ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವಾತ್ಸವ್‌ ಇಂದು ಅಗಲಿದ್ದಾರೆ. ಆಗಸ್ಟ್‌ 10ರಂದು ಹೃದಯಾಘಾತದ ನಂತರ ಅವರು ಕೋಮಾ ಸ್ಥಿತಿಯಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.

ಕಿರುತೆರೆ ಶೋಗಳು, ಸಿನಿಮಾಗಳ ಮೂಲಕ ಚಿರಪರಿಚಿತರಾಗಿದ್ದ ಹಾಸ್ಯ ಕಲಾವಿದ ರಾಜು ಶ್ರೀವಾತ್ಸವ್‌ (58 ವರ್ಷ) ಇನ್ನಿಲ್ಲ. ಆಗಸ್ಟ್‌ 10ರಂದು ಅವರಿಗೆ ಹೃದಯಾಘಾತವಾದ ಸಂದರ್ಭದಲ್ಲಿ ಮೆದುಳಿಗೆ ಘಾಸಿಯಾಗಿತ್ತು. ದಿಲ್ಲಿಯ AIIMS ನಲ್ಲಿ ಅವರಿಗೆ ಚಿಕಿತ್ಸೆ ನಡೆದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅಸುನೀಗಿದ್ದಾರೆ. ದಿ ಗ್ರೇಟ್‌ ಇಂಡಿಯನ್‌ ಲಾಫ್ಟರ್‌ ಚಾಲೆಂಜ್‌, ಕಾಮಿಡಿ ಸರ್ಕಸ್‌, ದಿ ಕಪಿಲ್‌ ಶರ್ಮಾ ಶೋ, ಶಕ್ತಿಮಾನ್‌ ಸೇರಿದಂತೆ ಹಲವು ಶೋಗಳ ಮೂಲಕ ರಾಜು ಜನರಿಗೆ ಚಿರಪರಿಚಿತರಾಗಿದ್ದರು. ಮೈನೆ ಪ್ಯಾರ್‌ ಕಿಯಾ, ತೇಜಾಬ್‌, ಬಾಜಿಗಾರ್‌ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಇತ್ತೀಚೆಗೆ India’s laughter Champion ಶೋನಲ್ಲಿ ವಿಶೇಷ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

LEAVE A REPLY

Connect with

Please enter your comment!
Please enter your name here