ಭರತ್‌ ನರೇನ್‌ ನಿರ್ದೇಶನದ ‘ದಿಲ್‌ ಸೇ’ ತೆಲುಗು ಸರಣಿಯ ಟೀಸರ್‌ ಬಿಡುಗಡೆಯಾಗಿದೆ. ರಾಜಾ ವಿಕ್ರಮ್‌ ಮತ್ತು ವರ್ಷಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸರಣಿ ETV Winನಲ್ಲಿ ಸೆಪ್ಟೆಂಬರ್‌ 16ರಿಂದ ಸ್ಟ್ರೀಮ್‌ ಆಗಲಿದೆ.

‘ಚಾಯ್ ಬಿಸ್ಕೆಟ್’ ಸರಣಿ ಖ್ಯಾತಿಯ ರಾಜಾ ವಿಕ್ರಮ್ ಮತ್ತು ವರ್ಷಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ದಿಲ್‌ ಸೇ’ ವೆಬ್‌ ಸರಣಿ ಟೀಸರ್‌ ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ಸರಣಿಯ ಶೀರ್ಷಿಕೆ ಘೋಷಣೆಯಾಗಿತ್ತು. ಸರಣಿಯನ್ನು ಭರತ್‌ ನರೇನ್‌ ನಿರ್ದೇಶಿಸಿದ್ದಾರೆ. ಇದು ETV Winನ ಒರಿಜಿನಲ್‌ ವೆಬ್‌ ಸರಣಿ. ಕಾಲೇಜು ಮುಗಿಸಿ ತನ್ನ ಮೊದಲ ಕೆಲಸಕ್ಕಾಗಿ ಹೈದರಾಬಾದ್‌ಗೆ ತೆರಳಲು ತಯಾರಾಗಿರುವ ಯುವಕನೊಬ್ಬನ ಸುತ್ತ ಟೀಸರ್‌ ಸುತ್ತುತ್ತದೆ. ಊರಿನಲ್ಲಿರುವ ತನ್ನ ಪೋಷಕರಿಂದ ದೂರಾಗಿ ದೊಡ್ಡ ಪಟ್ಟಣವೊಂದರ ಸಾಫ್ಟ್‌ವೇರ್‌ ಕಂಪನಿಯೊಂದಕ್ಕೆ ಇವನು ಸೇರಿಕೊಳ್ಳುತ್ತಾನೆ. ಇವನ ಪೋಷಕರು ‘ಮೊದಲ ಬಾರಿಗೆ ಮನೆಯನ್ನು ಬಿಟ್ಟು ಹೊರಗಿದ್ದಾನೆ ಹೇಗೆ ಹೊಂದಿಕೊಳ್ಳುತ್ತಾನೋ’ ಎಂದು ಚಿಂತಿಸುತ್ತಿರುತ್ತಾರೆ. ಆದರೆ ಅವನು ಸ್ನೇಹಿತರೊಟ್ಟಿಗೆ ವೀಕೆಂಡ್‌ ಪಾರ್ಟಿ, ಮೋಜು ಮಸ್ತಿ ಮಾಡುವ ಯುವಕನ ಕತೆಯನ್ನು ಸರಣಿ ಹೇಳುತ್ತದೆ. Sri Akkiyan Arts ಬ್ಯಾನರ್‌ ಅಡಿ ಶ್ರೀಧರ್ ಮರಿಸಾ ಈ ಸರಣಿಯನ್ನು ನಿರ್ಮಿಸಿದ್ದಾರೆ. ಭಾರ್ಗವ್, ರೋಹಿಣಿ ರಾವ್, ರಾಹುಲ್ ವರ್ಮ, ರಮಣ ಭಾರ್ಗವ, ವಿ ವಿ ಕೃಷ್ಣ ಸರಣಿಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 12 ಸಂಚಿಕೆಗಳ ಸರಣಿ ಸೆಪ್ಟೆಂಬರ್ 16ರಿಂದ ETV Winನಲ್ಲಿ ಸ್ಟ್ರೀಮ್‌ ಆಗಲಿದೆ.

Previous article‘ಚಂದ್ರಮುಖಿ 2’ ಸೆಪ್ಟೆಂಬರ್‌ 28ಕ್ಕೆ | ರಾಘವ ಲಾರೆನ್ಸ್‌ – ಕಂಗನಾ ಸಿನಿಮಾ
Next article‘ಕಾಸರಗೋಲ್ಡ್‌’ ಟೀಸರ್‌ | ಮೃದುಲ್ ನಾಯರ್ ಮಲಯಾಳಂ ಸಿನಿಮಾ ಸೆಪ್ಟೆಂಬರ್‌ 15ಕ್ಕೆ

LEAVE A REPLY

Connect with

Please enter your comment!
Please enter your name here