ಹಿಂದಿ ಸಿನಿಮಾ ಹಾಗೂ ಕಿರುತೆರೆ ನಟ ಅಖಿಲ್‌ ಮಿಶ್ರಾ (58 ವರ್ಷ) ನಿಧನರಾಗಿದ್ದಾರೆ. ಜನಪ್ರಿಯ ‘3 ಈಡಿಯಟ್ಸ್‌’ ಸಿನಿಮಾ ಸೇರಿದಂತೆ ಹಲವು ಹಿಂದಿ ಚಿತ್ರಗಳು ಹಾಗೂ ಹಿಂದಿ ಕಿರುತೆರೆ ಸರಣಿಗಳಲ್ಲಿ ಅವರು ಅಭಿನಯಿಸಿದ್ದರು.

ಅಮೀರ್‌ ಖಾನ್‌ ನಟನೆಯ ‘3 ಈಡಿಯಟ್ಸ್‌’ ಸಿನಿಮಾ, ‘ಉತ್ತರನ್‌’ ಹಿಂದಿ ಸರಣಿ ಖ್ಯಾತಿಯ ನಟ ಅಖಿಲ್‌ ಮಿಶ್ರಾ (58 ವರ್ಷ) ಅಗಲಿದ್ದಾರೆ. ಅಡುಗೆ ಮನೆಯಲ್ಲಿ ಸ್ಟೂಲ್‌ ಮೇಲೆ ನಿಂತಿದ್ದ ಅವರು ಕೆಳಗೆ ಜಾರಿ ಬಿದ್ದಿದ್ದಾರೆ. ತಲೆಗೆ ಏಟು ಬಿದ್ದು ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಅವರು ಅಧಿಕ ರಕ್ತದೊತ್ತಡ ಸೇರಿದಂತೆ ಇನ್ನಿತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬದ ಮೂಲಗಳು ಹೇಳುತ್ತವೆ. ‘3 ಈಡಿಯಟ್ಸ್‌’ ಹಿಂದಿ ಚಿತ್ರದಲ್ಲಿ ‘ಲೈಬ್ರೆರಿಯನ್‌ ದುಬೆ’ ಪಾತ್ರದಲ್ಲಿ ಅವರು ಚಿತ್ರಪ್ರೇಮಿಗಳಿಗೆ ಹೆಚ್ಚು ಪರಿಚಿತರಾಗಿದ್ದರು. ಹಝಾರೋ ಖ್ವಾಶೇ ಐಸಿ, ವೆಲ್‌ ಡನ್‌ ಅಬ್ಬಾ, ಕೊಲ್ಕೊತ್ತಾ ಮೇಲ್‌, ಡಾನ್‌… ಅವರು ನಟಿಸಿರುವ ಕೆಲವು ಹಿಂದಿ ಸಿನಿಮಾಗಳು. ದೋ ದಿಲ್‌ ಬಾಂಧೆ ಎಕ್‌ ದೋರಿ ಸೇ, ಉತ್ತರನ್‌, ಪರ್ದೇಸ್‌ ಮೇ ಮಿಲಾ ಕೋಯೀ ಅಪ್ನಾ, ಶ್ರೀಮಾನ್‌ ಶ್ರೀಮತಿ ಹಿಂದಿ ಸರಣಿಗಳಲ್ಲಿ ವೀಕ್ಷಕರು ಅವರ ಪಾತ್ರಗಳನ್ನು ಮೆಚ್ಚಿದ್ದರು. ಜರ್ಮನ್‌ ಮೂಲದ ಅವರ ಪತ್ನಿ Suzanne Bernert ಕೂಡ ನಟಿ. ಅಖಿಲ್‌ ಮಿಶ್ರಾ ಅವರ ನಿಧನಕ್ಕೆ ಬಾಲಿವುಡ್‌ ಹಾಗೂ ಹಿಂದಿ ಕಿರುತೆರೆಯ ಹಲವು ಕಲಾವಿದರು ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here