ತೆಲುಗು ಸಿನಿಮಾ ತಾರೆ ಚಿರಂಜೀವಿ ಇಂದು 68ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮದಿನದಂದು ಅವರ ಎರಡು ನೂತನ ತೆಲುಗು ಸಿನಿಮಾಗಳು ಘೋಷಣೆಯಾಗಿವೆ. ಮಲ್ಲಿಡಿ ವಸಿಷ್ಠ ನಿರ್ದೇಶಿಸಲಿರುವ ಸಿನಿಮಾ ಚಿರಂಜೀವಿ ಅವರ ವೃತ್ತಿ ಬದುಕಿನಲ್ಲೇ ಬಹುದೊಡ್ಡ ಬಜೆಟ್‌ನ ಚಿತ್ರವಾಗಲಿದೆ ಎನ್ನಲಾಗಿದೆ. ಮತ್ತೊಂದು ಚಿತ್ರವನ್ನು ಚಿರಂಜೀವಿ ಪುತ್ರಿ ಸುಷ್ಮಿತಾ ನಿರ್ಮಿಸುತ್ತಿದ್ದಾರೆ.

ತೆಲುಗು ಚಿತ್ರರಂಗದ ಜನಪ್ರಿಯ ನಟ ಚಿರಂಜೀವಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 68ನೇ ವರ್ಷಕ್ಕೆ ಕಾಲಿಟ್ಟಿರುವ ಚಿರು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರ ಎರಡು ನೂತನ ಸಿನಿಮಾಗಳು ಘೋಷಣೆಯಾಗಿವೆ. ವಿಶೇಷವೆಂದರೆ ಈ ಎರಡರಲ್ಲಿ ಒಂದು ಸಿನಿಮಾವನ್ನು ಚಿರು ಪುತ್ರಿ ಸುಷ್ಮಿತಾ ಕೊನಿಡೇಲ ನಿರ್ಮಿಸುತ್ತಿದ್ದಾರೆ. ಚಿರಂಜೀವಿ ಜನ್ಮದಿನದ ಅಂಗವಾಗಿ ಅವರ 157ನೇ ಸಿನಿಮಾ ಘೋಷಣೆಯಾಗಿದೆ. ‘ಬಿಂಬಿಸಾರ’ ಸಿನಿಮಾ ಖ್ಯಾತಿಯ ಮಲ್ಲಿಡಿ ವಸಿಷ್ಠ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. U V Creations ಬ್ಯಾನರ್ ಅಡಿಯಲ್ಲಿ ವಿ ವಂಶಿ ಕೃಷ್ಣಾ ರೆಡ್ಡಿ, ಪ್ರಮೋದ್ ಉಪ್ಪಲಪಟ್ಟಿ ಮತ್ತು ವಿಕ್ರಮ್ ರೆಡ್ಡಿ ನಿರ್ಮಿಸಲಿರುವ #Mega157 ಸಿನಿಮಾ ಚಿರಂಜೀವಿ ವೃತ್ತಿಜೀವನದಲ್ಲಿಯೇ ಅತ್ಯಂತ ದುಬಾರಿ ಚಿತ್ರ ಎನ್ನಲಾಗಿದೆ. ನಿರ್ದೇಶಕ ವಸಿಷ್ಠ ಈ ಸಿನಿಮಾ ಮೂಲಕ Mega Mass Universe ಅನ್ನು ಸಿನಿ ರಸಿಕರಿಗೆ ಪರಿಚಯಿಸಲಿದ್ದಾರೆ. ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶದಂತಹ ಪಂಚಭೂತಗಳು (ಪ್ರಕೃತಿಯ ಐದು ಅಂಶಗಳು) ತ್ರಿಶೂಲದೊಂದಿಗೆ ನಕ್ಷತ್ರಾಕಾರದ ಅಂಶವನ್ನು ಹೊಂದಿರುವ ಈ ಚಿತ್ರದ ಪೋಸ್ಟರ್ ಅನಾವರಣ ಮಾಡಲಾಗಿದ್ದು, ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ.

ಚಿರಂಜೀವಿ ಪುತ್ರಿ ಸುಷ್ಮಿತಾ ಕೊನಿಡೇಲ ತಂದೆಯ 156ನೇ ಸಿನಿಮಾ ಘೋಷಿಸಿದ್ದಾರೆ. ಇನ್ನೂ ಹೆಸರಿಡದ ಈ ಯೋಜನೆಯಲ್ಲಿ ಚಿರಂಜೀವಿ ನಾಯಕನಾಗಿ ನಟಿಸಲಿದ್ದಾರೆ. ಚಿತ್ರತಂಡವು ಉಳಿದ ಪಾತ್ರವರ್ಗ, ನಿರ್ದೇಶಕ ಮತ್ತು ಪ್ರಮುಖ ಸಿಬ್ಬಂದಿವರ್ಗದ ವಿವರಗಳನ್ನು ಸದ್ಯದಲ್ಲೇ ಪ್ರಕಟಿಸಲಿದೆ. ಚಿರು ಅವರ #Mega156ನೇ ಸಿನಿಮಾವು ಸುಷ್ಮಿತಾ ಅವರ ಹೋಮ್‌ ಬ್ಯಾನರ್‌ Gold Box Entertainments ಅಡಿಯಲ್ಲಿ ನಿರ್ಮಾಣವಾಗುತ್ತಿದೆ.

ತಂದೆಯ ಜನ್ಮದಿನಕ್ಕೆ ಅವರ ತಾರಾ ಪುತ್ರ ರಾಮ್‌ ಚರಣ್‌ ‘Happiest Birthday to our dearest CHIRUTHA – Loads of love from us & the littlest member of the KONIDELA family’ ಎಂದು ತಮ್ಮ ಮಗಳೊಂದಿಗಿರುವ ಚಿರಂಜೀವಿ ಪೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಶುಭಾಶಯ ಕೋರಿದ್ದಾರೆ.

Previous articleಸಿದ್ದಾರ್ಥ್‌ ‘ಚಿತ್ತಾ’ ಪೋಸ್ಟರ್‌ ಬಿಡುಗಡೆ ಮಾಡಿದ ವಿಜಯ್‌ ಸೇತುಪತಿ | ಸೆಪ್ಟೆಂಬರ್‌ 28ಕ್ಕೆ ಸಿನಿಮಾ
Next articleಯಾವುದೇ ಕ್ರೈಮ್ ಥ್ರಿಲ್ಲರ್ ಫಿಕ್ಷನ್‌ ಫಿಲ್ಮ್‌ಗಳಿಗೂ ಕಡಿಮೆ ಇರದ ‘The Hunt For Veerappan’!

LEAVE A REPLY

Connect with

Please enter your comment!
Please enter your name here