ಬದಲಾಗುತ್ತಿದೆ ಭಾರತದ ಚಿತ್ರರಂಗ, ಬದಲಾಗುತ್ತಿದೆ ಬಾಲಿವುಡ್. ಇದು ಎಲ್ಲ ರಂಗಗಳಲ್ಲೂ ಬದಲಾವಣೆಯ ಪರ್ವ, ಕಾರಣ ಕೊರೊನ.
ಬಾಲಿವುಡ್ ಸಿನೆಮಾ ತಯಾರಕರು ಹೊಸ ಬದಲಾವಣೆಯ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆ ಮುಂದಿಟ್ಟಿದ್ದಾರೆ. ಪ್ರದರ್ಶನಗೊಳ್ಳಲು ಸಿದ್ಧವಾಗಿದ್ದರೂ ಕೂಡ ದೇಶದ ಎಲ್ಲ ಸಿನೆಮಾ ಹಾಲ್ ಗಳು, ಮಲ್ಟಿಪ್ಲೆಕ್ಸ್ ಗಳು ಮುಚ್ಚಿರುವ ಕಾರಣದಿಂದ ತೆರೆ ಕಾಣದ ಸುಮಾರು ಏಳರಿಂದ ಎಂಟು ಸಿನೆಮಾಗಳನ್ನು ನೇರವಾಗಿ OTT platform ಮೂಲಕ ಬಿಡುಗಡೆ ಮಾಡಿ ವೀಕ್ಷಕರನ್ನು ತಲುಪಲು ಮುಂದಾಗಿದ್ದಾರೆ.
ಹೊಸ ಸಿನೆಮಾಗಳನ್ನು OTT ಮೂಲಕವೇ ಬಿಡುಗಡೆ ಮಾಡುವ ಬಗ್ಗೆ ‘Bollywood ki home delivery’ ಎಂದು ವಿಶೇಷವಾಗಿ ನಾಮಕರಣ ಮಾಡಲಾಗಿದ್ದ virtual ಮಾಧ್ಯಮ ಗೋಷ್ಠಿಯಲ್ಲಿ ಪ್ರಕಟಿಸಲಾಗಿದೆ.
ಭಾರತದಲ್ಲಿ Star & Disney ಕಂಪನಿಗಳ ಮುಖ್ಯಸ್ಥ ಉದಯ್ ಶಂಕರ್ ಹಾಗೂ ಬಾಲಿವುಡ್ ನ ಹೆಸರಾಂತ ಸ್ಟಾರ್ ಗಳಾದ ಅಕ್ಷಯ್ ಕುಮಾರ್, ಅಜಯ್ ದೇವ್ ಗಣ್, ಅಭಿಷೇಕ್ ಬಚ್ಚನ್, ಆಲಿಯ ಭಟ್ ಮತ್ತು ವರುಣ್ ಧವನ್ ಈ New Style ನ್ಯೂಸ್ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡು ವಿವರ ಬಹಿರಂಗ ಪಡಿಸಿದ್ದಾರೆ.
Disney+ Hotstar ಮೂಲಕ ಆಕಾಶ ಮಾರ್ಗದಲ್ಲೇ ಪ್ರಯಾಣಿಸಿ ನೋಡುಗರ ಮನೆಯ Home Theater, ಟಿ.ವಿ ಪರದೆ, ಸ್ಮಾರ್ಟ್ ಫೋನ್, ಟ್ಯಾಬ್, ಕಂಪ್ಯೂಟರ್ ಅಥವ ಮತ್ತಿತರ ಎಲೆಕ್ಟ್ರಾನಿಕ್ ಸ್ಕ್ರೀನ್ ಗಳ ಮೂಲಕ ಮನರಂಜನೆ ನೀಡಲು ಸಜ್ಜಾಗಿರುವ ಸಿನೆಮಾಗಳ ಪಟ್ಟಿಯಲ್ಲಿ ಲಕ್ಷ್ಮಿ ಬಾಂಬ್, ಭುಜ್ ದಿ ಪ್ರೈಡ್ ಆಫ್ ಇಂಡಿಯ, ಸಡಕ್ 2, ಬಿಗ್ ಬುಲ್, ದೆಲ್ ಬೇಚಾರ, ಲೂಟ್ ಕೇಸ್ ಮತ್ತು ಖುದಾ ಹಫೀಜ್ ಸಿನೆಮಾಗಳು ಸೇರಿವೆ. ಈ ಎಲ್ಲ ಸಿನೆಮಾಗಳು ಇದೇ ಜುಲೈ ನಿಂದ ಅಕ್ಟೋಬರ್ ವರೆಗೆ Disney+ Hot Star ಮೂಲಕ ತೆರೆ ಕಾಣಲು ಸಜ್ಜಾಗಿವೆ.
