‘ಬ್ಯಾಲೆನ್ಸ್‌ ಈಸ್‌ ಆರ್ಟ್‌ ಆಫ್‌ ಲಿವಿಂಗ್‌’ ಎಂದು ನಟ, ನಿರ್ದೇಶಕ ರವಿಚಂದ್ರನ್‌ ವಿಶೇಷ ವೀಡಿಯೋ ಮೂಲಕ ಹೊಸವರ್ಷಕ್ಕೆ ಶುಭಕೋರಿದ್ದಾರೆ. ರಮೇಶ್‌ ಅರವಿಂದ್‌, ಹಂಸಲೇಖ, ಹರ್ಷಿಕಾ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವರು ಶುಭ ಹಾರೈಕೆಯೊಂದಿಗೆ ನೂತನ ವರ್ಷವನ್ನು ಸ್ವಾಗತಿಸಿದ್ದಾರೆ.

“ಎಲ್ಲರೂ ತುದಿಗಾಲಲ್ಲೇ ಲೈಫ್‌ನ ಬ್ಯಾಲೆನ್ಸ್‌ ಮಾಡ್ತಾ ಇರ್ತಾರೆ. ಒಂದು ಕಡೆ ಒಳ್ಳೇತನ, ಇನ್ನೊಂದು ಕಡೆ ಸಣ್ಣತನ. ಆ ಕಡೆ ಏಳೋಕೂ ಬಿಡೋದು, ಈ ಕಡೆ ಬೀಳೋಕೂ ಬಿಡೋದು. ಆಸೆಗೆ ಮಣಿದು ಒಂದು ಹೆಜ್ಜೆ ಆಚೆ ಇಟ್ರೆ ನಮ್ಮ ಜವಾಬ್ದಾರಿಯಲ್ಲಿರೋ ಹತ್ತು ಬಾಯಿಗೆ ಮಣ್ಣು ಹಾಕಬೇಕಾಗುತ್ತೆ. ಯಾರಿಗೋ ಒಳ್ಳೇರಾಗೋಕೆ ಹೊರಟ್ರೆ ಇನ್ನೊಬ್ಬರಿಗೆ ಕೆಟ್ಟರಾಗಬೇಕಾಗುತ್ತೆ. ನಾವು ಪ್ರೀತ್ಸೋರ್‌ ಕಡೆ ವಾಲಿದ್ರೆ, ನಮ್ಮನ್ನು ಪ್ರೀತಿಸೋರಿಂದ ದೂರ ಆಗ್ತೀವಿ. ಬ್ಯಾಲೆನ್ಸ್‌ ಈಸ್‌ ಆರ್ಟ್‌ ಆಫ್‌ ಲಿವಿಂಗ್‌” ಎನ್ನುವ ಒಕ್ಕಣಿಯ ವೀಡಿಯೋದೊಂದಿಗೆ ನಟ, ನಿರ್ದೇಶಕ ರವಿಚಂದ್ರನ್‌ ಹೊಸವರ್ಷಕ್ಕೆ ಶುಭಾಶಯ ಕೋರಿದ್ದಾರೆ. ವೀಡಿಯೋ ಕೊನೆಗೆ ಅವರು ಹಾಕಿರುವ ‘New year Revolution – Be Yourself’ ಎನ್ನುವ ಅವರ ಸ್ಟೇಟ್‌ಮೆಂಟ್‌ ವಿಶೇಷವಾಗಿ ಗಮನಸೆಳೆಯುತ್ತದೆ. ಇತರರಿಗೆ ಹೀಗೆ ಹೇಳುತ್ತಲೇ 2022ರ ತಮ್ಮ ಸಿನಿಮಾಗಳ ಕುರಿತೂ ಅವರು ಸೂಚ್ಯವಾಗಿ ಹೇಳುತ್ತಿರುವಂತಿದೆ.

ನಟ, ನಿರ್ದೇಶಕ ರಮೇಶ್‌ ಅರವಿಂದ್‌ ಸದಾ ಚಟುವಟಿಕೆಯಿಂದಿರುವ ವ್ಯಕ್ತಿ. ಅವರು ಮೋಟಿವೇಷನಲ್‌ ಸ್ಪೀಕರ್‌ ಕೂಡ ಹೌದು. ಹೊಸ ವರ್ಷದಲ್ಲಿ ಅವರು ತಮ್ಮ ಮಾತು, ಕತೆಗಳನ್ನು ಜನರಿಗೆ ತಲುಪಿಸಲು ಹೊಸದೊಂದು App ರೂಪಿಸಲಿದ್ಧಾರೆ. ಜೊತೆಗೆ ಸಿನಿಮಾ ನಟನೆ, ನಿರ್ದೇಶನ ಜಾರಿಯಲ್ಲಿರುತ್ತದೆ. “ನಿಮ್ಮ ಬದುಕು ಅಮೋಘವಾಗಿ ಸಾಗಲಿ. ಇನ್ನೊಬ್ಬರ ಬದುಕೂ ಸಲೀಸಾಗಿ ಸಾಗಲು ಸಹಕರಿಸಿ” ಎಂದು ಅವರು ತಮ್ಮ ನಗುಮೊಗದ ಫೊಟೊದೊಂದಿಗೆ ಶುಭಾಶಯ ಟ್ವೀಟ್‌ ಮಾಡಿದ್ದಾರೆ. ನಟ ಜಗ್ಗೇಶ್‌ ಕಳೆದ ವರ್ಷದಲ್ಲಿ ತಮ್ಮ ಬದುಕು ಸಹ್ಯವಾಗಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿ ಹೊಸ ವರ್ಷ ಸ್ವಾಗತಿಸಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು, ತಂತ್ರಜ್ಞರು, ಚಿತ್ರನಿಮಾಣ ಸಂಸ್ಥೆಗಳು ವಿಶಿಷ್ಟ ರೀತಿಯಲ್ಲಿ 2022ಕ್ಕೆ ಶುಭ ಹಾರೈಸಿದ್ದಾರೆ.

Previous article‘ಲಕ್ಕಿಮ್ಯಾನ್‌’ ನೂತನ ಪೋಸ್ಟರ್‌ ಟ್ವೀಟ್‌ ಮಾಡಿದ ಕೃಷ್ಣ; ವಿಶೇಷ ಪಾತ್ರದಲ್ಲಿ ಪುನೀತ್‌
Next articleಕ್ರೈಂ ಥ್ರಿಲ್ಲರ್ ಎಲ್ಲಾ ಗುಣಗಳಿರುವ ‘ಸೇನಾಪತಿ’

LEAVE A REPLY

Connect with

Please enter your comment!
Please enter your name here