ಎಸ್‌ ಯು ಅರುಣ್‌ ಕುಮಾರ್‌ ನಿರ್ದೇಶನದಲ್ಲಿ ಸಿದ್ದಾರ್ಥ್‌ ನಟಿಸುತ್ತಿರುವ ‘ಚಿತ್ತಾ’ ತಮಿಳು ಸಿನಿಮಾ ಸೆಪ್ಟೆಂಬರ್‌ 28ರಂದು ತೆರೆಕಾಣಲಿದೆ. ನಟರಾದ ವಿಜಯ್‌ ಸೇತುಪತಿ ಮತ್ತು ಜಯಂ ರವಿ ಲುಕ್‌ ಪೋಸ್ಟರ್‌ ರಿಲೀಸ್‌ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಸಿದ್ದಾರ್ಥ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಆಕ್ಷನ್‌ – ಥ್ರಿಲ್ಲರ್‌ ತಮಿಳು ಸಿನಿಮಾ ‘ಚಿತ್ತಾ’ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಜನಪ್ರಿಯ ನಟರಾದ ವಿಜಯ್‌ ಸೇತುಪತಿ ಮತ್ತು ಜಯಂ ರವಿ ಲುಕ್‌ ಪೋಸ್ಟರ್‌ ಮತ್ತು ಬಿಡುಗಡೆ ದಿನಾಂಕವನ್ನು ರಿವೀಲ್‌ ಮಾಡಿದ್ದಾರೆ. ಇದೊಂದು ಆಕ್ಷನ್‌ – ಥ್ರಿಲ್ಲರ್‌ ಜಾನರ್‌ ಸಿನಿಮಾ. ಎಸ್‌ ಯು ಅರುಣ್‌ ಕುಮಾರ್‌ ನಿರ್ದೇಶನದ ಚಿತ್ರಕ್ಕೆ ಧಿಬು ನಿನನ್ ಥಾಮಸ್ ಸಂಗೀತ ಸಂಯೋಜನೆ, ವಿಶಾಲ್ ಚಂದ್ರಶೇಖರ್ ಹಿನ್ನೆಲೆ ಸಂಗೀತ, ಬಾಲಾಜಿ ಸುಬ್ರಹ್ಮಣ್ಯಂ ಛಾಯಾಗ್ರಹಣ, ಸುರೇಶ್ ಎ ಪ್ರಸಾದ್ ಸಂಕಲನವಿದೆ. ಸಿನಿಮಾದ ಇತರೆ ಕಲಾವಿದರ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುವುದಾಗಿ ಚಿತ್ರತಂಡ ಹೇಳಿದೆ. ಸಿದ್ಧಾರ್ಥ್ ಅವರ Etaki Entertainment ಮತ್ತು Red Giant movies ಜೊತೆಗೂಡಿ ಈ ಸಿನಿಮಾ ನಿರ್ಮಿಸಿವೆ. ‘ಕಾದಲಿಲ್ ಸೋದಪ್ಪುವದು ಯೆಪ್ಪಡಿ’, ‘ಜಿಲ್ ಜಂಕ್ ಜುಕ್’ ಮತ್ತು ‘ಅವಳ್’ ಸಿನಿಮಾಗಳ ನಂತರ Etaki Entertainment ನಿರ್ಮಿಸುತ್ತಿರುವ ನಾಲ್ಕನೇ ಚಿತ್ರವಿದು.

Previous articleಆಗಸ್ಟ್‌ 25ಕ್ಕೆ ‘ಯಥಾಭವ’ ಟೀಸರ್‌ | ಗೌತಮ್‌ ಬಸವರಾಜು ನಿರ್ದೇಶನದ ಸಿನಿಮಾ
Next articleಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಜನ್ಮದಿನ | ಎರಡು ನೂತನ ಸಿನಿಮಾಗಳ ಘೋಷಣೆ

LEAVE A REPLY

Connect with

Please enter your comment!
Please enter your name here