ದಿಲ್ ಬೇಚಾರ- ಸುಶಾಂತ್ ಸಿಂಗ್ ರಾಜ್ ಪುತ್
ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಯುವ ನಟ ಸುಶಾಂತ್ ಸಿಂಗ್ ರಾಜ್ ಪುತ್ ಮತ್ತು ಸಂಜನಾ ಸಾಂಘಿ ಅಭಿನಯದ ದಿಲ್ ಬೇಚಾರ ಸಿನೆಮಾ Disney+ Hotstar ಮೂಲಕ ನೋಡುಗರನ್ನು ತಲುಪಲಿರುವ ಮೊದಲ ಸಿನೆಮಾ ಆಗಿದೆ. ಇದು ಹಾಲಿವುಡ್ ಹಿಟ್ ಸಿನೆಮಾ The Fault in Their Stars ಮೂವಿಯ Remake ಆಗಿದ್ದು ಮುಖೇಶ್ ಚಾಬ್ರಾ ನಿರ್ದೇಶಿಸಿದ್ದಾರೆ.
ಲಕ್ಷ್ಮಿ ಬಾಂಬ್-ಅಕ್ಷಯ್ ಕುಮಾರ್
ಇದರ ನಂತರ ತೆರೆ ಕಾಣಲಿರುವ ಲಕ್ಷ್ಮಿ ಬಾಂಬ್ ಸಿನೆಮಾ ಕೂಡ ತಮಿಳು ಭಾಷೆಯ ಕಾಂಚನ ಸಿನೆಮಾದ ರೀ ಮೇಕ್ ಆಗಿದೆ. ತಮಿಳಿನಲ್ಲಿ ಈ ಸಿನೆಮಾವನ್ನು ನಿರ್ದೇಶಿಸಿದ್ದ ರಾಘವ ಲಾರೆನ್ಸ್ ಅವರೇ ಹಿಂದಿಯಲ್ಲೂ ಇದರ ನಿರ್ದೇಶನ ಮಾಡಲಿದ್ದಾರೆ. Supernatural ಶಕ್ತಿಗಳ ಬಗ್ಗೆ ಭಾರಿ ಭಯ ಹೊಂದಿರುವ ವ್ಯಕ್ತಿಯೊಬ್ಬ, ಅಂತಿಮವಾಗಿ ಅದನ್ನು ಎದುರಿಸಿ ನಿಲ್ಲುವುದು ಮತ್ತು ಆತನೊಳಗೆ ಒಂದು ಆತ್ಮ ಸೇರಿಕೊಳ್ಳುವುದು ಈ ಸಿನೆಮಾದ ಕಥೆ. Good Newwz ಸಿನೆಮಾ ಬಳಿಕ ಅಕ್ಷಯ್ ಕುಮಾರ್ ಮತ್ತು ಕಿಯಾರ ಅಡ್ವಾಣಿ ಮತ್ತೊಮ್ಮೆ ಇಲ್ಲಿ ಜೊತೆಯಾಗಿ ನಟಿಸಿದ್ದಾರೆ.
