ. ಬದಲಾಗಿ ಒಂದು ಪುಸ್ತಕದ ಕೊನೆಯ ಪುಟದಿಂದ ನಮ್ಮ ಚಿತ್ರದ ಸಾರವನ್ನು ಆಯ್ದುಕೊಳ್ಳಲಾಗಿದೆ’ ಎಂದಿದ್ದಾರೆ. K M Creations ಬ್ಯಾನರ್‌ ಅಡಿಯಲ್ಲಿ ಕುಮಾರ್ ಎಂ, ಅಣಜಿ ರಮೇಶ್, ಡಿ ಒಬಲ್ ರೆಡ್ಡಿ, ಕುಮಾರ್ ಎಂ ಸಿನಿಮಾ ನಿರ್ಮಿಸುತ್ತಿದ್ದಾರೆ. ಕೆ ರಾಮ್ ಮೂರ್ತಿ, ವಾಸುದೇವನ್, ಪ್ರಕಾಶ್ ಗೌಡ ಸಹ ನಿರ್ಮಾಪಕರು. ಸಸ್ಪೆನ್ಸ್‌ ಕಥಾಹಂದರದ ಈ ಸಿನಿಮಾದ ಚಿತ್ರೀಕರಣ ಫೆಬ್ರವರಿಯಿಂದ ಆರಂಭವಾಗಲಿದೆ. ತಂತ್ರಜ್ಞರು ಮತ್ತು ತಾರಾಬಳಗದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುವುದಾಗಿ ಹೇಳಿದೆ ಚಿತ್ರತಂಡ.

LEAVE A REPLY

Connect with

Please enter your comment!
Please enter your name here