ತೆಲುಗು ಓಟಿಟಿ ಫ್ಲಾಟ್‌ಫಾರ್ಮ್‌ ‘ಆಹಾ’ದ ಟಾಕ್‌ಶೋನಲ್ಲಿ ನಂದಮೂರಿ ಬಾಲಕೃಷ್ಣ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಅವರ ಓಟಿಟಿಗೆ ಅವರ ಪ್ರವೇಶವಾಗಲಿದೆ.

ನಂದಮೂರಿ ಬಾಲಕೃಷ್ಣ ತೆಲುಗು ಚಿತ್ರರಂಗದ ಜನಪ್ರಿಯ ನಟ. ಲಾರ್ಜರ್‌ದ್ಯಾನ್‌ ಲೈಫ್‌ ಇಮೇಜಿನ ಪಾತ್ರಗಳ ಮೂಲಕ ಅವರು ತಮ್ಮದೇ ಒಂದು ಹಾದಿ ಸೃಷ್ಟಿಸಿಕೊಂಡಿದ್ದಾರೆ. ಅಬ್ಬರ – ಆರ್ಭಟದ ಡೈಲಾಗ್‌, ಬಿಲ್ಡಪ್‌ ಹೀರೋಯಿಸಂನಿಂದಾಗಿ ಅವರ ಪಾತ್ರಗಳು ಕೆಲವೊಮ್ಮೆ ಹಾಸ್ಯಾಸ್ಪದ ಎನಿಸುವುದೂ ಇದೆ. ಇದೀಗ ಅವರು ಟಾಕ್‌ಶೋ ನಿರೂಪಕರಾಗಿ ಹೇಗೆ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲ ಸಿನಿಪ್ರೇಮಿಗಳದ್ದು. ಚಿತ್ರನಿರ್ದೇಶಕ ಕ್ರಿಷ್‌ ಜಗರ್ಲಮುಡಿ ಈ ಟಾಕ್‌ ಶೋ ನಿರ್ದೇಶಿಸಲಿದ್ದು, ಮುಂದಿನ ದಿನಗಳಲ್ಲಿ ಈ ಕುರಿತಾಗಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ತೆಲುಗಿನ ಜನಪ್ರಿಯ ಓಟಿಟಿ ಫ್ಲಾಟ್‌ಫಾರ್ಮ್‌ ‘ಆಹಾ’ ಈ ಹಿಂದೆ ನಟಿ ಸಮಂತಾ ನಿರೂಪಣೆಯಲ್ಲಿ ‘ಸ್ಯಾಮ್ – ಜಾಮ್‌’ ಶೋ ರೂಪಿಸಿತ್ತು. ನಟಿ ಲಕ್ಷ್ಮೀ ಮಂಚು ಅವರು ಈ ಓಟಿಟಿಗಾಗಿ ‘ಆಹಾ ಭೋಜನಾಂಬು’ ಅಡುಗೆ ಶೋ ನಡೆಸಿಕೊಟ್ಟಿದ್ದರು. ಸದ್ಯ ‘ಆಹಾ’ದಲ್ಲಿ ‘ನಂ.1 ಯಾರೀ’ ಸೀಸನ್‌ 3 ಸ್ಟ್ರೀಮ್ ಆಗುತ್ತಿದೆ. ‘ಬಾಹುಬಲಿ’ ಖ್ಯಾತಿಯ ನಟ ರಾಣಾ ಶೋ ನಿರೂಪಿಸುತ್ತಿದ್ದಾರೆ. ಇನ್ನು ನಟ ಬಾಲಕೃಷ್ಣ ಮೊನ್ನೆಯಷ್ಟೇ ‘ಅಖಂಡ’ ತೆಲುಗು ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ‘ಸಿಂಹ’ ಮತ್ತು ‘ಲೆಜೆಂಡ್‌’ ಚಿತ್ರಗಳ ನಂತರ ನಿರ್ದೇಶಕ ಬೊಯಪಾಟಿ ಸೀನು ಅವರೊಂದಿಗೆ ಬಾಲಕೃಷ್ಣರದ್ದು ಇದು ಮೂರನೇ ಸಿನಿಮಾ.

LEAVE A REPLY

Connect with

Please enter your comment!
Please enter your name here