ಭುಜ್ ದಿ ಪ್ರೈಡ್ ಆಫ್ ಇಂಡಿಯ-ಅಜಯ್ ದೇವ್ ಗಣ್
ಭುಜ್ ದಿ ಪ್ರೈಡ್ ಆಫ್ ಇಂಡಿಯ ಸಿನೆಮಾ Disney+ Hotstar ಸರಣಿಯ ಮೂರನೇ ಸಿನೆಮಾ ಆಗಿ ಬಿಡುಗಡೆಯಾಗುತ್ತಿದೆ. 1971ರ ಭಾರತ-ಪಾಕ್ ಯುದ್ಧದ ಕಥೆ ಹಿನ್ನೆಲೆ ಹೊಂದಿರುವ ಈ ಸಿನೆಮಾದಲ್ಲಿ, ಅಜಯ್ ದೇವ್ ಗಣ್, Squadron Leader ವಿಜಯ್ ಕಾರ್ನಿಕ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಸಂಜಯ್ ದತ್, ರಾಣಾ ದಗ್ಗುಬಾಟಿ, ಸೋನಾಕ್ಷಿ ಸಿನ್ಹಾ, ಪರಿಣೀತಿ ಚೋಪ್ರ ಮತ್ತು ಅಮ್ಮಿ ವಿರ್ಕ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಡಕ್ 2- ಆಲಿಯ ಭಟ್-ಆದಿತ್ಯ ರಾಯ್ ಕಪೂರ್, ಪೂಜಾ ಭಟ್- ಸಂಜಯ್ ದತ್
ಈ ಸರಣಿಯ ಮತ್ತೊಂದು ಸಿನೆಮಾ ಸಡಕ್ 2. ಇದಕ್ಕಾಗಿ ಪ್ರಖ್ಯಾತ ನಿರ್ದೇಶಕ ಮಹೇಶ್ ಭಟ್ 21 ವರ್ಷಗಳ ಬಳಿಕ ಮತ್ತೊಮ್ಮೆ ಆಕ್ಷನ್, ಕಟ್ ಹೇಳಿದ್ದಾರೆ. ಈ ಸಿನೆಮಾದಲ್ಲಿ ಆಲಿಯ ಭಟ್, ಆದಿತ್ಯ ರಾಯ್ ಕಪೂರ್ ಮತ್ತು ಜಿಷು ಸೇನ್ ಗುಪ್ತಾ ಅವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು 1991ರ Romantic-thriller ಸಿನೆಮಾ ಸಡಕ್ ನ ಮುಂದುವರಿದ ಭಾಗ ವಾಗಿದ್ದು, ಆ ಸಿನೆಮಾದಲ್ಲಿ ಜೋಡಿಯಾಗಿದ್ದ ಪೂಜಾ ಭಟ್ ಮತ್ತು ಸಂಜಯ್ ದತ್ ಮತ್ತೊಮ್ಮೆ ಇಲ್ಲೂ ಜೊತೆಯಾಗಿದ್ದಾರೆ.
Big Bull-ಅಭಿಷೇಕ್ ಬಚ್ಚನ್
ಷೇರು ಮಾರುಕಟ್ಟೆ ಪರಿಚಯವಿರುವ ಎಲ್ಲರಿಗೂ Big Bull ಎಂದ ಕೂಡಲೇ
ನೆನಪಾಗುವುದು ಹರ್ಷದ್ ಮೆಹ್ತ. 90ರ ದಶಕದಲ್ಲಿ ಕನಸುಗಳನ್ನು ಮಾರುವ ವ್ಯಕ್ತಿ ಅನ್ನಿಸಿಕೊಂಡಿದ್ದ ಹರ್ಷದ್ ಮೆಹ್ತ ನಡೆಸಿದ ಹಗರಣವನ್ನೇ ಕಥಾ ಹೂರಣವಾಗಿ ಹೊಂದಿರುವ Big Bull ಸಿನೆಮಾದ ಹೀರೊ ಆಗಿ
ಅಭಿಷೇಕ್ ಬಚ್ಚನ್ ಅಭಿನಯಿಸಿದ್ದಾರೆ. ಕೂಕಿ ಗುಲಾಟಿ (Kookie Gulati) ನಿರ್ದೇಶಿಸಿರುವ ಈ ಸಿನೆಮಾದಲ್ಲಿ ಬೆಡಗಿ ಇಲಿಯಾನ ಡಿ ಕ್ರೂಜ್ ನಾಯಕಿಯಾಗಿದ್ದು, ರಾಮ್ ಕಪೂರ್. ಸುಮಿತ್ ವತ್ಸ್, ಸೋಹಮ್ ಷಾ, ನಿಕಿತಾ ದತ್ತ, ಲೇಖಾ ತ್ರಿಪಾಠಿ ಇತರೆ ನಟರಾಗಿದ್ದಾರೆ. ಅಜಯ್ ದೇವ್ ಗಣ್ ಮತ್ತು ಆನಂದ್ ಪಂಡಿತ್ ಈ ಸಿನೆಮಾದ ನಿರ್ಮಾಪಕರು.
