ರಾಜೇಶ್‌ ಕೃಷ್ಣನ್‌ ನಿರ್ದೇಶನದ ‘Crew’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಕರೀನಾ ಕಪೂರ್‌, ತಬು ಮತ್ತು ಕೃತಿ ಸನೂನ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಸಿನಿಮಾ ಇದೇ ಮಾರ್ಚ್‌ 29ರಂದು ತೆರೆಗೆ ಬರಲಿದೆ.

ಕರೀನಾ ಕಪೂರ್ ಖಾನ್, ತಬು ಮತ್ತು ಕೃತಿ ಸನೂನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲೊಂದಾದ ‘ಕ್ರ್ಯೂ’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಸಿನಿಮಾವನ್ನು ರಾಜೇಶ್ ಕೃಷ್ಣನ್ ನಿರ್ದೇಶಿಸಿದ್ದಾರೆ. ಈ ಕುರಿತು ಕರಿನಾ ಕಪೂರ್‌ ಖಾನ್‌ ಅವರು, ‘ನನಗೆ ಮೊದಲ ಬಾರಿಗೆ ತಬು ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಸಂತಸವಾಗಿದೆ. ಪ್ರತಿಭಾವಂತ ಮತ್ತು ಸುಂದರ ನಟಿ ಕೃತಿ ಸನೂನ್ ಅವರೊಂದಿಗೆ ತೆರೆಹಂಚಿಕೊಳ್ಳುವ ಅವಕಾಶವೂ ದೊರೆತಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ. ಚಿತ್ರದ ಟ್ರೇಲರ್‌ ಮೂವರು ಗಗನ ಸಖಿಯರ ಪಯಣದ ಕುರಿತು ಹೇಳಿದೆ.

ಹಾಸ್ಯ ಮತ್ತು ಲವಲವಿಕೆಯಿಂದ ಕೂಡಿರುವ ಈ ಮೂವರು ಗಗನಸಖಿಯರು ವಿಮಾನದಲ್ಲಿ ತಾವು ನಿರ್ವಹಿಸುವ ಪ್ರತಿ ಕೆಲಸದಲ್ಲೂ ತರಲೆ, ತುಂಟಾಟ ಮಾಡಿಕೊಂಡು ಪ್ರಯಾಣಿಕರೊಂದಿಗೆ ಹಾಸ್ಯದಿಂದ ಸಮಯ ಕಳೆಯುತ್ತಿರುವುದನ್ನು ಕಾಣಬಹುದು. ಪ್ರಯಾಣಿಕರೊಬ್ಬರ ಬಳಿ ಇರುವ ಗೋಲ್ಡ್‌ ಬಿಸ್ಕೇಟ್‌ ಅವರನ್ನು ಸಂಕಟಕ್ಕೆ ಸಿಲುಕಿಸುತ್ತದೆ. ಇದರಿಂದ ಅವರು ಯಾವ ರೀತಿ ಪಾರಾಗುತ್ತಾರೆ ಎನ್ನುವುದು ಕಥಾವಸ್ತು. ದಿಲ್ಜಿತ್ ದೋಸಾಂಜ್ ಮತ್ತು ಕಪಿಲ್ ಶರ್ಮಾ ಅವರು ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು Balaji Motion Pictures ಬ್ಯಾನರ್‌ ಅಡಿಯಲ್ಲಿ ಏಕ್ತಾ ಆರ್ ಕಪೂರ್ ಮತ್ತು ರಿಯಾ ಕಪೂರ್ ನಿರ್ಮಿಸಿದ್ದಾರೆ. ಮಾರ್ಚ್‌ 29ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here