ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು KCC ಪಂದ್ಯದ ವೇಳೆ ಧನಂಜಯ ಅಭಿನಯದ ‘ಹೊಯ್ಸಳ’ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಯ್ತು. ಸಂತೋಷ್‌ ಆನಂದರಾಮ್‌ ರಚನೆಯ ಈ ಗೀತೆಯನ್ನು ನಕಾಶ್‌ ಅಜೀಜ್‌ ಹಾಡಿದ್ದಾರೆ. ಸಂಗೀತ ಸಂಯೋಜನೆ ಅಜನೀಶ್‌ ಲೋಕನಾಥ್‌.

ನಟ ಧನಂಜಯ ಅಭಿನಯದ 25ನೇ ಸಿನಿಮಾ ‘ಹೊಯ್ಸಳ’ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿದೆ. ಇಂದು KCC ಪಂದ್ಯದ ವೇಳೆ ಈ ಹಾಡು ಬಿಡುಗಡೆಯಾಗಿದ್ದು ವಿಶೇಷ. ಪಂದ್ಯದ ವೇಳೆ ಮೊದಲ ಬಾರಿ ಈ ಹಾಡಿನ ಸದ್ದು ಕೇಳುತ್ತಿದ್ದಂತೆ ಕ್ರೀಡಾಂಗಣದಲ್ಲಿ ಸಂಚಲನ ಉಂಟಾಯ್ತು. ಚಿತ್ರನಿರ್ದೇಶಕ ಸಂತೋಷ್‌ ಆನಂದರಾಮ್‌ ರಚನೆಯ ಗೀತೆಯಲ್ಲಿ ಚಿತ್ರದ ಹೀರೋನ ವ್ಯಕ್ತಿತ್ವ ಅನಾವರಣಗೊಂಡಿದೆ. ಮಾಸ್‌ ಸಿನಿಮಾಗೆ ಬೇಕಾದ ಸಾಲುಗಳಿಗೆ ಅಜನೀಶ್‌
ಲೋಕನಾಥ್‌ ಸಂಗೀತ ಸಂಯೋಜಿಸಿದ್ದು, ನಕಾಶ್‌ ಅಜೀಜ್‌ ಹಾಡಿದ್ದಾರೆ. Rap ಗೆ ಯೋಗಿ ಬಿ ಧ್ವನಿಯಾಗಿದ್ದಾರೆ. ಧನಂಜಯ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಈ ಹಾಡನ್ನು ಹಂಚಿಕೊಂಡು ಅಭಿನಂದಿಸಿದ್ದಾರೆ. ಸಾಕಷ್ಟು ಸದ್ದು ಮಾಡುತ್ತಿರುವ ಸಿನಿಮಾ ಮಾರ್ಚ್‌ 30ರಂದು ಬಿಡುಗಡೆಯಾಗಲಿದೆ. KRG ಸ್ಟುಡಿಯೋಸ್‌ನಡಿ ಕಾರ್ತೀಕ್‌ ಗೌಡ ಮತ್ತು ಯೋಗಿ ಜಿ. ರಾಜ್‌ ನಿರ್ಮಿಸಿರುವ ಚಿತ್ರದ ನಾಯಕಿ ಅಮೃತಾ ಅಯ್ಯಂಗಾರ್‌. ವಿಜಯ್‌ ಎನ್‌. ಚಿತ್ರದ ನಿರ್ದೇಶಕರು. ಅಚ್ಯುತಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಮುಂತಾದವರು ತಾರಾಬಳಗದಲ್ಲಿದ್ದಾರೆ.

Previous articleದಲಿತ ಕಣ್ಣೋಟದ ಉತ್ತಮ ಪ್ರಯತ್ನ ‘ಪಾಲಾರ್‌’
Next articleನಿರೂಪಣೆಗೆ ಹೊಸ ಭಾಷೆ ಮತ್ತು ಲಯ

LEAVE A REPLY

Connect with

Please enter your comment!
Please enter your name here