ಲೂಟ್ ಕೇಸ್- ಕುನಾಲ್ ಖೇಮು
ಕುನಾಲ್ ಖೇಮು, ಗಜರಾಜ್ ರಾವ್, ರಸಿಕಾ ದುಗ್ಗಳ್, ರಣ್ವೀರ್ ಶೋರೆ ಮತ್ತು ವಿಜಯ್ ರಾಜ್ ಅಭಿನಯದ ಹೊಸ ಸಿನೆಮಾದ ಹೆಸರು ಲೂಟ್ ಕೇಸ್. ಮಧ್ಯವಯಸ್ಕನೊಬ್ಬನಿಗೆ ಹಣದ ಕಂತೆ ತುಂಬಿರುವ ಕೆಂಪು ಸೂಟ್ ಕೇಸ್ ಸಿಕ್ಕ ಬಳಿಕ ಏನೆಲ್ಲ ಆಗುತ್ತದೆ ಎಂಬುದೇ ಈ ಸಿನೆಮಾದ ಕಥೆ.
ಖುದಾ ಹಫೀಜ್-ವಿದ್ಯುತ್ ಜಾಮ್ವಾಲ್,
Romantic action thriller ಆಗಿರುವ ಮೂವಿ ಖುದಾ ಹಫೀಜ್. ವಾಸ್ತವ ಘಟನಾವಳಿಗಳನ್ನು ಹೊಂದಿದೆ ಎನ್ನಲಾದ ಈ ಸಿನೆಮಾದಲ್ಲಿ ವಿದ್ಯುತ್ ಜಾಮ್ವಾಲ್, ಶಿವಲೀಖಾ ಒಬೆರಾಯ್, ಅಣ್ಣುಕಪೂರ್, ಶಿವ ಪಂಡಿತ್ ಮತ್ತು ಅಹನಾ ಕುಮಾರ ಪಾತ್ರವಹಿಸಿದ್ದಾರೆ.
ಒಟ್ಟಿನಲ್ಲಿ ದೇಶದ ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದ್ದು
ಮನರಂಜನಾ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಕೊರೋನಾ ತಂದಿಟ್ಟಿರುವ ಕಠಿಣ ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ಎದುರಿಸಿ ಉಳಿಯಲು ಭಾರತದ ಸಿನೆಮಾ ಉದ್ಯಮ ಹರಸಾಹಸ ಪಡುತ್ತಿದೆ. ಮುಂಬೈ ಕೇಂದ್ರಿತವಾಗಿರುವ ಬಾಲಿವುಡ್ ಸೇರಿದಂತೆ, ದಕ್ಷಿಣದ ಕೊಲ್ಲಿವುಡ್, ಟಾಲಿ ವುಡ್, ಮಾಲಿ ಉಡ್ ಹಾಗೂ ಸ್ಯಾಂಡಲ್ ಉಡ್ ಅಥವ ಚಂದನವನ ಎಂದು ಕರೆಯಲ್ಪಡುವ ಕನ್ನಡ ಚಿತ್ರರಂಗವೂ ಹೊಸ ಚಿಂತನೆಯತ್ತ ಮುಖಮಾಡಿದೆ. ಮುಂದಿನ ದಿನಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಿನೆಮಾಗಳೂ ಸೇರಿದಂತೆ ಇತರೆ ನಟರ ಹಲವಾರು ಸಿನೆಮಾಗಳು ನೇರವಾಗಿ Digital Platform ಗಳ ಮೂಲಕ ಕನ್ನಡದ ಚಿತ್ರ ರಸಿಕರನ್ನು ರಂಜಿಸಲಿವೆ.
ಹೀಗಾಗಿ, ಇಡೀ ಚಿತ್ರರಂಗ ವೀಕ್ಷಕರನ್ನು ತಲುಪಲು Disney+Hotstar, Netflix, Amazon Prime Video, Hulu ಮತ್ತು ಭಾರತದ್ದೇ ಆದ ALT Balaji ಯಂಥ OTT ಅಥವ Over the Top platformಗಳ ಕಡೆಗೆ ನೋಡುತ್ತಿದೆ. ಈ ಎಲ್ಲವೂ ಕೂಡ ಈಗಾಗಲೇ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಇವುಗಳ ಮೂಲಕ ಲಕ್ಷಾಂತರ ಜನರು ತಮಗೆ ಇಷ್ಟವಾದ ಸಿನೆಮಾಗಳು ಮತ್ತು ವಿವಿಧ ಟಿವಿ ಶೋಗಳನ್ನು ನೋಡಿ ಆನಂದಿಸುತ್ತಿದಾರೆ, ಮನರಂಜನೆ ಪಡೆಯುತ್ತಿದ್ದಾರೆ. ಜಮಾನ ಬದಲಾಗುತ್ತಿದೆ, ಡಿಜಿಟಲ್ ಮಾದ್ಯಮ ಮಿಂಚುತ್ತಿದೆ.