ನಟಿ ಅದಿತಿ ಪ್ರಭುದೇವ ಸ್ಯಾಂಡಲ್‌ವುಡ್‌ನಲ್ಲಿ ಪ್ರಸ್ತುತ ಬ್ಯುಸಿ ಹಿರೋಯಿನ್‌. ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಅಲೆಕ್ಸಾ’ ಆಕ್ಷನ್‌ ಸಿನಿಮಾದ ಕ್ಲೈಮ್ಯಾಕ್ಸ್‌ ಪೂರ್ಣಗೊಂಡಿದೆ. ಜೀವಾ ನಿರ್ದೇಶನದ ಈ ಚಿತ್ರದ ಹೀರೋ ಪವನ್‌ ತೇಜ್‌.

ತಮ್ಮ ವೃತ್ತಿಬದುಕಿನಲ್ಲಿ ‘ಅಲೆಕ್ಸಾ’ ವಿಶೇಷ ಚಿತ್ರವಾಗಲಿದೆ ಎಂದಿದ್ದರು ನಟಿ ಅದಿತ. ಇದೊಂದು ಆಕ್ಷನ್‌ – ಥ್ರಿಲ್ಲರ್‌. ಅವರು ಆಕ್ಷನ್‌ ಹಿರೋಯಿನ್‌ ಆಗಿ ನಟಿಸುತ್ತಿರುವ ‘ಅಲೆಕ್ಸಾ’ಗೆ ಕ್ಲೈಮ್ಯಾಕ್ಸ್‌ ಚಿತ್ರಿಸಲಾಯ್ತು. ಚಿತ್ರೀಕರಣ ಮುಕ್ತಾಯ ಹಂತದಲ್ಲಿದ್ದು, ಕೆಲವೇ ಸನ್ನಿವೇಶಗಳು ಬಾಕಿ ಇವೆ. ಜೀವಾ ನಿರ್ದೇಶನದ ಈ ಚಿತ್ರಕ್ಕೆ ಬೆಂಗಳೂರು ರಾಮಮೂರ್ತಿ ನಗರದ ಬಳಿ ಭರ್ಜರಿ ಆಕ್ಷನ್‌ನ ಕ್ಲೈಮ್ಯಾಕ್ಸ್‌ ಚಿತ್ರಿಸಲಾಯ್ತು. ಸಾಹಸ ನಿರ್ದೇಶಕ ರವಿವರ್ಮ ಅವರ ಸಾರಥ್ಯದಲ್ಲಿ ಅದಿತಿ ಮತ್ತು ಹೀರೋ ಪವನ್‌ ತೇಜ್‌ ಹಾಗೂ ಸಹಕಲಾವಿದರು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರದಲ್ಲಿ ಅದಿತಿ ಪ್ರಭುದೇವ ಅವರು ವಿಶೇಷ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಳೆದ 24 ವರ್ಷಗಳಿಂದ ಜೀವಾ ಅವರಿಗೆ ಕನ್ನಡ ಚಿತ್ರರಂಗದೊಂದಿಗೆ ನಂಟು ಇದೆ. ಹೆಸರಾಂತ ತಂತ್ರಜ್ಞರ ಜೊತೆ ಕೆಲಸ ಮಾಡಿರುವ ಜೀವಾ ಅವರು ಪ್ರಜ್ವಲ್ ದೇವರಾಜ್ ಅಭಿನಯದ 25ನೇ ಚಿತ್ರ ‘ಭುಜಂಗ’ ಚಿತ್ರವನ್ನು ನಿರ್ದೇಶಿಸಿದ್ದರು. ಇದು ಅವರಿಗೆ ಎರಡನೇ ಚಿತ್ರ. ಚಿತ್ರಕ್ಕೆ ನಿರ್ದೇಶಕರೇ ಕತೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ವಿ.ಚಂದ್ರು ನಿರ್ಮಾಣದ ಚಿತ್ರಕ್ಕೆ ವಿ.ನಾಗೇಂದ್ರಪ್ರಸಾದ್ ಗೀತಸಾಹಿತ್ಯ, APO ಸಂಗೀತ, ಸಾಯಿ ಸತೀಶ್ ಛಾಯಾಗ್ರಹಣ, ಉಮೇಶ್ ಸಂಕಲನ, ರವಿವರ್ಮ, ಮಾಸ್ ಮಾದ ಮತ್ತು ವಿಕ್ರಮ್ ಮೋರ್ ಸಾಹಸವಿದೆ. ‘ನಾಗಿಣಿ’ ಧಾರಾವಾಹಿ ಖ್ಯಾತಿಯ ನಾಗಾರ್ಜುನ್, ಮೇಘಾಶ್ರೀ, ಹನುಮಂತೇಗೌಡ, ಚಂದ್ರಕಲಾ ಮೋಹನ್, ಮಿಮಿಕ್ರಿ ಗೋಪಿ ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ.

Previous articleನಿವಿನ್‌ ಪೌಲಿ ‘ಥೂರಮುಖಂ’ ಟ್ರೈಲರ್‌; ಪೊಲಿಟಿಕಲ್‌ ಥ್ರಿಲ್ಲರ್‌ ಸಿನಿಮಾ
Next articleಹರೆಯದ ಅಜಾಗರೂಕತೆ ಮತ್ತು ಭವಿಷ್ಯದ ಬದುಕು

LEAVE A REPLY

Connect with

Please enter your comment!
Please enter your name here